ಲಂಡನ್ (ಪಿಟಿಐ): ಕುಡಿತದ ಚಟಕ್ಕೆ ಬಲಿಯಾಗುತ್ತಿರುವ ಅಮೆರಿಕದ ಮಹಿಳೆಯರು ಸೇವಿಸುವ ಆಹಾರದಲ್ಲಿನ ಕ್ಯಾಲೋರಿ ಪ್ರಮಾಣವು ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಮಿಸ್ಸೋರಿ ವಿಶ್ವವಿದ್ಯಾಲಯದ ಸಂಶೋಧಕರು ಕಾಲೇಜು ವಿದ್ಯಾರ್ಥಿನಿಯರನ್ನು ಸಮೀಕ್ಷೆಗೆ ಒಳಪಡಿಸಿ ಪ್ರಶ್ನಿಸಿದಾಗ, ಶೇ 16ರಷ್ಟು ಮಂದಿಯಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆಯಿರುವುದು ಪತ್ತೆಯಾಗಿದೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ.`ಡ್ರಂಕೊರೆಕ್ಸಿಯಾ~ ಎಂದು ಗುರುತಿಸಲಾಗುವ ಈ ವಿದ್ಯಮಾನ ಇತ್ತೀಚೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಇದರಿಂದಾಗಿ ಮಹಿಳೆಯರು ದೈಹಿಕ ಮತ್ತು ಮಾನಸಿಕವಾಗಿ ತೊಂದರೆಗೊಳಗಾಗಿ ಕುಡಿತದ ಚಟಕ್ಕೆ ಬಲಿಯಾಗುತ್ತಾರೆ~ ಎಂದು ಮಿಸ್ಸೋರಿ ವಿವಿ ಸಹಾಯಕ ಪ್ರಾಧ್ಯಾಪಕ ವಿಕ್ಟೋರಿಯ ಹೇಳಿದ್ದಾರೆ.

`ತಮ್ಮ ತೂಕವನ್ನು ಇಳಿಸಿಕೊಳ್ಳುವುದಕ್ಕಾಗಿ ಕುಡಿತಕ್ಕೆ ಬಲಿಯಾಗುವ ಮಹಿಳೆಯರು ಇದಕ್ಕಾಗಿ ಪುರುಷರಿಗಿಂತ ಹೆಚ್ಚಿನ ಹಣವನ್ನು ವ್ಯಯಿಸುತ್ತಾರೆ. ಇದು ಹೀಗೆ ಮುಂದುವರಿದರೆ ಇಬ್ಬರು ಸಂಜ್ಞಾನಾತ್ಮಕ ಸಮಸ್ಯೆ ಸೇರಿದಂತೆ ಓದುವಿನಲ್ಲಿ ಏಕಾಗ್ರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ದೀರ್ಘಕಾಲಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ~ ಎಂದು ವಿಕ್ಟೋರಿಯ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.