ನ್ಯೂಯಾರ್ಕ್ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ರೋಜರ್ ಫೆಡರರ್ ಹಾಗೂ ಕ್ಯಾರೊಲಿನ್ ವೊಜ್ನಿಯಾಕಿ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಉತ್ತಮ ಪ್ರದರ್ಶನ ನೀಡುತ್ತಿರುವ ಸ್ವಿಟ್ಜರ್ಲೆಂಡ್ನ ಮೂರನೇ ಶ್ರೇಯಾಂಕದ ರೋಜರ್ ಫೆಡರರ್ ಶನಿವಾರ ರಾತ್ರಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ 6-3, 4-6, 6-4, 6-2ರಲ್ಲಿ ಕ್ರೊಯೇಷ್ಯಾದ ಮರಿನ್ ಸಿಲಿಕ್ ಅವರನ್ನು ಸೋಲಿಸಿದರು.

ಎರಡು ಗಂಟೆ 40 ನಿಮಿಷಗಳ ಕಾಲ ನಡೆದ ಹೋರಾಟದ ಬಳಿಕ ಫೆಡರರ್ ಗೆಲುವು ಪಡೆದರು. `ಇಂದಿನ ಪಂದ್ಯದಲ್ಲಿ ಭಾರಿ ಸವಾಲು ಎದುರಾಯಿತು. ಆದರೂ ವಿಶ್ವಾಸದಿಂದ ಆಡಿದೆ~ ಎಂದು ಅವರು ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಪುರುಷರ ವಿಭಾಗದ ಸಿಂಗಲ್ಸ್ನ ಪಂದ್ಯದಲ್ಲಿ ಒಂಬತ್ತನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 4-6, 0-5ರಲ್ಲಿ (ನಿವೃತ್ತಿ) ಸರ್ಬಿಯಾದ ಜಾಂಕೊ ತಿಪ್ಸರೆವಿಕ್ ಎದುರು ಸೋಲು ಅನುಭವಿಸಿದರು. ಮೊದಲ ಸೆಟ್ನಲ್ಲಿ ಉತ್ತಮ ಹೋರಾಟ ತೋರಿದ ಬೆರ್ಡಿಕ್ ಎರಡನೇ ಸೆಟ್ನಲ್ಲಿ ಆಡಲಾಗದೇ ನಿವೃತ್ತಿ ಪಡೆದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಅಮೆರಿಕದ ಮರ್ಡಿ ಫಿಶ್ 6-4, 7-6, 7-6ರಲ್ಲಿ ರಷ್ಯಾದ ಕೆವಿನ್ ಆ್ಯಂಡರ್ಸನ್ ಮೇಲೂ, ಅರ್ಜೆಂಟೀನಾದ ಜುವಾನ್ ಮೊನಾಕೊ 6-7, 6-3, 6-2, 6-3ರಲ್ಲಿ ಜರ್ಮನಿಯ ಟಾಮಿ ಹಾಸ್ ವಿರುದ್ಧವೂ, ಫ್ರಾನ್ಸ್ನ ಜೊ ವಿಲ್ಫ್ರೆಡ್ ಸೊಂಗಾ 6-3, 7-5, 6-4ರಲ್ಲಿ ಸ್ಪೇನ್ನ ಫರ್ನಾಂಡೊ ವೆರ್ಡಸ್ಕೊ ಮೇಲೂ, ಉಕ್ರೇನ್ನ ಅಲೆಕ್ಸಾಂಡ್ರಾ ಡೊಗೊಪೊಲೊವಾ 6-7, 6-2, 6-4, 6-4ರಲ್ಲಿ ಕ್ರೊಯೇಷ್ಯಾದ ಇವೊ ಕಾರ್ಲೊವಿಕ್ ವಿರುದ್ಧವೂ, ಸ್ಪೇನ್ನ ಜುವಾನ್ ಕಾರ್ಲೊಸ್ ಫೆರಾರೊ 6-1, 4-3ರಲ್ಲಿ ತಮ್ಮ ದೇಶದವರೇ ಆದ ಮಾರ್ಸೆಲ್ ಗ್ರಾನೊಲೆರ್ಸ್ ಮೇಲೂ ಗೆಲುವು ಸಾಧಿಸಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು.

ನಾಲ್ಕನೇ ಸುತ್ತಿಗೆ ಕ್ಯಾರೊಲಿನ್ ವೊಜ್ನಿಯಾಕಿ: ಅಗ್ರ ಶ್ರೇಯಾಂಕದ ಆಟಗಾರ್ತಿ ಡೆನ್ಮಾರ್ಕ್ನ ಕ್ಯಾರೊಲಿನ್ ವೊಜ್ನಿಯಾಕಿ ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಈ ಆಟಗಾರ್ತಿ 6-2, 6-4ರಲ್ಲಿ ಅಮೆರಿಕದ ವನಿಯಾ ಕಿಂಗ್ ವಿರುದ್ಧ ಗೆಲುವು ಪಡೆದರು. ಮೊದಲ ಸೆಟ್ನಲ್ಲಿ ಸುಲಭ ಗೆಲುವು ಪಡೆದ ಕ್ಯಾರೊಲಿನ್, ಎರಡನೇ ಸೆಟ್ನಲ್ಲಿ ಅಲ್ಪ ಪ್ರತಿರೋಧ ಎದುರಿಸಬೇಕಾಯಿತು.

ಇದೇ ವಿಭಾಗದಲ್ಲಿ ಸ್ಲೊಯೆನಾ ಸ್ಪೀಪೆನ್ಸ್ 3-6, 4-6ರಲ್ಲಿ ಸರ್ಬಿಯಾದ ಅನಾ ಇವನೊವಿಕ್ ಎದುರು ಸೋಲು ಅನುಭವಿಸಿದರು. ಇನ್ನೊಂದು ಪಂದ್ಯದಲ್ಲಿ ಆ್ಯಂಡ್ರಿ ಪೆಟ್ಕೊವಿಕ್ 6-4, 6-0ರಲ್ಲಿ ಇಟಲಿಯ ರೊಬೆರ್ಟ್ ವಿನ್ಸಿ ಎದುರು ಗೆಲುವು ಪಡೆದರು. ಅಮೆರಿಕದ ಸೆರೆನಾ ವಿಲಿಯಮ್ಸ 6-1, 7-6ರಲ್ಲಿ ಬೆಲಾರಸ್ನ ವಿಕ್ಟೋರಿಯಾ ಅಜರೆಂಕೆ ಅವರನ್ನು ಮಣಿಸಿದರು.

ಮೂರನೇ ಸುತ್ತಿಗೆ ಸೋಮದೇವ್-ಟ್ರಿಟ್ ಜೋಡಿ: ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಸೋಮದೇವ್ ದೇವವರ್ಮನ್ ಹಾಗೂ ಫಿಲಿಪ್ಪೀನ್ಸ್ನ ಟ್ರಿಟ್ ಕಾನ್ರರ್ಡ್ ಹ್ಯು ಜೋಡಿ ಪುರುಷರ ವಿಭಾಗದ ಡಬಲ್ಸ್ನಲ್ಲಿ ಮೂರನೇ ಸುತ್ತು ಪ್ರವೇಶಿಸಿತು.

ಎರಡನೇ ಸುತ್ತಿನ ಪಂದ್ಯದಲ್ಲಿ ಈ ಜೋಡಿ 6-3, 6-4ರಲ್ಲಿ ಅರ್ಜೆಂಟೀನಾದ ಜುವಾನ್ ಇಗ್ನೊಸಿಯೊ ಚೆಲಾ ಹಾಗೂ ಎಡುರ್ಡೊ ಚೇವಾಂಕ್ ಎದುರು ಗೆಲುವು ಪಡೆಯಿತು.

ನಾಲ್ಕನೇ ಶ್ರೇಯಾಂಕದ ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 7-6, 6-2ರಲ್ಲಿ ಜರ್ಮನಿಯ ಫ್ಲೊರಿಯಿನಾ ಮೇಯರ್ ಮತ್ತು ಹಾಲೆಂಡ್ನ ರೋಜಿಯರ್ ವಾಸನ್ ಎದುರು ಗೆಲುವು ಪಡೆದು ಮೂರನೇ ಸುತ್ತಿಗೆ ಲಗ್ಗೆ ಇಟ್ಟಿತು.

ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಪೇಸ್- ಭೂಪತಿ ಮತ್ತು ಸೋಮದೇವ್- ಟ್ರಿಟ್ ಜೋಡಿ ಎದುರಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.