ಮಂಗಳವಾರ, ಏಪ್ರಿಲ್ 20, 2021
27 °C

ಅವಕಾಶವಾದಿಗಳಾಗುತ್ತಿರುವ ಸಾಹಿತಿ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ಇಂದು ಬರಹಗಳು ಅನೈತಿಕ ತೆಯ ರೂಪವನ್ನು ಪಡೆದುಕೊಳ್ಳುತ್ತಿದೆ. ಬಹುತೇಕ ಸಾಹಿತಿಗಳು ಅವಕಾಶವಾ ದಿಗಳಾಗುತ್ತಿದ್ದಾರೆ” ಎಂದು ಗುಲ್ಬರ್ಗದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾ ಪಕ ಡಾ. ಅಪ್ಪಗೆರೆ ಸೋಮಶೇಖರ್ ವಿಷಾದ ವ್ಯಕ್ತಪಡಿಸಿದರು.ಬಂಡಾಯ ಸಾಹಿತ್ಯ ಸಂಘಟನೆ ಆಶ್ರಯದಲ್ಲಿ ಭಾನುವಾರ ನಡೆದ `ಸಮಕಾಲೀನ ಸಾಂಸ್ಕೃತಿಕ ಸವಾಲುಗಳು~ ವಿಷಯದ ಮೇಲಿನ ರಾಜ್ಯ ಮಟ್ಟದ ವಿಚಾರ ಸಂಕಿರಣದ `ಸಾಹಿತಿ ಮತ್ತು ಸಾಮಾಜಿಕ ಹೊಣೆಗಾರಿಕೆ~ ಗೋಷ್ಠಿಯಲ್ಲಿ ಅವರು ಮಾತನಾಡಿದರು.“ಅವಕಾಶವಾದಿಗಳೇ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಹಲವು ಸಾಹಿ ತಿಗಳು ಸಾಮಾಜಿಕ ಹೊಣೆಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ. ಸಾಂಸ್ಕೃತಿಕ ಅಧಪತನವನ್ನು ಇದು ತೋರಿಸುತ್ತದೆ. ಇಂಥ ಸಂದರ್ಭದಲ್ಲಿ `ನಿಜ~ವಾದ ಸಾಹಿ ತಿಗಳ ಹೊಣೆಗಾರಿಕೆ ಇನ್ನೂ ಹೆಚ್ಚುತ್ತಿದೆ” ಎಂದು ಅಭಿಪ್ರಾಯಪಟ್ಟರು.

“ಸಾಹಿತ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪೂರ್ಣಚಂದ್ರ ತೇಜಸ್ವಿ ಹಾಗೂ ದೇವನೂರ ಮಹಾದೇವ ಅವರಲ್ಲಿ ನಾವು ಹೆಚ್ಚು ಕಾಣಬಹುದು. ತೇಜಸ್ವಿಯವರ ಬರಹಗಳು ದಲಿತ ಚಳವಳಿಯ ಮುನ್ನೋಟವಾಗಿದೆ” ಎಂದು ತಿಳಿಸಿದರು.`ಸಾಹಿತಿ ಮತ್ತು ಸಾಮಾಜಿಕ ಹೊಣೆಗಾರಿಕೆ~ ಕುರಿತು ಪ್ರಬಂಧ ಮಂಡಿಸಿದ ಡಾ. ಅರುಣ ಜೋಳದ ಕೂಡ್ಲಗಿ, “ಚಳವಳಿಗಳಲ್ಲಿ ನೇರವಾಗಿ ಪಾಲ್ಗೊಳ್ಳದ ಕುವೆಂಪು ಅವರು ತಮ್ಮ ಬರಹಗಳಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತುವ ಮೂಲಕ ಕ್ರಾಂತಿಯನ್ನು ಮಾಡಿದ್ದಾರೆ. ತೇಜಸ್ವಿಯವರ ರೈತ ಚಳವಳಿಯಲ್ಲಿ ವಹಿಸಿದ, ಲಂಕೇಶರ ಸಾಮಾಜಿಕ ಹೊಣೆಗಾರಿಕೆಯನ್ನು ಅವರ ಬರಹಗಳಲ್ಲಿ ಕಾಣಬಹುದು. ಇಂಥ ಮಾದರಿಗಳನ್ನು ಅಳವಡಿಸಿಕೊಂಡು ಬರಹಗಾರರು ನಮ್ಮ ಹೊಣೆಗಾರಿಕೆಯನ್ನು ಅರಿತು ಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.“ಇಂದು ದೃಶ್ಯ ಮಾಧ್ಯಮವು ಅತ್ಯಂತ ಪ್ರಭಾವವಾಗಿ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಲಂಕೇಶ, ಬರಗೂರು ರಾಮಚಂದ್ರಪ್ಪ ಅವರು ಅಕ್ಷರ ಮಾಧ್ಯಮದ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಕುವೆಂಪು, ತೇಜಸ್ವಿ, ಲಂಕೇಶರ ಬದ್ಧತೆಯು ನಮಗೆಲ್ಲ ಮಾದರಿಯಾಗಬೇಕು” ಎಂದು ಹೇಳಿದರು.“ಇಂದು ಪುಸ್ತಕವು ಸೀಮಿತ ಓದುಗರನ್ನು ತಲುಪುತ್ತಿವೆ. ದಿನಪತ್ರಿ ಕೆಗಳು ಸಾಮಾನ್ಯ ಓದುಗರನ್ನೂ ಮುಟ್ಟುತ್ತಿವೆ. ಹೀಗಾಗಿ ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯನ್ನು ಹೇಗೆ ವಹಿಸುತ್ತಿವೆ ಎಂಬುದನ್ನು ನೋಡಬೇಕು” ಎಂದು ಡಾ. ಕವಿತಾ ಕುಸಗಲ್ಲ ಪ್ರತಿಕ್ರಿಯಿಸಿದರು.ಡಾ. ರಾಜಪ್ಪ ದಳವಾಯಿ, “ಸಾಮಾಜಿಕ ಜವಾಬ್ದಾರಿಯನ್ನು ಲೇಖಕರು, ಕಲಾವಿದರು ಮಾತ್ರ ಗುತ್ತಿಗೆಯನ್ನು ಪಡೆದುಕೊಂಡಿಲ್ಲ. ರಾಜಕಾರಣಿಗಳು, ಸಿನಿಮಾ ನಟರು, ಮಠಾಧೀಶರಿಗೂ ಹೊಣೆಗಾರಿಕೆ ಇದೆ. ಹೀಗಾಗಿ ಎಲ್ಲರೂ ಅದನ್ನು ಅರಿತುಕೊಂಡು ಪಾಲಿಸಬೇಕು” ಎಂದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಚಂದ್ರಕಾಂತ ಪೋಕಳೆ, “ಕುವೆಂಪು, ತೇಜಸ್ವಿ, ಲಂಕೇಶರ ಜೊತೆಯಲ್ಲೇ ಬಸವರಾಜ ಕಟ್ಟೀಮನಿಯವರು ಯಶಸ್ವಿಯಾಗಿ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. ಇವರು ಬರಹಗಾರರಾಗುವುದರ ಜೊತೆಗೆ ಚಿಂತಕರೂ ಆಗಿದ್ದರು. ಸಮಾ ಜದ ಬೇರೆ ಬೇರೆ ಆಯಾ ಮಗಳನ್ನು ಅರಿತುಕೊಂಡು ಬರೆಯುತ್ತಿದ್ದರು. ಈ ಹೊಣೆಗಾರಿಕೆಯು ವರ್ತಮಾನವರಲ್ಲೂ ಮುಂದು ವರಿಯಬೇಕು” ಎಂದು ಆಶಿಸಿದರು. ಡಾ. ಸಾಹುಕಾರ ಕಾಂಬಳೆ ಗೋಷ್ಠಿಯನ್ನು ನಿವಹಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.