ವಾಷಿಂಗ್ಟನ್ (ಪಿಟಿಐ): ಭಾರತ ಮೂಲದ 14 ವರ್ಷದ ಬಾಲಕಿ ಸ್ನಿಗ್ಧಾ ನಂದಿಪತಿ ಪ್ರತಿಷ್ಠಿತ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಮೊದಲಿಗಳಾಗುವ ಮೂಲಕ 2012ನೇ ಸಾಲಿನ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾಳೆ.

ಇದೇ ಸ್ಪರ್ಧೆಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನಗಳು ಕೂಡ ಭಾರತ ಮೂಲದ ವಿದ್ಯಾರ್ಥಿಗಳ ಪಾಲಾಗಿವೆ. ಈ ಮೂಲಕ ಐದು ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆಯ ಪ್ರಥಮ ಸ್ಥಾನ ಎಲ್ಲ ಬಾರಿಯೂ ಭಾರತೀಯ ಮೂಲದವರಿಗೆ ದಕ್ಕಿದಂತಾಗಿದೆ.

ಕ್ಯಾಲಿಫೋರ್ನಿಯಾದ ಸ್ಯಾಂಡಿಯಾಗೊದಲ್ಲಿ 8ನೇ ತರಗತಿ ಓದುತ್ತಿರುವ ಸ್ನಿಗ್ಧಾ ಅಂತಿಮ ಸುತ್ತಿನಲ್ಲಿ ಫ್ರೆಂಚ್ ಮೂಲದ `guetapens~ (ಇದರ ಅರ್ಥ ಹೊಂಚು ಹಾಕಿ ಬಲಿ ಬೀಳಿಸು ) ಎಂಬ ಪದಕ್ಕೆ ಸರಿಯಾದ ಇಂಗ್ಲಿಷ್ ಸ್ಪೆಲಿಂಗ್ ಹೇಳಿದಳು.

ಸ್ಪೆಲಿಂಗ್ ಚಾಂಪಿಯನ್ ಸಾಧನೆಗಾಗಿ ಸ್ನಿಗ್ಧಾಗೆ 30,000 ಡಾಲರ್ ನಗದು, ಒಂದು ಟ್ರೋಫಿ, 2500 ಡಾಲರ್ಗಳ ಒಂದು ಉಳಿತಾಯ ಬಾಂಡ್, 5000 ಡಾಲರ್ ವಿದ್ಯಾರ್ಥಿ ವೇತನ ನೀಡಲಾಗುವುದು. ಇದಲ್ಲದೇ, ಬ್ರಿಟಾನಿಕಾ ವಿಶ್ವಕೋಶ ಹಾಗೂ ಅಂತರ್ಜಾಲದ ಮೂಲಕ ಭಾಷಾ ಕೋರ್ಸ್ಗಳನ್ನು ಕಲಿಯಲು 2600 ಡಾಲರ್ ಮೊತ್ತದ ನೆರವು ನೀಡಲಾಗುವುದು.

ಫ್ಲಾರಿಡಾ ಓರ್ಲಾಂಡೋದ 14 ವರ್ಷದ ಬಾಲೆ ಸ್ತುತಿ ಮಿಶ್ರಾ ಹಾಗೂ ನ್ಯೂಯಾರ್ಕ್ನ 12 ವರ್ಷದ ಅರವಿಂದ್ ಮಹಾಂಕಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನವನ್ನು ಗಿಟ್ಟಿಸಿದರು.

ಒಟ್ಟು 278 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯ ಅಂತಿಮ ಸುತ್ತಿಗೆ 9 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.
ಸ್ನಿಗ್ಧಾಳ ಅಜ್ಜಿ ಈ ಸ್ಪರ್ಧೆಯ ಫೈನಲ್ ನೋಡುವುದಕ್ಕಾಗಿಯೇ ಭಾರತದಿಂದ ಅಮೆರಿಕಕ್ಕೆ ತೆರಳಿದ್ದರು. ಈ ಸ್ಪರ್ಧೆಯಲ್ಲಿ ಮೊದಲಿಗಳಾಗಿ ಹೊರಹೊಮ್ಮಿದರೆ ಭಾರತಕ್ಕೆ ಕರೆದುಕೊಂಡು ಹೋಗುವುದಾಗಿ ಅವರು ಮಾತು ನೀಡಿದ್ದರಂತೆ, ಹೀಗಾಗಿ ಸ್ನಿಗ್ಧಾಗೆ ಭಾರತ ಪ್ರವಾಸ ಭಾಗ್ಯವೂ ಒಲಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.