ಭಾನುವಾರ, ಜೂಲೈ 12, 2020
22 °C

ಆಂಡರ್ಸನ್ ಹಸ್ತಾಂತರ ಕೋರಿಕೆ: ಸಿಬಿಐ ಮನವಿಗೆ ಕೋರ್ಟ್ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂಡರ್ಸನ್ ಹಸ್ತಾಂತರ ಕೋರಿಕೆ: ಸಿಬಿಐ ಮನವಿಗೆ ಕೋರ್ಟ್ ಅಸ್ತು

ನವದೆಹಲಿ (ಪಿಟಿಐ): 1984ರ ಭೋಪಾಲ್ ವಿಷಾನಿಲ ದುರಂತದ ಆರೋಪಿ ಯೂನಿಯನ್ ಕಾರ್ಬೈಡ್ ನಿಗಮದ ಅಧ್ಯಕ್ಷ ವಾರನ್ ಆಂಡರ್ಸನ್ ಹಸ್ತಾಂತರಕ್ಕಾಗಿ ಅಮೆರಿಕವನ್ನು ಕೋರಲು ದೆಹಲಿಯ ನ್ಯಾಯಾಲಯವೊಂದು ಬುಧವಾರ ಸಿಬಿಐಗೆ ಅನುಮತಿ ನೀಡಿತು.~ದುರಂತಕ್ಕೆ ಒಳಗಾದ ನತದೃಷ್ಟರ ಭಾವನೆಗಳು ಮತ್ತು ಘಟನೆಯ ಸಂಪೂರ್ಣ ವಾಸ್ತವಾಂಶಗಳ ಪರಿಶೀಲನೆ ಬಳಿಕ ಆಂಡರ್ಸನ್ ಹಸ್ತಾಂತರ ಕೋರಿಕೆ ಅತ್ಯಂತ ಸಮಂಜಸ ಹಾಗೂ ನ್ಯಾಯೋಚಿತ ಎಂಬುದಾಗಿ ನಾನು ಪರಿಗಣಿಸಿದ್ದೇನೆ~ ಎಂದು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ಇಲ್ಲಿ ಹೇಳಿದರು.~ಅಮೆರಿಕದ ಅಧಿಕಾರಿಗಳಿಂದ ಆಂಡರ್ಸನ್ ಹಸ್ತಾಂತರ ಕೋರಿಕೆಗೆ ಯಾವುದೇ ಪ್ರತಿಬಂಧಗಳು ಕಾನೂನಿನಲ್ಲಿ ಇಲ್ಲ. ಆದ್ದರಿಂದ ಸಿಬಿಐ ಮನವಿಯನ್ನು ಪುರಸ್ಕರಿಸಲಾಗಿದೆ~ ಎಂದು ಅವರು ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.