ಸೋಮವಾರ, ಜೂನ್ 14, 2021
27 °C

ಆಟಿಸಂ ಅರಿವು–ಅಂತಃಕರಣವೇ ಚಿಕಿತ್ಸೆ

ಡಾ.ಬಿ.ಎಸ್. ಪ್ರಮೀಳಾ ದೇವಿ Updated:

ಅಕ್ಷರ ಗಾತ್ರ : | |

ಮಗುವಿನ ಜನನದೊಂದಿಗೆ ಕಂಡುಬರುವ ಈ ದೋಷ, ಬೆಳವಣಿಗೆಯ ಎಲ್ಲ ಹಂತದಲ್ಲಿಯೂ ಕಂಡುಬರುತ್ತದೆ. ಹುಟ್ಟುವ ಪ್ರತಿ 10 ಸಾವಿರ ಮಕ್ಕಳಲ್ಲಿ 3ರಿಂದ 5 ಮಕ್ಕಳಿಗೆ ಈ ದೋಷ ಕಂಡುಬರುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ಎನ್ನುವುದೊಂದು ಗಮನಾರ್ಹ ಅಂಶ.ಬೆಳವಣಿಗೆಯಲ್ಲಿ ದೋಷ: ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಸಮರ್ಪಕವಾಗಿರುವುದಿಲ್ಲ. ಮಗುವಿನ ಬೆಳವಣಿಗೆಯಲ್ಲಿ ಮೈಲಿಗಲ್ಲುಗಳುಂಟು. ಅಂದರೆ ಮಗು ತಾಯಿಯನ್ನು ಗುರುತಿಸುವುದು, ನಗುವುದು, ಬೋರಲಾಗುವುದು, ಅಂಬೆಗಾಲು, ಕುಳಿತುಕೊಳ್ಳುವುದು, ನಿಲ್ಲುವುದು, ನಡಿಗೆ, ಮಾತು, ಅಳು, ಸಿಟ್ಟು. ಈ ಎಲ್ಲವೂ ಮಗುವಿನ ವಯಸ್ಸಿಗೆ ತಕ್ಕಂತೆ ಕಾಣಿಸಿಕೊಳ್ಳುತ್ತದೆ. ಇವು ಎಲ್ಲ  ಮಕ್ಕಳಲ್ಲೂ ಸಾಮಾನ್ಯವಾಗಿ ಕಾಣುವ  ಮೈಲಿಗಲ್ಲುಗಳು.ಆಟಿಸಂ ಇರುವ ಮಗುವಿನಲ್ಲಿ ಈ  ಮೈಲಿಗಲ್ಲುಗಳೆಲ್ಲವೂ ನಿಧಾನವಾಗಿರುತ್ತವೆ.  ಕಲಿಕೆ, ಗ್ರಹಿಕೆ  ನಿಧಾನವಾಗಿಯೂ ಮಂದಗತಿಯಲ್ಲಿ ಸಾಗುತ್ತದೆ. ಸಾಮಾನ್ಯವಾಗಿ ಒಂದನೇ ವರ್ಷದಲ್ಲಿ ಕಾಣಬರುವ ತೊದಲ ನುಡಿ 5–6ನೇ ವಯಸ್ಸಿಗೆ ಬರಬಹುದು. ನಡಿಗೆಯೂ 5–6ನೇ ವಯಸ್ಸಿಗೆ ಬರಬಹುದು. ಓಡುವುದು, ಮಹಡಿ ಹತ್ತುವುದು ಎಲ್ಲವೂ ತಡವಾಗುತ್ತದೆ. ಭಾವನಾತ್ಮಕ ಪ್ರತಿಕ್ರಿಯೆಯಲ್ಲಿಯೂ ಯಾವುದೇ ಬದಲಾವಣೆಗಳಿರುವುದಿಲ್ಲ. ಅಮ್ಮನನ್ನೂ ಗುರುತಿಸಲಾಗದ ಮಕ್ಕಳು ಇವು.ಆಟಿಸಂ ಲಕ್ಷಣಗಳು

ನೋಡಲು ಬೇರೆ ಮಕ್ಕಳಂತೆಯೇ ಕಾಣುತ್ತವೆ.  ಎತ್ತರ ಸ್ವಲ್ಪ ಕಡಿಮೆ ಇರಬಹುದು. ಆರೋಗ್ಯದ ದೃಷ್ಠಿಯಿಂದ ನೋಡಿದರೆ ಈ ಮಕ್ಕಳಲ್ಲಿ ಜ್ವರ ಬರುವುದೇ ಕಡಿಮೆ ಎನ್ನಿಸುತ್ತದೆ. ಆದರೆ ಜ್ವರ ಬಂದಾಗಲೂ ಆಟಿಸ್ಟಿಕ್‌ ಮಕ್ಕಳ ಮೈ ಸುಡುವುದಿಲ್ಲ. ಬದಲಾಗಿ ಜ್ವರದಿಂದ ದೇಹದ ಮೇಲೆ ಪರಿಣಾಮ ಆಗುತ್ತದೆ. ಜ್ವರ ಬಂದಾಗ ಮೈಸುಡುವುದು ಮೆದುಳಿನ ಚಟುವಟಿಕೆಯಿಂದ. ಮೆದುಳು ಸರಿಯಾಗಿ ಬೆಳೆಯದೇ ಇದ್ದಾಗ ಉಳಿದ ಕಾರ್ಯವೈಖರಿಯಲ್ಲಿಯೂ ಬದಲಾವಣೆಗಳಾಗುವುದಿಲ್. ಏರುಪೇರು, ಸುಮಾರು ಎಲ್ಲ ಇಂದ್ರಿಯಗಳಿಗೂ ಇದೇ ಸ್ಥಿತಿ. ಶ್ರವಣ, ಸ್ಪರ್ಷ ಯಾವುದೂ ಪೂರ್ಣವಾಗಿ ಕೆಲಸ ಮಾಡುವುದಿಲ್ಲ. ಸ್ಪರ್ಷದಲ್ಲಿ ಜ್ಞಾನವೂ ಕಡಿಮೆ ಇರುವುದರಿಂದ ನೋವು ತಿಳಿಯುವುದಿಲ್ಲ. ಮಗು ನೋವಿಗೆ ಸರಿಯಾಗಿ ಪ್ರತಿಕ್ರಯಿಸುವುದಿಲ್ಲ.ಭಾವನಾತ್ಮಕ ಬೆಳವಣಿಗೆ

ಈ ಮಕ್ಕಳಿಗೆ ಮನೆಯವರನ್ನು, ಹೊರಗಿನವರನ್ನು ಗುರುತಿಸಲಾಗುವುದಿಲ್ಲ. ಪರಿಚಿತರು, ಅಪರಿಚಿತರು ಎಂಬ ವ್ಯತ್ಯಾಸ ಇರುವುದಿಲ್ಲ. ಆತ್ಮೀಯ ಭಾವನೆಯಾಗಲೀ, ಆತಂಕವಾಗಲೀ ಎರಡನ್ನೂ ವ್ಯಕ್ತ ಪಡಿಸಲಾಗದು. ಈ ಮಕ್ಕಳು ಬೆಳೆದಂತೆ ಓರಿಗೆಯವರೊಡನೆ ಗೆಳೆತನ ಬೆಳೆಸಿಕೊಳ್ಳುವುದಿಲ್ಲ. ಬೇರೆ ಮಕ್ಕಳೊಡನೆ ಆಟ–ಪಾಠ–ಪ್ರೀತಿ ವಾತ್ಸಲ್ಯ ಇವು  ಯಾವವೂ ಬೆಳೆಯುವುದಿಲ್ಲ. ಮಗು  ಒಂಟಿಯಾಗಿಯೇ ಇರಬಯಸುತ್ತದೆ. ಮತ್ತು ಆದರೆ ಕಡ್ಡಿ, ಕಾಗದ, ಕಸ ಮುಂತಾದವುಗಳೊಡನೆ ಒಂಟಿಯಾಗಿಯೇ ಆಡಿಕೊಳ್ಳುತ್ತದೆ.ದೃಷ್ಟಿ...

ಈ ಮಕ್ಕಳ ಕಣ್ಣು ನೋಡಲು ಸಾಮಾನ್ಯ ಮಕ್ಕಳಂತೆಯೇ ಕಾಣುತ್ತವೆ. ಆದರೆ ಈ ಮಕ್ಕಳಿಗೆ ಮನೆಯವರು ಯಾರು ಹೊರಗಿನವರು ಯಾರು ಎಂದು ತಿಳಿಯುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಅಕಸ್ಮಾತ್‌ ಹಾಗೆ ನೋಡಬೇಕಾಗಿ ಬಂದರೆ ಆ ನೋಟನ್ನು ತಪ್ಪಿಸುತ್ತವೆ. ಕಣ್ಣಿನಿಂದ ಮಾಡುವ ಸಂಕೇತ ಭಾಷೆಯನ್ನೂ ಅರಿಯುವುದಿಲ್ಲ, ಇದಕ್ಕೆಲ್ಲಾ ಮತ್ತದೇ ಕಾರಣ. ಬೆಳವಣಿಗೆಯ ದೋಶ. ಈ ಮಕ್ಕಳಿಗೆ ಕಣ್ಣು ಕಾಣಿಸುತ್ತದೆ; ಆದರೆ ದೃಶ್ಯದ ಅರಿವು ಇಲ್ಲ.ಭಾಷೆಯ ಬೆಳವಣಿಗೆ

ಆಟಿಸ್ಟಿಕ್‌ ಮಕ್ಕಳಲ್ಲಿ ಭಾಷಾಜ್ಞಾನ ಬಹಳ ಕಡಿಮೆ. ಸಾಮಾನ್ಯವಾಗಿ 2–3 ವರ್ಷದ ಮಗುವಿನ ತೊದಲುಮಾತು ಕೇಳು ಚೆನ್ನ, ಆ ಸಹಜ ಮಕ್ಕಳು ಕಂಡಿದ್ದನ್ನೆಲ್ಲಾ ಹೇಳಬೇಕು–ಕೇಳಬೇಕು, ಕೇಳಲು–ಹೇಳಲು ಪದಗಳು ಬಾರದಿದ್ದಲ್ಲಿ ಕೈ–ಬಾಯಿ ಸಂಜ್ಞೆ ಮಾಡಿಯಾದರೂ ತಿಳಿಸುವ ಪ್ರಯತ್ನ ಮಾಡುತ್ತವೆ. ಆದರೆ ಆಟಿಸ್ಟಿಕ್‌ ಮಗು ಹಾಗಲ್ಲ. ಆಟಿಸ್ಟಿಕ್‌ ಮಗುವಿನಲ್ಲಿ ಯಾವುದೇ ಆಸೆ, ಭಾವನೆ ಪ್ರಯತ್ನ ಯಾವುದೂ ಕಾಣಿಸುವುದಿಲ್ಲ, ಈ ಮಕ್ಕಳಿಗೆ ಬರುವುದೇ ಕೆಲವು ಶಬ್ದಗಳು. ಆ ಶಬ್ದಗಳ ಬಳಕೆಯೂ ಕಡಿಮೆ, ಆಡಿದ ಪದಗಳನ್ನೇ ಮತ್ತೆ ಮತ್ತೆ ಆಡುತ್ತಿರುತ್ತವೆ. ಇ ಉದಾ ಹೋಗು ಗು...ಗು...ದು...  ತಾವಾಡುವ ಮಾತು  ಮತ್ತೊಬ್ಬರು ಕೇಳಬೇಕೆಂದೇನೂ ಇಲ್ಲ. ತಾವಾಡುವ ಶಬ್ದಗಳನ್ನು ತಾವೇ ಕೇಳಿಕೊಳ್ಳುತ್ತಿರುತ್ತವೆ.   ಆಡುವ ಮಾತು ಇತರರಿಗೆ ಸರಿಯಾಗಿ ತಿಳಿಯುವುದಿಲ್ಲ. ರೂಢಿಯ ಮೇಲೆ ಆ ಮಾತು ಮಗುವಿನ ತಾಯಿಗೆ ಅಥವಾ ಮನೆಯವರಿಗೆ ಸ್ವಲ್ಪ ತಿಳಿಯಬಹುದು, ಆದರೆ ಓರಗೆಯ ಮಕ್ಕಳಿಗೆ ಏನೇನೂ ತಿಳಿಯುವುದಿಲ್ಲ,  ಮತ್ತು ಆಟಿಸ್ಟಿಕ್‌ ಮಗುವಿಗೆ ಯಾವ ತರಹದ ಹೊಸತನವಾಗಲಿ, ಬದಲಾವಣೆ ಆಗಲಿ ಬೇಕಿಲ್ಲ.  ಭಾಷೆಯೇ ಬೇಡ, ಭಾಷೆಯ ಸಂಪರ್ಕವೂ ಬೇಕಿಲ್ಲ.ಟಿಸ್ಟಿಕ್‌ ಮಕ್ಕಳ ನಡತೆ

ಕೆಲವು ಮಕ್ಕಳಲ್ಲಿ ಅತಿಯಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸ್ವಭಾವ ಕಾಣಿಸಬಹುದು. ಆದರೆ ಬಹುತೇಕ ಮಕ್ಕಳು ಒಂಟಿಯಾಗಿ ತಮ್ಮದೇ ಆದ ಲಹರಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ತಲೆ ಗೋಡೆಗೆ ಬಡಿಯುವುದು, ಕೂದಲು ಕಿತ್ತುವುದು, ಕಚ್ಚಿ ಗಾಯ ಮಾಡಿಕೊಳ್ಳುವುದು, ಕೈಕಾಲು ಆಡಿಸುವುದು, ಉಗುರು ಕಚ್ಚುವುದು, ವಿಚಿತ್ರ ರೀತಿಯಲ್ಲಿ ಕೂರುವುದು ಮುಂತಾದುವುಗಳನ್ನು ಮಾಡುತ್ತಿರುತ್ತಾರೆ. ಇದ್ಯಾವುದಕ್ಕೂ ಕಾರಣ ಬೇಕಿಲ್ಲ. ಗೋಡೆಗೆ ತಲೆ ಬಡಿದಾಗ ಆಗುವ ನೋವಿನ ಅರಿವು ಇವರಿಗಾಗದು. ಅದರೆ   ತಲೆ ಗೋಡೆಗೆ ತಾಗಿದಾಗ ಆಗುವ ‘ಡಗ್‌’ ‘ಡಗ್‌’ ಸದ್ದು ಈ ಮಕ್ಕಳನ್ನು ಸೆಳೆಯುತ್ತದೆ. ಆಟಿಸ್ಟಿಕ್‌ ಮತ್ತು ಬುದ್ಧಿಮಾಂದ್ಯತೆ

ಈ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಹೆಚ್ಚು (ಎಂ.ಆರ್.) ಅವರ ಐಕ್ಯು ಪ್ರತಿಶತ 50 ಕ್ಕಿಂತ ಕಡಿಮೆ ಇರುತ್ತದೆ. ಆದರೆ ಕೆಲವು ಮಕ್ಕಳಿಗೆ ಮಗ್ಗಿ ಬಾಯಿಪಾಠ ಲೆಕ್ಕ, ಸಂಗೀತ ಇವುಗಳಲ್ಲಿ ಹೆಚ್ಚಿನ ಜ್ಞಾನ ಇರುತ್ತದೆ. ಆಟಿಸಂ ಇರುವ ಮಕ್ಕಳಲ್ಲಿ  ದೃಶ್ಯ, ಶ್ರವ್ಯ, ಸ್ಪರ್ಷ ಇವುಗಳ ದೋಷದ ಜೊತೆಗೆ ಗ್ರಹಣ ಶಕ್ತಿಯ ದೋಷ ಇರುತ್ತದೆ. ಇದರಿಂದ ಈ ಮಕ್ಕಳು ಸ್ಪಂದಿಸುವುದು, ಪ್ರತಿಕ್ರಿಯಿಸುವುದು ಕಡಿಮೆ.ಮಕ್ಕಳನ್ನು ನಿಭಾಯಿಸುವುದು ಹೇಗೆ:

ಸುಮಾರು 5–6ನೇ ತಿಂಗಳಿನಲ್ಲಿ ಕಾಣಿಸಿಕೊಂಡ ಈ ದೋಶ ಮಗುವಿನ ಬೆಳವಣಿಗೆಗೆ ಅಡ್ಡಿ ಆಗಿರುತ್ತದೆ. 5–6 ವರ್ಷಗಳಾದರೂ ಮಗುವಿಗೆ ಮಾತು, ನಡಿಗೆ ಬಾರದೆ ಇದ್ದಾಗ ಅದು ಸಂಪೂರ್ಣವಾಗಿ ಮತ್ತೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಇವರು ಬೆಳೆದು ಯುವಕರಾದರೂ ಮತ್ತೊಬ್ಬರ ಸಹಾಯ, ಅವಲಂಬನೆ ಬೇಕೇ ಬೇಕು. ಚಿಕಿತ್ಸಕ ಹೇಗಿರಬೇಕು?

ಈ ಕೆಲವು ಆಯಾಮಗಳಲ್ಲಿ ತರಬೇತಿ ಕೊಡುವ ಪ್ರಯತ್ನ ಮಾಡಬೇಕು:

* ದಿನನಿತ್ಯದ ಕಾರ್ಯನಿರ್ವಹಿಸಲು ಸಮರ್ಥನಾಗುವಂಥ ನಡವಳಿಕೆ ಕಲಿಸುವುದು.

* ಭಾಷೆ ಬಗ್ಗೆ ಅರಿವು.

* ತಂದೆ–ತಾಯಿಗೆ ಮಗುವಿನ ಕೊರತೆ ಮತ್ತು ಸ್ಥಿತಿಯ ಬಗ್ಗೆ ಮಾಹಿತಿ,  ಮತ್ತು ಆಪ್ತ ಸಲಹೆ.

* ಅಸ್ವಾಭಾವಿಕ ನಡವಳಿಕೆಗಳನ್ನು ಕಡಿಮೆ ಮಾಡುವುದು.

ಈ ಎಲ್ಲ ಪ್ರಯತ್ನಗಳು ಪ್ರತಿದಿನ ಕೆಲವು ಗಂಟೆಗಳ ಕಾಲ ನಡೆಯಬೇಕು. ಮತ್ತು ಬಹಳ ಸಮಯದವರೆಗೆ ನಡೆಸಬೇಕು.

ಇದಲ್ಲದೇ ವೈದ್ಯಕೀಯ ಸಹಾಯವೂ ಬೇಕಾಗುತ್ತದೆ.

ಹೆಸರನ್ನು ಒಮ್ಮೆ ಅವರ ಕಾರ್ಡ್‌ ನೋಡಿ, ಖಾತ್ರಿ ಮಾಡಿಕೊಳ್ಳಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.