ಲಂಡನ್ (ಎಎಫ್ಪಿ/ಐಎಎನ್ಎಸ್): ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ. ಜೊತೆಗೆ ವಿಶ್ವ ದಾಖಲೆಯ ಸಂಭ್ರಮ. ಈ ಸಂತೋಷದ ಸಮಯವನ್ನು ಮರೆಯಲು ಸಾಧ್ಯವೇ? ಹಾಗಾಗಿಯೇ ಅಮೆರಿಕದ ಈಜುಪಟು ಡಾನಾ ವೊಲ್ಮರ್ ಪಾಲಿಗೆ ಇದೊಂದು ವಿಶೇಷ ಕ್ಷಣ.

ಏಕೆಂದರೆ ಅವರು ಲಂಡನ್ ಒಲಿಂಪಿಕ್ಸ್ನ ಮಹಿಳೆಯರ 100 ಮೀಟರ್ ಬಟರ್ಫ್ಲೈ ಈಜು ಸ್ಪರ್ಧೆಯಲ್ಲಿ ಭಾನುವಾರ ಚಿನ್ನದ ಪದಕ ಗೆದ್ದರು. ಅವರು ಈ ದೂರವನ್ನು ಕೇವಲ 55.98 ಸೆಕೆಂಡುಗಳಲ್ಲಿ ತಲುಪಿದರು. ಈ ಮೂಲಕ ಅವರು 2009ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವೀಡನ್ನ ಸಾರಾ ಜೊಸ್ಟ್ರೋಮ್ (56.06 ಸೆ.) ದಾಖಲೆಯನ್ನು ಅಳಿಸಿ ಹಾಕಿದರು.

`ಈ ಸಾಧನೆಯಿಂದ ನನಗೆ ತುಂಬಾ ಖುಷಿಯಾಗಿದೆ. ನಾನು ಅಂದುಕೊಂಡಂತೆ ಎಲ್ಲವೂ ನಡೆದಿದೆ. ವಿಶ್ವ ದಾಖಲೆ ಹಾಗೂ ಚಿನ್ನದ ಪದಕ ಸಾಧನೆ ಮಾಡಿದ್ದೇನೆ~ ಎಂದು ಡಾನಾ ಪ್ರತಿಕ್ರಿಯಿಸಿದ್ದಾರೆ.

ಮುಫತ್ಗೆ ಚಿನ್ನ: ಫ್ರಾನ್ಸ್ನ ಕೆಮಿಲೆ ಮುಫತ್ ಮಹಿಳೆಯರ 400 ಮೀ. ಫ್ರೀಸ್ಟೈಲ್ನಲ್ಲಿ ಈಜುವಿನಲ್ಲಿ ಚಿನ್ನದ ಪದಕ ಜಯಿಸಿದರು. ಅವರಿಗೆ ಅಮೆರಿಕದ ಅಲಿಸಾನ್ ಶಿಮಿಟ್ ಅವರಿಂದ ಕಠಿಣ ಪೈಪೋಟಿ ಎದುರಿಸಬೇಕಾಯಿತು. ಆದರೆ 4 ನಿಮಿಷ 1.45 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದರು.

ಕೆಮರಾನ್ ವಿಶ್ವದಾಖಲೆ: ದಕ್ಷಿಣ ಆಫ್ರಿಕಾದ ಕೆಮರಾನ್ ವಾನ್ ಡೆರ್ ಬರ್ಗ್ ಪುರುಷರ 100 ಮೀ. ಬ್ರೆಸ್ಟ್ಸ್ಟ್ರೋಕ್ ಈಜುವಿನಲ್ಲಿ ವಿಶ್ವದಾಖಲೆಯ ಸಾಧನೆ ಮಾಡಿದರು. ಅವರು ಈ ಗುರಿಯನ್ನು 58. 46 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದರು.

ಅವರು ಈ ಪದಕವನ್ನು ತಮ್ಮ ತರಬೇತಿ ಜೊತೆಗಾರ ನಾರ್ವೆಯ ಅಲೆಕ್ಸಾಂಡರ್ ಡೇಲ್ಗೆ ಅರ್ಪಿಸಿದರು. ಅಲೆಕ್ಸಾಂಡರ್ ಏಪ್ರಿಲ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.