ಶನಿವಾರ, ಮೇ 8, 2021
18 °C

ಆಡಳಿತ ಸುಧಾರಣೆಗೆ ಶಿವಾಜಿ ಮಾದರಿ: ಮಹದೇವಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಭಾರತೀಯ ಇತಿಹಾಸದಲ್ಲಿ ಶೌರ್ಯ, ಸಾಹಸದ ಮೂಲಕ ಮಹಾರಾಜ ಎಂಬ ಕೀರ್ತಿಗೆ ಪಾತ್ರರಾಗಿದ್ದ ಛತ್ರಪತಿ ಶಿವಾಜಿ ಉತ್ತಮ ಆಡಳಿತ ಸುಧಾರಣಾ ನೀತಿಗಳನ್ನು ಜಾರಿಗೊಳಿಸುವ ಮೂಲಕ ಶ್ರೇಷ್ಠ ಆಡಳಿತಗಾರನಾಗ್ದ್ದಿದರು~ ಎಂದು ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮಹದೇವಮ್ಮ ಬಣ್ಣಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಹಗೀರು ಪದ್ಧತಿಯ ನಿಷೇಧ, ಕಾಯಂ ಸೇವಾ ವ್ಯವಸ್ಥೆ ಜಾರಿ, ಸುಧಾರಿತ ನೌಕದಳ ಸೇರಿದಂತೆ ಹಲವು ಆಡಳಿತ ವಿಷಯದಲ್ಲಿ ಶಿವಾಜಿ ಸುಧಾರಣೆಗೆ ಶ್ರಮಿಸಿದ್ದಾರೆ.ಆ ಮೂಲಕ ದಕ್ಷ ಆಳ್ವಿಕೆ ನಡೆಸಿದರು. ಹಿಂದೂ ಧರ್ಮದ ಪೋಷಣೆಗೆ ವಿಶೇಷ ಕಾಳಜಿ ವಹಿಸಿದ್ದರು. ಅನ್ಯಧರ್ಮಗಳನ್ನು ಕೂಡ ಸಮಾನವಾಗಿ ಕಂಡರು. ಹೆಚ್ಚಿನ ಶಿಕ್ಷಣ ಪಡೆಯದಿದ್ದರೂ ಸಾಹಿತ್ಯ ಕುರಿತು ಅವರಿಗೆ ಹೆಚ್ಚಿನ ಒಲವು ಇತ್ತು ಎಂದರು.ಶಿವಾಜಿಗೆ ಸಮಕಾಲೀನ ಸಂತರ ಬಗ್ಗೆ ವಿಶೇಷ ಗೌರವವಿತ್ತು. ಪರಧರ್ಮ ಸಹಿಷ್ಣುತೆಯ ಗುಣವಿತ್ತು. ನೌಕಾಪಡೆ ಯೊಂದಿಗೆ ಸಾಮ್ರಾಜ್ಯದ ವಿಸ್ತರಣೆಗೂ ಅವರ ಮುಂದಾಗಿದ್ದರು. ತನ್ನ 14ನೇ ವಯಸ್ಸಿಗೆ `ಗೆರಿಲ್ಲಾ~ ಯುದ್ಧ ತಂತ್ರದ ಮೂಲಕ ಶತ್ರುಗಳನ್ನು ಸೆದೆಬಡಿದು ಸಾಮ್ರಾಜ್ಯ ಕಟ್ಟಿದರು. ಶಿವಾಜಿಯ ಮಾನವೀಯ ಗುಣಗಳು ನಮಗೆ ಮಾದರಿಯಾಗಿವೆ ಎಂದು ಹೇಳಿದರು.ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಶಿವಾಜಿ ಅವರದು ಆಕರ್ಷಕ ವ್ಯಕ್ತಿತ್ವ. ಶೌರ್ಯ, ಸಾಹಸಕ್ಕೆ ಹೆಸರಾಗಿದ್ದ ಶಿವಾಜಿ ಮೊಘಲ್ ಸಾಮ್ರೋಜ್ಯಕ್ಕೆ ಸಿಂಹಸ್ವಪ್ನವಾಗಿ ಕಾಡಿ ದರು. ಮೊಘಲರಿಂದಲೇ ಗುಣಗಾನ, ಹೊಗಳಿಕೆಗೂ ಪಾತ್ರರಾದರು ಎಂದರು.ಮರಾಠ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾ ಘಟಕದ ಮುಖಂಡರ ಬೇಡಿಕೆಗೆ ಪತ್ರಿಕ್ರಿಯಿಸಿದ ಅವರು, ಜಿಲ್ಲಾಡಳಿತ ಹಾಗೂ ನಗರಸಭೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ ಸಮಾರಂಭ ಉದ್ಘಾಟಿಸಿ ದರು. ಉಪಾಧ್ಯಕ್ಷ ಕೆ. ಈಶ್ವರ್, ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರ  ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ನಗರಸಭೆ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟರಾವ್ ಸಾಠೆ, ಉಪಾ ಧ್ಯಕ್ಷ ಚಂದ್ರಶೇಖರ್, ಮುಖಂಡರಾದ ನರಸಿಂಹರಾವ್, ವೆಂಕಟರಾವ್ ಗಾಯಕವಾಡ್, ಮಮತಾಬಾಯಿ, ಈಶ್ವರ್‌ರಾವ್, ಶಂಕರರಾವ್, ಭೈರೋ ಜಿರಾವ್ ಇತರರು ಹಾಜರಿದ್ದರು.ಬಸವ ಜಯಂತಿ ಇಂದು

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳಿಂದ ಏ. 24ರಂದು ಬಸವೇಶ್ವರರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 10ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಜಿ.ಪಂ. ಅಧ್ಯಕ್ಷೆ ಕೆ. ರಾಜೇಶ್ವರಿ  ಚಾಲನೆ ನೀಡುವರು.ಬೆಳಿಗ್ಗೆ 11.30ಗಂಟೆಗೆ ನಗರದ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಆಯೋಜಿಸಿರುವ ಜನ್ಮ ದಿನಾಚರಣೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸುವರು. ಸಂಸದ ಆರ್. ಧ್ರುವನಾರಾಯಣ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯುತ್ ವ್ಯತ್ಯಯ ನಾಳೆ

ಕೊಳ್ಳೇಗಾಲ- ತಲಕಾಡು ಮಾರ್ಗದಲ್ಲಿ ಮಧ್ಯಂತರ ಟವರ್ ಅಳವಡಿಸುವ ಕಾಮಗಾರಿ ಏ. 25ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆವರೆಗೆ ಆಲ್ದೂರು, ಕುದೇರು, ಮಂಗಲ, ನವಿಲೂರು, ಕೆಂಪನಪುರ ಹಾಗೂ ಸಂತೇಮರಹಳ್ಳಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.