ಆತ್ಮಹತ್ಯಾ ದಾಳಿಗೆ 14 ಬಲಿ

7

ಆತ್ಮಹತ್ಯಾ ದಾಳಿಗೆ 14 ಬಲಿ

Published:
Updated:
ಆತ್ಮಹತ್ಯಾ ದಾಳಿಗೆ 14 ಬಲಿ

ಕಾಬೂಲ್(ಎಎಫ್‌ಪಿ): ನ್ಯಾಟೊ ಪಡೆಯ ಬಸ್ಸಿಗೆ ತಾಲಿಬಾನ್ ಉಗ್ರರ ಬಾಂಬ್ ತುಂಬಿದ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ 14 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಇಲ್ಲಿ ನಡೆದಿದೆ. ಕಾಬೂಲ್‌ನ ಆಗ್ನೇಯ ದಿಕ್ಕಿನಲ್ಲಿ ಅಮೆರಿಕದ ಸೈನಿಕರಿದ್ದ ನ್ಯಾಟೊ ಪಡೆಯ ಬಸ್ಸಿಗೆ ಉಗ್ರರ ಟೊಯೊಟಾ ಸೆಡನ್ ಕಾರು ಡಿಕ್ಕಿ ಹೊಡೆದು ಬಾಂಬ್ ಸ್ಫೋಟಿಸಿದ್ದರಿಂದ ನ್ಯಾಟೊ ಪಡೆಗೆ ಸೇರಿದ 10 ಅಮೆರಿಕ ಸೈನಿಕರು, ಮೂವರು ನಾಗರಿಕರು ಮತ್ತು ಒಬ್ಬ ಪೊಲೀಸ್ ಸತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಕಾರು ಬಾಂಬ್ ಸ್ಫೋಟದ ರಭಸಕ್ಕೆ ನ್ಯಾಟೊ ಪಡೆಯ ಬಸ್ ಬುಡಮೇಲಾಗಿ ಬಿತ್ತು ಮತ್ತು ಜೋರಾಗಿ ಬೆಂಕಿ ಹೊತ್ತಿಕೊಂಡಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಲಿಕಾಪ್ಟರ್ ಮೃತ ದೇಹಗಳನ್ನು ಸಾಗಿಸಿದವು ಎಂದು ಸ್ಥಳದಲ್ಲಿ ಇದ್ದವರು ತಿಳಿಸಿದ್ದಾರೆ.ಕಳೆದ ಆಗಸ್ಟ್6ರಂದು ಪೂರ್ವ ಆಫ್ಘಾನಿಸ್ತಾನ ಪ್ರಾಂತ್ಯದಲ್ಲಿ ತಾಲಿಬಾನ್ ಬಂಡುಕೋರರು ಅಮೆರಿಕ ನೇತೃತ್ವದ ನ್ಯಾಟೊ ಪಡೆಗೆ ಸೇರಿದ ಹೆಲಿಕಾಪ್ಟರ್‌ವೊಂದನ್ನು ಹೊಡೆದುರುಳಿಸಿದ್ದರು. ಈ ಪ್ರಕರಣದ ಬಳಿಕ ನಡೆದ ಎರಡನೇ ಅತಿ ದೊಡ್ಡ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry