ಗುರುವಾರ , ಜೂನ್ 24, 2021
25 °C

ಅಸ್ಪೃಶ್ಯತೆಯ ಹೊಸರೂಪ

–ವಿಜಯಕುಮಾರ್‌ ಎಚ್‌.ಜಿ.,ಬೆಂಗಳೂರು Updated:

ಅಕ್ಷರ ಗಾತ್ರ : | |

ಇತ್ತೀಚಿನ ದಿನಗಳಲ್ಲಿ ಜಾನಪದ ಕಲಾವಿದ­ರನ್ನು ಕರೆಯಿಸಿ ಪ್ರದರ್ಶಿಸುವುದು ಫ್ಯಾಷನ್‌ ಆಗಿಬಿಟ್ಟಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಕರ್ನಾ­­ಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸ­ಲಾಗಿದ್ದ ಸಾಂಸ್ಕೃತಿಕ ಕಾರ್ಯ­ಕ್ರಮವೊಂದಕ್ಕೆ ತಮಟೆ ಕಲಾವಿದರನ್ನು ಆಹ್ವಾನಿಸಲಾಗಿತ್ತು.ಇತರ ಕಾರ್ಯಕ್ರಮಗಳೂ ಇದ್ದವು. ಆದರೆ ಕಾರ್ಯ­ಕ್ರಮ ವಿಧ್ಯುಕ್ತವಾಗಿ ಪ್ರಾರಂಭವಾಗುವ ಮೊದಲೇ ತಮಟೆ ಕಲಾವಿದರಿಗೆ ತಮಟೆ ಬಾರಿ­ಸು­ವಂತೆ ಹೇಳಲಾಯ್ತು. ಅವರೂ ಸಿದ್ಧರಾಗಿ, ವಿಧೇಯರಾಗಿ ಬಾರಿಸತೊಡಗಿದರು. ಇದು ಹೇಗೆ ಕಂಡಿತೆಂದರೆ ಮುಖ್ಯ ಕಾರ್ಯಕ್ರಮ ಪ್ರಾರಂಭ­ವಾಗುವ ಮುಂಚೆ ಜನರನ್ನು ಸೆಳೆಯಲು ಸೈರನ್‌ ಮೊಳಗಿಸುವಂತೆ. ಅಷ್ಟರಲ್ಲಾಗಲೇ ಚಿತ್ರಕಲಾ ಪ್ರದರ್ಶನ ಮಾಡುತ್ತಿದ್ದ ಕಲಾವಿದರು ಬಂದು ಈ ಶಬ್ದ  ನಮ್ಮ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಆಯೋಜಕರು ಕೂಡಲೇ ಮುಲಾಜಿಲ್ಲದೆ ತಮಟೆ ವಾದಕರನ್ನು ಮುಖ್ಯದ್ವಾರದ ಆಚೆ ಹೋಗಿ ಬಾರಿಸಲು ಅಟ್ಟೇಬಿಟ್ಟರು. ಇದರಿಂದ ಆ ಕಲಾವಿ­ದ­ರಿಗೆ ಮಾನಸಿಕವಾಗಿ ಎಷ್ಟು ಗಾಸಿಯಾಯಿತೋ ನಾನರಿಯೆ.ನನ್ನ ಕಳಕಳಿ ಇಷ್ಟೇ. ಆ ಕಲಾವಿ­ದ­ರನ್ನು ಕರೆಸಿದ್ದೇ ಆದರೆ ಗೌರವಯುತವಾಗಿ ನಡೆಸಿಕೊಳ್ಳಿ. ಸಂಬಂಧಪಟ್ಟವರು ಗಮನಿಸಿ ಕ್ರಮ ಕೈಗೊಳ್ಳುವರೆಂದು ಆಶಿಸುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.