ಮಸ್ಕಿ: ಇಲ್ಲಿಯ ಅಶೋಕ ಶಿಲಾಶಾಸನ ಹಿಂಭಾಗದ ಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನ್ನಳ್ಳಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಮಹಾಂತೇಶ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಗುಡ್ಡದಲ್ಲಿ ಜನವಸತಿ ಇತ್ತು ಎಂಬುದಕ್ಕೆ ಈ ಅಸ್ಥಿಪಂಜರಗಳು ಸಾಕ್ಷಿಯಾಗಿವೆ ಎಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಚ್ಯವಸ್ತು ಇಲಾಖೆಗೆ ಬರೆಯಲಾಗಿದೆ ಎಂದರು. ಅವರು ಬಂದು ಈ ಬಗ್ಗೆ ಅಧ್ಯಯನ ಮಾಡಲಿದ್ದಾರೆಂದು ಎಸ್ಪಿ ಎಸ್. ಬಿ. ಬಿಸನ್ನಳ್ಳಿ ತಿಳಿಸಿದರು. ಗುಡ್ಡದಲ್ಲಿ ದೊರೆತ ಈ ಅಸ್ಥಿಪಂಜರಗಳು ಕ್ರಿ.ಪೂ. ಶತಮಾನದವು ಎಂದು ಅವರು ತಿಳಿಸಿದರು.

ಪುರಾತತ್ವ ಇಲಾಖೆಯ ಸಂಶೋಧನೆಯಿಂದ ಮಾತ್ರ ಇದರ ನಿಜಾಂಶ ತಿಳಿದು ಬರಲಿದೆ ಎಂದು ಅವರು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಮಹಾಂತೇಶ, ಮಸ್ಕಿ ಪಿಎಸ್ಐ ಅಯ್ಯನಗೌಡ, ಶಶಿಧರ ಹೊಸಮಠ, ಬಾಲಾಜಿ, ನವೀನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.