ಸಾವಯವ ಅಥವಾ ಸಂಪತ್ತಿನ ಕುರಿತು ಬರೆಯುವುದರಲ್ಲಿ ವಿಶೇಷವೇನೂ ಇಲ್ಲ. ಪರಿಸರದಲ್ಲಿ ಇರುವ ಸಂಗತಿಗಳನ್ನು ಕುರಿತು ಕೆಲ ವಿಷಯಗಳನ್ನು ಹಂಚಿಕೊಳ್ಳುತ್ತೇನೆ. ಇಲ್ಲಿ ಹೊರಗಿನಿಂದ ತರುವಂಥದ್ದು ಏನೂ ಇಲ್ಲ. ನಮ್ಮ ಅಗತ್ಯಕ್ಕೆ ಅನುಗುಣವಾಗಿ ದೈಹಿಕ ಸಾಮರ್ಥ್ಯವನ್ನೂ, ಪ್ರಾಕೃತಿಕ ಲಭ್ಯತೆಯನ್ನೂ ನಿರ್ದೇಶಿಸಿರುವ ಜಗತ್ತಿನಲ್ಲಿ ಆಮದು ಅಥವಾ ರಫ್ತು (ಈಗಿರುವ ಸ್ಥಿತಿಯಲ್ಲಿ) ಅಗತ್ಯವೇ ಇಲ್ಲ. ನಮಗೆ ಬೇಕಾದ್ದೆಲ್ಲವೂ ನಮ್ಮ ಪ್ರಕೃತಿಯಲ್ಲಿ ಧಾರಾಳವಾಗಿ ಇದೆ. ತಂಬಿಗೆಯಲ್ಲೋ, ಬಿಂದಿಗೆಯಲ್ಲೋ ಮೊಗೆದು ಕೊಳ್ಳಬೇಕಷ್ಟೆ. ಇದು ಬಹಳ ಸುಲಭ. ಅವರವರ ರಟ್ಟೆಯ ಸಾಮರ್ಥ್ಯಕ್ಕೂ, ಹೊಟ್ಟೆಯ ಅಗತ್ಯಕ್ಕೂ ಬಿಂದಿಗೆಯ ಮಿತಿಗೂ ಅನ್ಯೋನ್ಯ ಸಂಬಂಧ ಇದೆ.

ಅಲ್ಲಿ ನೀರಿನ ಹಳ್ಳ ತುಂಬಿದೆ. ಪಕ್ಕದಲ್ಲಿ ನಾವಿದ್ದೇವೆ. ಬಾಯಾರಿದ್ದೇವೆ. ಈಗೇನು ಮಾಡಬೇಕೆಂದು ಯಾರಾದರೂ ಹೇಳುವ ಅಗತ್ಯವಿದೆಯೇ? ಎರಡೂ ಕೈ ಜೋಡಿಸಿ ನೀರು ಮೊಗೆದು ಬಾಯಿಗೆ ಸುರಿದುಕೊಳ್ಳಲು ತರಬೇತಿ ಬೇಕೆ?

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ವೈರಿಗಳಿಂದ ನಾವು ಸುತ್ತುವರಿದಿದ್ದರೂ ಎಲ್ಲ ಜೀವಿಗಳೂ ಬದುಕುವುದು ಹೀಗೇ. ಪ್ರಾಕೃತಿಕವಾಗಿ, ಸ್ವಂತ ಸಾಮರ್ಥ್ಯದ ಮೇಲೆಯೇ. ಹೀಗಾಗಿ ಅವುಗಳಿಗೆ ಸಮಸ್ಯೆಗಳಿಲ್ಲ. ಅವುಗಳಿಗೆ ಯಾವುದೇ ಸಂಗ್ರಹದ, ಸಾಹಿತ್ಯದ, ಕಾನೂನಿನ ಅಗತ್ಯ ಇಲ್ಲ. ಅವು ಪ್ರಕೃತಿಯ ಕಾನೂನುಗಳನ್ನು ಮನ್ನಿಸಬಲ್ಲವು. ಪ್ರಕೃತಿಯ ಭಾಷೆಯನ್ನು ಓದಬಲ್ಲವು. ಸಂಗ್ರಹವಿಲ್ಲದೆ ಸಂಭ್ರಮಿಸಬಲ್ಲವು.

ಅದೃಷ್ಟವೋ ದುರದೃಷ್ಟವೋ ಅಥವಾ ಪ್ರಕೃತಿಯ ನಿಯಮವೋ, ಪ್ರಯೋಗವೋ ಅಂತೂ ಮನುಷ್ಯನಿಗೆ ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ಕೈ, ಕಾಲು ಮತ್ತು ತಲೆಗಳೆಂಬ ವಿಶೇಷ ಆವಯವಗಳು ಇರುವುದರಿಂದ ಅರಿಷಡ್ವರ್ಗಗಳು ಅವನಲ್ಲಿ ವಿಪರೀತ ಪರಿಣಾಮ ಮಾಡಿದ್ದಂತೂ ಸತ್ಯ. ಪರಿಣಾಮವಾಗಿ ಬಾಯಾರಿದಾಗ ನೀರು ಹೀರಲು ಬೊಗಸೆ ಸಾಲದಾಯಿತು. ಬಿಂದಿಗೆ ಬೇಕಾಯಿತು.

ಬಿಂದಿಗೆ ತಯಾರಿಯೂ ಸುಲಭ. ನಿರ್ವಹಣೆಯೂ ಸುಲಭ. ಅತ್ತ ಲೋಹವಾಗಲೀ, ಇತ್ತ ನೀರಾಗಲೀ ಎತ್ತಿದರೂ ಎತ್ತಿದಂತಿರುವುದಿಲ್ಲ. ಎತ್ತುವ ರಟ್ಟೆಗೂ ಶ್ರಮವಿಲ್ಲ. ಆದರೆ ಬಿಂದಿಗೆಯ ಮಿತಿ ಮೀರಿ ಕೊಪ್ಪರಿಗೆಯೋ, ತೊಟ್ಟಿಗಳಿಗೋ ಉತ್ಕ್ರಮಣಗೊಂಡ ದೆಸೆಯಿಂದ, ಇಂದು ಅತ್ತ ಲೋಹದ ಕೊರತೆ. ಎಲ್ಲೆಲ್ಲೂ ಯಂತ್ರಗಳ ಮೊರೆತ. ಗಣಿಗಾರಿಕೆಯ ಧೂಳು. ಇತ್ತ ಬತ್ತಿದ ಒರತೆ. ಎಲ್ಲೆಲ್ಲೂ ಅಣೆಕಟ್ಟುಗಳು, ಬಾವಿಗಳು ಆದರೂ ಬತ್ತಿಲ್ಲ ನೀರಿನ ಗೋಳು. ಬಿಂದಿಗೆ ಹೋದ ಮೇಲೆ ರಟ್ಟೆಗೇನು ಕೆಲಸ? ಎಲ್ಲದಕ್ಕೂ ವಿದ್ಯುತ್ - ಪೆಟ್ರೋಲಿನ ಪಾರುಪತ್ಯ ಹಾಗಾಗಿ ಕೆಲಸವಿಲ್ಲದ ರಟ್ಟೆಗಳಿಗೆ ಅವರಿವರನ್ನು ತಟ್ಟುವುದೇ ಕೆಲಸ.

‘ಸಾಹಿತ್ಯ’ ಎಂಬ ಶಬ್ದಕ್ಕೆ ಪರಿಕರಗಳು ಎಂಬ ಅರ್ಥವಿದೆ. ಅಂದರೆ ಒಂದು ಉದ್ದೇಶಕ್ಕಾಗಿ ಬಳಸುವ ವಸ್ತುಗಳು. ಉದಾಹರಣೆಗೆ ಪೂಜೆಗೆ ಉಪಯೋಗಿಸುವ ಹರಿವಾಣ, ಪಂಚಪಾತ್ರೆ, ಉದ್ಧರಣೆ, ದೀಪ, ನೆಣೆ ಇತ್ಯಾದಿಗಳೆಲ್ಲ ಪೂಜೆಯ ಸಾಹಿತ್ಯ. ಮಾವುಟಿ, ಗುದ್ದಲಿ, ಪಿಕ್ಕಾಸಿಗಳು ಕೃಷಿ ಸಾಹಿತ್ಯ. ಹೀಗಾಗಿ ಬೊಗಸೆಯಲ್ಲಿ ನೀರು ಕುಡಿಯುತ್ತಿದ್ದ ಪರಿಕರಗಳಿಲ್ಲದ (ಸಾಹಿತ್ಯವಿಲ್ಲದ) ಆ ದಿನಗಳಲ್ಲಿ ಮನುಷ್ಯರಿಗೆ ಪ್ರಜ್ಞೆಯನ್ನು ತುಂಬಲು ಯಾವುದೇ ಪುಸ್ತಕದ ಅಗತ್ಯ ಇರಲಿಲ್ಲ. ನೀರು ಮೊದಲಾಗಿ ಮೂಲಭೂತ ಅವಶ್ಯಕತೆಗಳ ಕೊರತೆಯೂ ಇರಲಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಈಗ ಎಲ್ಲೆಲ್ಲೂ ತುಂಬಿರುವ ಗ್ರಂಥಾಲಯಗಳೆಲ್ಲ ನಮ್ಮ ಜ್ಞಾನ ಸಂಗ್ರಹದ ಪ್ರತೀಕ ಹೇಗೋ ಹಾಗೆ ಪಾಪ ಸಂಗ್ರಹದ ಪ್ರತೀಕವೂ ಹೌದು. ಹಾಗೊಂದು ವೇಳೆ ನಮ್ಮಲ್ಲಿ ರಾಸಾಯನಿಕ ಕೃಷಿಯ ತಪ್ಪು ನಡೆಯದೇ ಇದ್ದರೆ ನಾನು ಸಾವಯವ ಕುರಿತು ಇಷ್ಟೊಂದು ಬರೆಯುವ ಅಗತ್ಯವೇ ಇರಲಿಲ್ಲ.

ಸಂಗ್ರಹ ಸಲಕರಣೆ ಸಾಹಿತ್ಯ ಹೀಗೆ ಪರಸ್ಪರ ಮೇಲಾಟಗಳು ಸೃಷ್ಟಿಸಿದ ತೊಡಕುಗಳನ್ನು ನಿವಾರಿಸಲು ಸೃಷ್ಟಿಗೊಂಡ ವೈವಿಧ್ಯಮಯ ಕಾನೂನುಗಳನ್ನು ಕೂಡ ವಿಜ್ಞಾನವೆಂದು ವ್ಯಾಖ್ಯಾನಿಸುವ ಇಂದಿನ ಸ್ಥಿತಿ ಗಂಭೀರವೇ ಸರಿ.

ಎಮ್ಮೆಗೆ ಕಾನೂನಿನ ಅಗತ್ಯ ಇಲ್ಲ. ಯಾಕೆಂದರೆ ಅದು ಹಾಲಿಗೆ ನೀರು ಬೆರೆಸಿ ಮಾರುವುದಿಲ್ಲ. ಕಾನೂನು ಬೇಕಾಗಿರುವುದು ನಮಗೆ. ಸಾಹಿತ್ಯ ಬೇಕಾಗಿರುವುದು ನಮಗೆ. ವಿಜ್ಞಾನ ಬೇಕಾಗಿರುವುದು ನಮಗೆ. ತರಬೇತಿ ಬೇಕಾಗಿರುವುದು ನಮಗೆ. ಪ್ರಕೃತಿಯ ಕಾನೂನನ್ನು ಪಾಲಿಸದವರಿಗೆ, ನಿಸರ್ಗ ಸಾಹಿತ್ಯವನ್ನು ಓದಲಾರದವರಿಗೆ, ಜೀವ ನಿರ್ಜೀವ ವೈವಿಧ್ಯಗಳಲ್ಲಿರುವ ಸುಂದರ ಸುಸಾಂಗತ್ಯವನ್ನು ಅರ್ಥೈಸಲಾಗದವರಿಗೆ, ಸ್ವಂತ ಪರಿಶ್ರಮದ ನೆಲೆ ಬೆಲೆಗಳನ್ನು ಅರಿಯದವರಿಗೆ ಅತಿಕ್ರಮಿಸುವವರಿಗೆ, ತಿರಸ್ಕರಿಸುವವರಿಗೆ.

ನನಗೆ ಸಂತೋಷ - ಈ ಪ್ರಕೃತಿಯಲ್ಲಿರುವ ಅದ್ಭುತ ಅನಂತ ಸಂಪತ್ತನ್ನು ಕಾಣುವಾಗ.
ನನಗೆ ದುಃಖ - ಇರುವ ಸಂಪತ್ತನ್ನು ಗುರುತಿಸಲಾಗದೆ ನಮ್ಮವರು ಸಂಕಟ ಪಡುವುದನ್ನು ನೋಡುವಾಗ ಈ ದುಃಖ ಹಾಗೂ ಸಂತೋಷಗಳ ಅಭಿವ್ಯಕ್ತಿಯೇ ‘ಸಾವಯವ ಸಂಪತ್ತು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.