ಹಿರೀಸಾವೆ: ಬಾಲಕಿಯೊಬ್ಬಳು ತಂತಿಯ ಮೇಲೆ ಸರ್ಕಸ್ನ ವಿವಿಧ ಅಟಗಳನ್ನು ಪ್ರದರ್ಶನ ಮಾಡುತ್ತ ತನ್ನ ಕುಟುಂಬವನ್ನು ಸಾಕುತ್ತಿದ್ದಾಳೆ.

ಪ್ರತಿ ನಿತ್ಯ ಬೇರೆ ಬೆರೆ ಊರುಗಳ ಬೀದಿಯಲ್ಲಿ ಸರ್ಕಸ್ ಮಾಡುತ್ತ, ಜನರನ್ನು ಆಕರ್ಷಣೆ ಮಾಡಿ ನಂತರ, ತಟ್ಟೆ ಹಿಡಿದು ಜನರು ನೀಡುವ ಪುಡಿಗಾಸಿನಿಂದ ಹೊಟ್ಟೆಹೊರಿಯುತ್ತಾಳೆ, ಇವರೆಲ್ಲ ಅಲೆಮಾರಿಗಳು ಶಿಕ್ಷಣ ಮಾತ್ರ ಗೊತ್ತಿಲ್ಲ, ಇಂದು ಈ ಊರು ನಾಳೆ ಯಾವ ಊರು? ಎಂಬುದು ಅವರಿಗೇ ಗೊತಿಲ್ಲ.

ಸುಮಾರು ಆರು ವರ್ಷದ ಬಾಲಕಿ ಪೂಜಾ ಹೊಟ್ಟೆಪಾಡಿಗಾಗಿ ಹಿರೀಸಾವೆಯ ಶ್ರೀಕಂಠಯ್ಯ ವೃತ್ತದಲ್ಲಿ ತಂತಿಯ ಮೇಲೆ ಬಿದಿರಿನ ಕೋಲನ್ನು ಹಿಡಿದು ನಡೆದು, ನಂತರ ಸ್ಕೂಟರ್ನ ರಿಮ್ ಮೇಲೆ ಹಾಗೂ ತಟ್ಟೆ ಮೇಲೆ ಕುಳಿತು ತಂತಿಯ ಒಂದು ತುದಿಯಿಂದ ಮೊತ್ತೊಂದು ತುದಿಗೆ ಸಾಗಿದಳು.

ಶಾಲೆಗೆ ಕಳುಹಿಸಿ ವಿದ್ಯೆ ಕಲಿಸಬಾರದೇ? ಎಂದು ಈಕೆಯ ತಂದೆ ಸಂಜೆಯ್ ಕುಮಾರ್ನ್ನು ಕೇಳಿದರೆ, `ಜೀವನ ನಡೆಸಲು ಸರ್ಕಸ್ ಮಾಡುತ್ತಿದ್ದೇವೆ, ನಮ್ಮ ಊರು ಮಹಾರಾಷ್ಟ್ರ ರಾಜ್ಯದ ನಾಗಪುರ, ಮನೆ ಜಮೀನು ಇದೆ, ಸರ್ಕಸ್ ವಂಶದ ವೃತ್ತಿ, ಕಾಯಕವನ್ನು ಮಕ್ಕಳಿಗೆ ಕಲಿಸಿ ಜೀವನ ನಡೆಸುತ್ತವೆ~ ಎನ್ನುತ್ತಾನೆ.

ಮಕ್ಕಳ ದುಡಿತದಲ್ಲಿ ಬದುಕು ನಡೆಸುತ್ತಿದ್ದಾರೆ, ತಮ್ಮಂತೆ ಜೀವನ ಸಾಗಿಸಲಿ ಎಂಬ ಮನೊಭಾವ ಹೊಂದಿದ್ದಾರೆ ಎನ್ನವುದು, ಪೋಷಕರ ಮಾತಿನಲ್ಲಿ ತಿಳಿಯುತಿತ್ತು.

ಸರ್ಕಾರವು ಪ್ರತಿ ವರ್ಷ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಯಾವ ಯೋಜನೆಯೂ ಅಲೆಮಾರಿಗಳನ್ನು ತಲುಪುತ್ತಿಲ್ಲ. ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಮಕ್ಕಳು ಬಿಕ್ಷೆ ಬೇಡುತ್ತಾರೆ, ಅಧಿಕಾರಿಗಳು ನೋಡಿಯೂ ಕಣ್ಣುಮುಚ್ಚಿ ಕುಳಿತಿದ್ದಾರೆ. ಬಾಲಕಾರ್ಮಿಕ ಪದ್ದತಿಯನ್ನು ತೊಡೆದು ಹಾಕಲು ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಅನೇಕ ಕಡೆ ಈಗಲೂ ಮಕ್ಕಳು ಅಪಾಯಕಾರಿ ಕೆಲಸದಲ್ಲಿ ತೊಡಗಿರುವುದು ಕಂಡುಬರುತ್ತದೆ.

ಅಲೆಮಾರಿಗಳ ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ಸವಾಲಾಗಿದೆ. ಶಿಕ್ಷಣ ನೀಡಬಹುದು, ಆದರೆ ಅವರ ಪಾಲಕರು ಒಂದೇ ಕಡೆ ನೆಲೆನಿಲ್ಲುವಂತೆ ಮಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಒತ್ತಾಯಿಸುವ ಕಾರ್ಯ ನಡೆಯಬೇಕಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸ್ವಲ್ಪ ಗಮನ ಕೊಟ್ಟರೆ ಮಾತ್ರ ಇದು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.