ಮಂಗಳವಾರ, ಮೇ 24, 2022
30 °C

ಅಸಮರ್ಪಕ ಕಾಮಗಾರಿ: ಕೃಷಿ ಭೂಮಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಚ್ಚಿಲ (ಪಡುಬಿದ್ರಿ): ಉಚ್ಚಿಲದ ಕಟ್ಟಿಂಗೇರಿ ಕೆರೆಯ ಅಸಮರ್ಪಕ ಕಾಮಗಾರಿಯಿಂದ ಫಲವತ್ತಾದ ಕೃಷಿ ಭೂಮಿಗೆ ನೀರು ನುಗ್ಗಿ ಭತ್ತದ ಕೃಷಿ ನಾಶವಾಗಿದೆ.ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಟ್ಟಿಂಗೇರಿ ಕೆರೆಯನ್ನು ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಮಳೆಗಾಲ ಆರಂಭವಾಗುವ ಕೆಲವೇ ತಿಂಗಳ ಮೊದಲು ಕಾಮಗಾರಿ ಆರಂಭಗೊಂಡಿತ್ತು.ಆದರೆ ಮಳೆಗಾಲ ಆರಂಭಗೊಂಡ ಬಳಿಕ ಕಾಮಗಾರಿ ಸ್ಥಗಿತಗೊಳ್ಳುವ ಮೂಲಕ ಅಸಮರ್ಪಕವಾಗಿದೆ. ಇದರಿಂದ ಮುಳ್ಳಗುಡ್ಡೆ ಎಂಬಲ್ಲಿಯ ರಮೇಶ ಎಂಬವರ ಎರಡು ಎಕರೆ ಪ್ರದೇಶದ ಕೃಷಿ ಭೂಮಿ ಸಂಪೂರ್ಣ ನಾಶವಾಗಿದೆ.ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೃಷಿಕ ರಾಜೇಶ್ `ನಾವು ಹಲವು ವರ್ಷಗಳಿಂದ ಭತ್ತದ ಕೃಷಿ ಮಾಡುತ್ತಿದ್ದೇವೆ. ಈ ಬಾರಿ ನಮಗೆ ನಷ್ಟವಾಗಿದೆ. ಈ ಬಗ್ಗೆ ನಾವು ಉಚ್ಚಿಲ ಬಡಾ ಗ್ರಾಮ ಪಂಚಾಯತಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ' ಎಂದು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.