ಶುಕ್ರವಾರ, ಮೇ 14, 2021
25 °C

ಅರಣ್ಯ ಇಲಾಖೆಗೂ ಸಹಾಯವಾಣಿ ಬೇಕು

-ಸತೀಶ್. ಕೆ.ಪಿ.ಎಸ್,ಕೊಲ್ಲೆೀಗೌಡನಹಳ್ಳಿ ಎಚ್.ಡಿ. ಕೋಟೆ. ತಾಲ್ಲೂಕು Updated:

ಅಕ್ಷರ ಗಾತ್ರ : | |

`ಮನೆಗೊಂದು ಮರ ಊರಿಗೊಂದು ವನ' ಇದ್ದಾಗ ಜನರ ಸಾಮಾಜಿಕ ಆರ್ಥಿಕ ಬೆಳವಣಿಗೆಯು ಉತ್ತಮವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ನಗರೀಕರಣದಿಂದ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶವಾಗುತ್ತಿದೆ.

ವನ್ಯಪ್ರಾಣಿಗಳು ನಾಡಿಗೆ ದಾಳಿ ಇಟ್ಟರೆ ಅದೇ ಒಂದು ದೊಡ್ಡ ಸುದ್ದಿಯಾಗುತ್ತದೆ. ಪ್ರತಿ ದಿನವೂ ಕಾಡಂಚಿನ ಗ್ರಾಮಗಳಿಗೆ ಕಾಡುಪ್ರಾಣಿಗಳು ದಾಳಿ ನಡೆಸಿದಾಗ ಅದು ಸಾಮಾನ್ಯವಾದ ಸಂಗತಿಯಾಗುತ್ತದೆ. ಕಾಡು ಪ್ರಾಣಿಗಳ ದಾಳಿ ಹಾಗೂ ಅರಣ್ಯಾಧಿಕಾರಿಗಳಿಂದ ಕಾಡಂಚಿನ ಗ್ರಾಮ (ಈಚೆಗೆ ನಡೆದ ಹುಣಸೆಕುಪ್ಪೆ ಹಾಡಿಯ ಘಟನೆ)ಗಳ ಜನರಿಗೆ ಕಿರುಕುಳ ಮತ್ತು ದೌರ್ಜನ್ಯ  ಮುಂತಾದ ವಿಷಯ ಮೇಲಧಿಕಾರಿಗಳಿಗೆ ತಿಳಿಸಲು ಅವರ ಖಾಸಗಿ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕಾದ ಪರಿಸ್ಥಿತಿ ಇದೆ.

ಪೊಲೀಸ್, ಅಗ್ನಿಶಾಮಕ, ರೈಲ್ವೆ, ಮಕ್ಕಳ ಸಹಾಯವಾಣಿ ಇರುವಂತೆ ಅರಣ್ಯ ಇಲಾಖೆಗೆ ಒಂದು ಪ್ರತ್ಯೇಕವಾದ ಸಹಾಯವಾಣಿ (ಟೋಲ್‌ಫ್ರೀ) ಪ್ರಾರಂಭಿಸಿದರೆ  ಕಾಡಂಚಿನ ಗ್ರಾಮ ದವರಿಗೆ ಹೆಚ್ಚು ಅನುಕೂಲವಾಗುತ್ತದೆ. ಮರಗಳ ಹನನ, ವನ್ಯ ಮೃಗಗಳಿಗೆ ದಾಳಿ ಹಾಗೂ ವನ್ಯ ಮೃಗಗಳು ಅವಘಡಗಳಿಗೆ ಸಿಲುಕಿದಾಗ ಹಾಗೂ ಜನರಿಗೆ ಆಗುತ್ತಿರುವ ತುರ್ತು ಸಮಸ್ಯೆಗಳನ್ನು (ದಾಳಿ) ತಕ್ಷಣ ಏಕಕಾಲದಲ್ಲಿ ಮೇಲಧಿಕಾರಿಗಳಿಗೆ ತಿಳಿಸಲು ಅನುಕೂಲವಾಗುತ್ತದೆ. ಆದ್ದರಿಂದ ಇನ್ನಾದರೂ ಅರಣ್ಯ ಇಲಾಖೆ ಸಹಾಯವಾಣಿ  ಪ್ರಾರಂಭಿಸುವ ಕಡೆ  ಸರ್ಕಾರ ಗಮನ ಹರಿಸಬೇಕಿದೆ.

-ಸತೀಶ್. ಕೆ.ಪಿ.ಎಸ್, ಕೊಲ್ಲೆೀಗೌಡನಹಳ್ಳಿ ಎಚ್.ಡಿ. ಕೋಟೆ. ತಾಲ್ಲೂಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.