ಗುರುವಾರ , ಮೇ 19, 2022
21 °C

ಅಭಿವೃದ್ಧಿಗೆ ಜನತೆಯ ಸಹಭಾಗಿತ್ವ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಜನತೆಯ ಸಹಕಾರ ಮತ್ತು ಸಹಭಾಗಿತ್ವವಿದ್ದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಪುರಸಭಾಧ್ಯಕ್ಷೆ ಕಮಲಾ ಆನಂದ್ ಹೇಳಿದರು.ಪುತ್ತೂರು ಪುರಸಭಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ ನೈತಾಡಿ ವ್ಯಾಪ್ತಿಯಲ್ಲಿ ಪುರಸಭಾ ವತಿಯಿಂದ ಅಳವಡಿಸಲಾದ ದಾರಿ ದೀಪ ವ್ಯವಸ್ಥೆಯನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.ಸ್ಥಳೀಯ ಸದಸ್ಯರಾದ ಪುರಸಭಾ ವಿಪಕ್ಷ ನಾಯಕ ಎಚ್, ಮಹಮ್ಮದ್ ಆಲಿ ಅವರು ಮಾತನಾಡಿ ಕೆಮ್ಮಿಂಜೆ ವಾರ್ಡಿನಲ್ಲಿ ಪುರಸಭಾ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಸದಸ್ಯರಾದ ಲ್ಯಾನ್ಸಿ ಮಸ್ಕರೇನ್ಹಸ್ , ಉಷಾ ಬಾಲಕೃಷ್ಣ , ಅನ್ವರ್ ಖಾಸಿಂ , ಮುಖ್ಯಾಧಿಕಾರಿ ಸುಧಾಕರ್, ಸ್ಥಳಿಯ ಪ್ರಮುಖರಾದ ವಿಶ್ವನಾಥ ಟೈಲರ್ , ಜಾನ್ ಪಿರೇರಾ, ದಿಲೀಪ್ ಕುಮಾರ್ , ಅಬ್ದುಲ್ ಕುಂಞಿ , ಚೇತನ್, ರಫೀಕ್ ಮೊಟ್ಟೆತ್ತಡ್ಕ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.