ಭಾನುವಾರ, ಜೂನ್ 13, 2021
29 °C

ಅಳಲು ತೋಡಿಕೊಂಡ ಹೋರಾಟಗಾರ್ತಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ವಾಸ್ತವ ಸಂಗತಿಗಳನ್ನು ವರದಿ ಮಾಡುವ ಮಣಿಪುರದ ಮಾಧ್ಯಮಗಳು ಅಲ್ಲಿನ ಸರ್ಕಾರದ, ಭೂಗತ ಚಳುವಳಿಗಾರರ ಮತ್ತು ಪೊಲೀಸರ ದೌರ್ಜನ್ಯವನ್ನು ಎದುರಿಸಲು ಸಿದ್ದರಿರಬೇಕು’ ಎಂದು ಮಣಿಪುರದ ಪತ್ರಕರ್ತೆ ಚಿತ್ರಾ ಅಹೆಂತಮ್‌ ಹೇಳಿದರು.ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕರ್ನಾಟಕ ಲೇಖಕಿಯರ ಒಕ್ಕೂಟ ಮತ್ತು ಪರ್ಯಾಯ ಕಾನೂನು ವೇದಿಕೆಯ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ಮಣಿಪುರದ ಮಹಿಳಾ ಹೋರಾಟಗಾರ್ತಿ­ಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಈಶಾನ್ಯ ರಾಜ್ಯಗಳಲ್ಲಿ ಪತ್ರಿಕೆಗಳು ಏನನ್ನು ಬರೆಯಬೇಕು ಎಂಬುದನ್ನು  ಭಾರತೀಯ ಸೇನೆ ನಿರ್ಧರಿಸುತ್ತದೆ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ. ಪೊಲೀಸರನ್ನು ನೋಡಿದರೆ ಸಾಮಾನ್ಯ ಜನರು ಓಡಿಹೋಗುತ್ತಾರೆ. ಸರ್ಕಾರವಾಗಲೀ ರಾಷ್ಟ್ರೀಯ ಮಾಧ್ಯಮಗಳಾಗಲೀ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ’ ಎಂದರು.‘ಅಣ್ಣಾ ಹಜಾರೆ 10 ದಿನ ಉಪವಾಸ ಕುಳಿತರೆ ಇಡೀ ದೇಶವೇ ಸ್ಪಂದಿಸುತ್ತದೆ. 14 ವರ್ಷಗಳಿಂದ ಉಪವಾಸ ಕುಳಿತಿರುವ ಇರೋಮ್ ಶರ್ಮಿಳಾ ಚಾನು ಯಾರ ಕಣ್ಣಿಗೂ ಕಾಣುವುದೇ ಇಲ್ಲ. ಬಣ್ಣ, ಕಣ್ಣು, ಎತ್ತರಗಳ ಕಾರಣವೊಡ್ಡಿ ನಮ್ಮನ್ನು ಪ್ರತ್ಯೇಕಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.‘ನಾಲ್ಕೈದು ದಶಕಗಳ ಹಿಂದೆ ಆರಂಭವಾದ ಚಳವಳಿಗಳು ಇಂದು ಭೂಗತ ಲೋಕಗಳಾಗಿ ಮತ್ತು ನೈತಿಕ ಪೊಲೀಸ್‌ಗಿರಿಗಳಾಗಿ ಬದಲಾಗಿವೆ’ ಎಂದು ಸಭಿಕರ ಪ್ರಶ್ನೆಗೆ ಉತ್ತರಿಸಿದರು.ಮಣಿಪುರದ ಮಹಿಳಾ ಹೋರಾಟಗಾರ್ತಿ ಇಮಾ (ಅಮ್ಮ) ಲೌರೆಂಬಂ ನಾನ್ಬಿ ದೇವಿ, ‘1944ರಲ್ಲೇ ಮಣಿಪುರ ಬ್ರಿಟಿಷರಿಂದ ಬಿಡುಗಡೆಯಾಗಿತ್ತು. ಆದರೆ ನಮಗೀಗ ಸ್ವಾತಂತ್ರ್ಯವೇ ಇಲ್ಲ. ಮನೋರಮಾ ಪ್ರಕರಣದಂತಹ ಪ್ರಕರಣಗಳ ಮೂಲಕ ಸೇನೆ ಜನರಲ್ಲಿ ಭಯ ಹುಟ್ಟಿಸಿ ಹಿಡಿತ ಸಾಧಿಸಿದೆ. ಮಣಿಪುರದ ಎಲ್ಲಾ ತಾಯಂದಿರಿಗೂ ಹೊರಗೆ ಹೋದ ತಮ್ಮ ಮಕ್ಕಳು ಬರುತ್ತಾರೋ ಇಲ್ಲವೋ ಎಂಬ ಭರವಸೆಯೇ ಇರುವುದಿಲ್ಲ’ ಎಂದು ಅಳಲು ತೋಡಿಕೊಂಡರು.ಮಣಿಪುರದ ಮಹಿಳಾ ಹೋರಾಟಗಾರ್ತಿ ಇಮಾ (ಅಮ್ಮ) ಲೌರೆಂಬಂ ನಾನ್ಬಿ ದೇವಿ, ‘1944 ರಲ್ಲೇ ಮಣಿಪುರ ಬ್ರಿಟಿಷರಿಂದ ಬಿಡುಗಡೆ-­ಯಾಗಿತ್ತು. ಆದರೆ ಈಗ ನಮಗೆ ಸ್ವಾತಂತ್ರ್ಯವೇ ಇಲ್ಲ. ಮನೋರಮಾ ಪ್ರಕರಣದಂತಹ ಪ್ರಕರಣಗಳ ಮೂಲಕ ಸೇನೆ ಜನರಲ್ಲಿ ಭಯ ಹುಟ್ಟಿಸಿ ಹಿಡಿತ ಸಾಧಿಸಿದೆ. ಮಣಿಪುರದ ಎಲ್ಲಾ ತಾಯಂದಿರಿಗೂ ಹೊರಗೆ ಹೋದ ತಮ್ಮ ಮಕ್ಕಳು ಬರುತ್ತಾರೋ ಇಲ್ಲವೋ ಎಂಬ ಭರವಸೆಯೇ ಇರುವುದಿಲ್ಲ’ ಎಂದು ಗದ್ಗದಿತರಾದರು.ಮಹಿಳಾ  ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತಕೇಲಂಬಂ ರೇಣು ಬಾಲದೇವಿ ಮಾತನಾಡಿ, ‘ಕ್ಷುಲ್ಲಕ ಕಾರಣಗಳಿಗೂ ಸೈನಿಕರು ಯುವಕರನ್ನು ಗುಂಡಿಕ್ಕಿ ಕೊಂದು ಭಯೋತ್ಪಾದರು ಎಂಬ ಹಣೆಪಟ್ಟಿ ಹಚ್ಚುತ್ತಾರೆ. ತಮ್ಮ ಎದುರೇ ಮಕ್ಕಳು ಗುಂಡೇಟು

ತಿನ್ನುವುದನ್ನು ಯಾವ ತಾಯಿ ನೋಡಿಕೊಂಡು ಸುಮ್ಮನಿರಲು ಸಾಧ್ಯ. ನನ್ನ ಕಣ್ಣೆದುರೇ ನನ್ನ ಪತಿಗೆ ಗುಂಡಿಕ್ಕಿದರು’ ಎಂದು ಕಣ್ಣೀರಿಟ್ಟರು.‘ಸೇನೆಗೆ ಕೊಟ್ಟಿರುವ ವಿಶೇಷಾಧಿಕಾರ ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ನಮ್ಮ ಹೋರಾಟ  ಪ್ರಜಾಸತ್ತಾತ್ಮಕ ನೆಲೆಯದ್ದೇ ಆಗಿದೆ.  ಈವರಗೆ ಮಣಿಪುರವೊಂದರಲ್ಲೇ  1528 ಮಂದಿ ಎನ್‌ಕೌಂಟರ್‌ಗಳಿಗೆ ಬಲಿಯಾಗಿದ್ದಾರೆ. ನಕಲಿ ಎನ್‌ಕೌಂಟರ್‌ಗಳಿಗೆ ತುತ್ತಾದವರ ಕುಟುಂಬಗಳಿಗೆ ನ್ಯಾಯ ಸಿಗಬೇಕು’ ಎಂದರು.ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ‘ಲೇಖಕಿಯರ ಸಂಘ ಮತ್ತು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋದಿ ಒಕ್ಕೂಟಗಳ ವತಯಿಂದ ಶರ್ಮಿಳಾ ಚಾನು ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲಿವಿದೆ’ ಎಂದರು.

‘ಕಣ್ಣೇದುರೇ ಪತಿಗೆ ಗುಂಡಿಕ್ಕಿದರು’

‘ಕ್ಷುಲ್ಲಕ ಕಾರಣಗಳಿಗೂ ಸೈನಿಕರು ಯುವಕರನ್ನು ಗುಂಡಿಕ್ಕಿ ಕೊಂದು ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚುತ್ತಾರೆ. ತಮ್ಮ ಎದುರೇ ಮಕ್ಕಳು ಗುಂಡೇಟು ತಿನ್ನುವುದನ್ನು ಯಾವ ತಾಯಿ ನೋಡಿಕೊಂಡು ಸುಮ್ಮನಿರಲು ಸಾಧ್ಯ. ನನ್ನ ಕಣ್ಣೆದುರೇ ನನ್ನ ಪತಿಗೆ ಗುಂಡಿಕ್ಕಿದರು’ ಎಂದು ಮಣಿಪುರದ ಮಹಿಳಾ  ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತಕೇಲಂಬಂ ರೇಣು ಬಾಲದೇವಿ ಕಣ್ಣೀರಿಟ್ಟರು.‘ಸೇನೆಗೆ ಕೊಟ್ಟಿರುವ ವಿಶೇಷಾಧಿಕಾರ ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ನಮ್ಮ ಹೋರಾಟ  ಪ್ರಜಾಸತ್ತಾತ್ಮಕ ನೆಲೆಯದ್ದೇ ಆಗಿದೆ.  ಈವರಗೆ ಮಣಿಪುರವೊಂದರಲ್ಲೇ  1528 ಮಂದಿ ಎನ್‌ಕೌಂಟರ್‌ಗಳಿಗೆ ಬಲಿಯಾಗಿದ್ದಾರೆ. ನಕಲಿ ಎನ್‌ಕೌಂಟರ್‌ಗಳಿಗೆ ತುತ್ತಾದವರ ಕುಟುಂಬಗಳಿಗೆ ನ್ಯಾಯ ಸಿಗಬೇಕು’ ಎಂದು ಆಗ್ರಹಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.