ಶನಿವಾರ, ಜನವರಿ 18, 2020
19 °C

ಅರಬ್ ಒಕ್ಕೂಟದ ನಿರ್ಣಯ ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಮಾಸ್ಕಸ್ (ಎಎಫ್‌ಪಿ): ಅಧ್ಯಕ್ಷ ಬಶರ್ ಅಲ್ ಅಸದ್ ಅವರು ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಬೇಕು ಎಂಬ ಅರಬ್ ರಾಷ್ಟ್ರಗಳ ಒಕ್ಕೂಟದ ನಿರ್ಣಯವನ್ನು ತಿರಸ್ಕರಿಸಿರುವ ಸಿರಿಯಾ, ತಮ್ಮ ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದೆ.ಅರಬ್ ರಾಷ್ಟ್ರಗಳ ಒಕ್ಕೂಟದ ತೀರ್ಮಾನವು ಸಿರಿಯಾದ ಸಾರ್ವಭೌಮತ್ವದ ಮೇಲೆ ದಾಳಿ ಎಂದು ಬಣ್ಣಿಸಿರುವ ಸಿರಿಯಾ ಆಡಳಿತವು, ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಹಸ್ತಕ್ಷೇಪ ಸಲ್ಲ ಎಂದು ತಿಳಿಸಿದೆ.

 

ಪ್ರತಿಕ್ರಿಯಿಸಿ (+)