ಚಿಕ್ಕಬಳ್ಳಾಪುರ: ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿರುವ ಹುಸ್ಸೇನಿಯಾ ಮಸೀದಿ, ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವ್ಯಾಪ್ತಿ ಯಿಂದ ಶಿಡ್ಲಘಟ್ಟ ರಸ್ತೆಯ ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯವರೆಗೆ ವಿಶಾಲ ವಿಸ್ತರಣೆ ಹೊಂದಿರುವ ಎಲೆಪೇಟೆ ಪಶ್ಚಿಮ ವಾರ್ಡ್ ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರಮುಖ ವೃತ್ತವಾಗಿರುವ ಶಿಡ್ಲಘಟ್ಟ ವೃತ್ತದಲ್ಲಿ ಬಹುತೇಕ ವಾಹನಗಳು ಸಂಚರಿಸುತ್ತವೆ.

ಅತಿ ಹೆಚ್ಚಿನ ಮಿಲ್ಟ್ರಿ ಮಾಂಸಾಹಾರಿ ಹೋಟೆಲ್ಗಳು ಈ ವಾರ್ಡ್ನಲ್ಲಿದ್ದು, ಚಾಹ ಅಂಗಡಿಗಳೂ ಸಹ ಅಷ್ಟೇ ಪ್ರಮಾಣದಲ್ಲಿವೆ. ಹೆಚ್ಚಿನ ವಾಹನ ಸಂಚಾರ ಮತ್ತು ಜನಸಂಚಾರ ಹೊಂದಿರುವ ಈ ಪ್ರದೇಶದಲ್ಲಿ ಬೆಸ್ಕಾಂ ಕಚೇರಿ, ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆ, ಪುರಾತನ ಕಟ್ಟಡಗಳಿವೆ. ಕಿರಿದಾದ ಹದಗೆಟ್ಟ ರಸ್ತೆಗಳನ್ನೂ ಸಹ ಹೊಂದಿರುವ ಈ ವಾರ್ಡ್ ನೀರು ಸೇರಿದಂತೆ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ.

ಎಲೆಪೇಟೆ ಪಶ್ಚಿಮ ವಾರ್ಡ್ಗೆ ಪ್ರತ್ಯೇಕ ಕೊಳವೆಬಾವಿ ಸೌಕರ್ಯ ಇರದ ಕಾರಣ 31ನೇ ವಾರ್ಡ್, 23ನೇ ವಾರ್ಡ್, 28ನೇ ವಾರ್ಡ್ ಮತ್ತು ಹೊಸಕೆರೆ ಬಡಾವಣೆಯಿಂದ ಉಪ್ಪು ನೀರು ಪೂರೈಕೆ ಮಾಡಲಾಗುತ್ತದೆ. ಸಿಹಿ ನೀರನ್ನು 15 ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದ್ದು, ಒಂದು ಅಥವಾ ಎರಡು ಗಂಟೆ ಅವಧಿ ಮಾತ್ರ ಪೂರೈಸಲಾಗುತ್ತದೆ. ರೈಲ್ವೆ ನಿಲ್ದಾಣ ರಸ್ತೆ, ಚಾಮರಾಜಪೇಟೆಯ ಅಡ್ಡರಸ್ತೆಗಳು ಮುಂತಾದವು ಹೊಂದಿಕೊಂಡಂತೆ ಇರುವ ಈ ವಾರ್ಡ್ನಲ್ಲಿ ಬಹುತೇಕ ರಸ್ತೆಗಳು ಡಾಂಬರೀಕರಣ ಕಂಡಿಲ್ಲ.

`ಕುಡಿಯುವ ನೀರು ಮತ್ತು ಬೀದಿ ದೀಪಗಳ ಸಮಸ್ಯೆ ಹಲವು ತಿಂಗಳಿದ್ದರೂ ಈವೆರೆಗೆ ಪರಿಹಾರಗೊಂಡಿಲ್ಲ. ಹದಿನೈದು ದಿನಗಳಿಗೊಮ್ಮೆ ಮಾತ್ರವೇ ಸಿಹಿನೀರು ಪೂರೈಸಲಾಗುವ ಕಾರಣ ನಾವು ಸಣ್ಣಪುಟ್ಟ ಪಾತ್ರೆ, ಪರಿಕರಗಳಲ್ಲಿ ನೀರನ್ನು ತುಂಬಿಟ್ಟುಕೊಳ್ಳಬೇಕು. ನೀರು ತುಂಬಿಸಿಕೊಳ್ಳಲು ಹರಸಾಹಸ ಪಡಬೇಕು. ರಾತ್ರಿ ವೇಳೆಯಂತೂ ಇಲ್ಲಿ ಸಂಚರಿಸಲು ಭಯವಾಗುತ್ತದೆ. ಅಲ್ಲಲ್ಲಿ ತಿಪ್ಪೆಗುಂಡಿಗಳಿರುವ ಕಾರಣ ನಾಯಿಗಳು ಅಲ್ಲೇ ವಾಸವಿರುತ್ತವೆ. ಕತ್ತಲಲ್ಲಿ ನಡೆದುಕೊಂಡು ಹೋಗುವಾಗ, ನಾಯಿ ಯಾವ ಕಡೆಯಿಂದ ದಾಳಿ ಮಾಡಿ ಕಚ್ಚುತ್ತೋ ಗೊತ್ತಾಗುವುದಿಲ್ಲ~ ಎಂದು ಸಾರ್ವಜನಿಕರು ಹೇಳುತ್ತಾರೆ.

ಶಿಡ್ಲಘಟ್ಟ ರಸ್ತೆಯು ಈ ವಾರ್ಡ್ನ ಪ್ರಮುಖ ರಸ್ತೆಗಳಲ್ಲಿ ಒಂದಾಗಿದ್ದು, ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ಪ್ರಮುಖ ಊರುಗಳಿಗೆ ಬಹುತೇಕ ವಾಹನಗಳು ಈ ರಸ್ತೆ ಮೂಲಕವೇ ಸಂಚರಿಸುತ್ತವೆ. ಆದರೆ ಈ ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗವಿಲ್ಲ. ಚರಂಡಿ ವ್ಯವಸ್ಥೆಯೂ ಇಲ್ಲ. ಎರಡೂ ಬದಿಗಳಲ್ಲಿ ಮಣ್ಣಿನಿಂದ ಕೂಡಿರುವ ಈ ರಸ್ತೆಯಲ್ಲಿ ಪಾದಚಾರಿಗಳು ಬಹು ಎಚ್ಚರಿಕೆಯಿಂದ ನಡೆದಾಡಬೇಕು. ಅಲ್ಲಲ್ಲೇ ನಿಲುಗಡೆ ಮಾಡಲಾಗಿರುವ ವಾಹನಗಳನ್ನು ದಾಟಿಕೊಂಡು, ದೂಳು ಸಹಿಸಿಕೊಂಡು ಮತ್ತು ಅಪಘಾತಕ್ಕೀಡಾಗದಂತೆ ಜಾಗರೂಕತೆ ವಹಿಸಿ ಒಂದೊಂದೇ ಹೆಜ್ಜೆಯಿಡಬೇಕು.

`ಮಳೆ ಬಂದರಂತೂ ಶಿಡ್ಲಘಟ್ಟ ರಸ್ತೆಯಲ್ಲಿ ನಡೆದಾಡುವುದೇ ಕಷ್ಟವಾಗುತ್ತದೆ. ರಸ್ತೆಬದಿಗಳು ಕೆಸರುಮಯಗೊಂಡು ಜಾರಿ ಬೀಳುವ ಭಯ ಕಾಡುತ್ತದೆ. ಮನ ಬಂದ ಕಡೆ ವಾಹನಗಳನ್ನು ನಿಲುಗಡೆ ಮಾಡಲಾಗುವ ಕಾರಣ ನಿತ್ಯವೂ ತೊಂದರೆಯಾಗುತ್ತದೆ. ಪಾದಾಚರಿಗಳಿಗೆಂದೇ ಪ್ರತ್ಯೇಕ ಪಾದಚಾರಿ ಮಾರ್ಗವನ್ನು ಮಾಡಲಾಗಿಲ್ಲ. ಮಳೆ ನೀರು ಮತ್ತು ಕೆಸರು ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿಲ್ಲ~ ಎಂದು ಶಿಡ್ಲಘಟ್ಟ ರಸ್ತೆ ಸಮೀಪದ ನಿವಾಸಿ ರಾಮಯ್ಯ ತಿಳಿಸಿದರು.

`ತ್ಯಾಜ್ಯವಸ್ತುಗಳನ್ನು ಮತ್ತು ಕಸ ಚೆಲ್ಲಲು ರಸ್ತೆಬದಿಯಲ್ಲಿ ಇಡಲಾಗಿದ್ದ ಹಳದಿ ಬಣ್ಣದ ಕಸದ ತೊಟ್ಟಿಯನ್ನು ನಗರಸಭೆಯವರು ಏಕಾಏಕಿ ವಾಹನದಲ್ಲಿ ಹಾಕಿಕೊಂಡು ಒಯ್ದು ಬಿಟ್ಟರು. ಮನೆಮನೆಗೆ ಸಿಬ್ಬಂದಿಯೊಬ್ಬ ಬಂದು ಕಸವನ್ನು ಒಯ್ಯುತ್ತಾನೆ ಎಂದು ಹೇಳಲಾಯಿತು. ನೆನಪಾದಾಗ ಮಾತ್ರವೇ ಬರುವ ಆತ ಪ್ರತಿ ದಿನ ಬರುವುದಿಲ್ಲ. ಬೇರೆ ಮಾರ್ಗವಿಲ್ಲದೇ ನಾವು ಕಸ, ತ್ಯಾಜ್ಯವನ್ನು ಸಮೀಪದಲ್ಲೇ ರಸ್ತೆಬದಿಗಳಲ್ಲಿ ಎಸೆಯುತ್ತೇವೆ. ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ಬರುವ ನಗರಸಭೆ ಸಿಬ್ಬಂದಿ ತ್ಯಾಜ್ಯ ವನ್ನು ವಾಹನದಲ್ಲಿ ಹಾಕಿಕೊಂಡು ಹೋಗು ತ್ತಾರೆ~ ಎಂದು ನಿವಾಸಿ ಸುಜಾತಾ ತಿಳಿಸಿದರು.

`ಶಿಡ್ಲಘಟ್ಟ ರಸ್ತೆ ಆರಂಭದ ಎರಡೂ ಬದಿಗಳಲ್ಲಿ ಚರಂಡಿ ಇತ್ತು. ಒಂದು ಬದಿಯ ಚರಂಡಿಯನ್ನು ಮಳಿಗೆದಾರರು ಮುಚ್ಚಿ ಹಾಕಿದರೆ, ಮತ್ತೊಂದು ಬದಿಯ ಚರಂಡಿಯನ್ನು ಆಟೊರಿಕ್ಷಾ ನಿಲ್ದಾಣಕ್ಕಾಗಿ ಮುಚ್ಚಲಾಯಿತು. ಹೀಗಾಗಿಯೇ ಮಳೆನೀರು ಮತ್ತು ಚರಂಡಿ ನೀರು ಸರಿಯಾಗಿ ಹರಿಯಲು ಸ್ಥಳಾವಕಾಶವೇ ಇಲ್ಲ~ ಎಂದು ಸಾರ್ವಜನಿಕರು ಹೇಳಿದರು.

`ನಗರಸಭೆಯಿಂದ ಸಿಗದ ಸಹಕಾರ~
ಜೆಡಿಎಸ್ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿರುವ ಅನುಸೂಯಾ ನಾಗರಾಜ ಅವರು ನಗರಸಭೆ ಅಧಿಕಾರಿ ಗಳಿಂದ ಮತ್ತು ಆಡಳಿತ ಪಕ್ಷ ದಿಂದ ಸಹಕಾರ ಸಿಗುತ್ತಿಲ್ಲ ಎಂದು ದೂರುತ್ತಾರೆ.

ರಸ್ತೆ, ಚರಂಡಿ ಕಾಮಗಾರಿ ಮುಂತಾದವುಗ ಳನ್ನು ಕೈಗೊಳ್ಳುವ ಉದ್ದೇಶವಿದ್ದರೂ ಸಕಾಲಕ್ಕೆ ಅನುದಾನ ಸಿಗುತ್ತಿಲ್ಲ. ಹೀಗಾಗಿಯೇ ಅಭಿವೃದ್ಧಿ ಕಾರ್ಯ ಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ.

`ಕಳೆದ ವರ್ಷ ದೊರೆತ 25 ಲಕ್ಷ ರೂಪಾಯಿ ಅನುದಾನದಲ್ಲಿ ಕೆಲ ಕಡೆ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲು ಸಾಧ್ಯ ವಾಯಿತು. ಆದರೆ ಈ ವರ್ಷ ಅನುದಾನ ಬಿಡುಗಡೆ ಯಾಗಿಲ್ಲ.

ಕಾಮಗಾರಿ ಕೈಗೊಳ್ಳಲು ಅನು ಮತಿಯೂ ದೊರೆತಿಲ್ಲ. ಕೊಳವೆ ಬಾವಿ ಕೊರೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ. ಬೀದಿ ದೀಪ ಗಳನ್ನು ಅಳವಡಿಸಲು ಮತ್ತು ರಸ್ತೆಗೆ ಡಾಂಬರೀಕರಣ ಕೈಗೊಳ್ಳಲು ಅನುದಾನ ಮಂಜೂರಾಗಿಲ್ಲ. ನಗರಸಭಾ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರ ಅಸಹಕಾರದಿಂದಲೇ ಅಭಿವೃದ್ದಿ ಕುಂಠಿತವಾಗುತ್ತಿದೆ~ ಎಂದು ಅವರು ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.