ಅಮ್ಮನಿಗೆ ಮಗನ ಬಿಡುಗಡೆಯ ವಿಶ್ವಾಸ

ಚೆನ್ನೈ(ಪಿಟಿಐ): ರಾಜೀವ್ ಹತ್ಯೆ ಪ್ರಕರಣದ ಆರೋಪಿಗಳ ಗಲ್ಲುಶಿಕ್ಷೆಯನ್ನು ಜೀವಾ ವಧಿಗೆ ಪರಿವರ್ತಿಸಿ ಸುಪ್ರೀಂಕೋರ್ಟ್ ತೀರ್ಪುಗೆ ಪ್ರತಿಕ್ರಿಯಿಸಿವ ಆರೋಪಿ ಎ.ಜಿ.ಪೇರ್ಅರಿವಲನ್ ತಾಯಿ ಪುತ್ರನ ಬಿಡುಗಡೆಯಾಗಲಿದ್ದಾನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಪೇರ್ಅರಿವಲನ್ ತಾಯಿ ಅರ್ಪುತಮ್ ಅಮ್ಮಾಳ್, ಇಂತಹ ತೀರ್ಪು ನೀಡಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ತೀರ್ಪಿಗಾಗಿ ನಾನು ಕಳೆದ 23 ವರ್ಷಗಳಿಂದ ಕಾಯುತ್ತಿದ್ದೆ. ಇದೇ ಆಶಾವಾದದಿಂದ ನಾನು ಬದುಕುತ್ತಿದ್ದೇನೆ. ಈಗ ನನ್ನ ಮನಸ್ಸಿಗೆ ಶಾಂತಿ ದೊರೆತಿದೆ’ ಎಂದು ಹೇಳಿದ್ದಾರೆ.
‘ನನ್ನ ಮಗ ಏನು ತಪ್ಪು ಮಾಡ ದಿದ್ದರೂ ಕಳೆದ 23 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆತ ಮಾಡದ ತಪ್ಪಿಗಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತನನ್ನು ಬಿಡುಗಡೆ ಮಾಡಬೇಕು. ಜೈಲಿನಿಂದ ಬಿಡುಗಡೆಯಾಗುವ ವಿಶ್ವಾಸದಲ್ಲಿದ್ದೇನೆ’ ಎಂದರು. ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಹಂತಕರ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆ ಸಿದವರಿಗೆ ಧನ್ಯವಾದ ಸಮರ್ಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.