ಬುಧವಾರ, ಜೂಲೈ 8, 2020
26 °C

ಆಕಸ್ಮಿಕ ಆಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಷ್ಟ್ರೀಯ ಅಗ್ನಿ ಶಮನ ಮತ್ತು ತುರ್ತು ನಿರ್ವಹಣಾ ದಿನಾಚರಣೆ ಅಂಗವಾಗಿ ಕವಾಯತು ಹಾಗೂ ಮುನ್ನೆಚ್ಚರಿಕೆ ಕುರಿತ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲೆಯ ಅಗ್ನಿಶಾಮಕ ದಳದ ವತಿಯಿಂದ ಸ್ಥಳೀಯ ವಾರ್ಡ್ಲಾ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಲಾಗಿತ್ತು.ಆಕಸ್ಮಿಕ  ಆಪತ್ತು, ಅಗ್ನಿ ಅನಾಹುತ, ಅಪಘಾತ, ಪ್ರವಾಹ, ವಿಷಾನಿಲ ಸೋರಿಕೆ ಸಂದರ್ಭ ತುರ್ತಾಗಿ ನಿರ್ವಹಿಸಬೇಕಾದ ಕಾರ್ಯಗಳು, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗೆ ಕುರಿತು ಅಣಕು ಪ್ರದರ್ಶನಗಳ ಮೂಲಕ ಪ್ರದರ್ಶಿಸಲಾಯಿತು.ಅಪಾಯದಿಂದ ತಪ್ಪಿಸಿಕೊಳ್ಳುವುದು, ರಕ್ಷಣೆ ಒದಗಿಸುವುದು, ತುರ್ತು ಸಂದರ್ಭಗಳಲ್ಲಿ ಯಾರನ್ನು  ಸಂಪರ್ಕಿಸಬೇಕು ಎಂಬುದನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿವರಿಸಿದರು.ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಆರಓಗ್ಯ ಕವಚ- 108 ತಂಡವು ಹೇಗೆ ತುರ್ತು ಸಂದರ್ಭದಲ್ಲಿ ರಕ್ಷಣೆಗೆ ಮುಂದಾಗುತ್ತದೆ? ಎನ್ನವುದನ್ನೂ ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಿದರು.  ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಬಿ.ಓಬಣ್ಣ ನೇತೃತ್ವ ವಹಿಸಿದ್ದರು.ಪ್ರಾಚಾರ್ಯ ವಿಕ್ಟರ್ ಇಮ್ಯಾನ್ಯುಲ್, ಉಪ ಪ್ರಾಚಾರ್ಯ ಸುಪ್ರಬಾ ರತ್ನಮನಿ, ಅಗ್ನಿಶಾಮಕ ಅಧಿಕಾರಿಗಳಾದ ಎಸ್. ರಮೇಶ್, ಜಿ. ಕೃಷ್ಣಸ್ವಾಮಿ,  ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.