ಶುಕ್ರವಾರ, ಮೇ 14, 2021
25 °C

ಆತ್ಮಹತ್ಯಾ ದಾಳಿ: 20 ಮಂದಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್, (ಪಿಟಿಐ): ಸರ್ಕಾರದ ಪರವಾಗಿದ್ದ ಬುಡಕಟ್ಟು ಜನಾಂಗದ ಮುಖ್ಯಸ್ಥನ ಅಂತಿಮಯಾತ್ರೆ ವೇಳೆ  ಬುಧವಾರ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದು, 50 ಜನರು ಗಾಯಗೊಂಡಿದ್ದಾರೆ.  ವಾಯವ್ಯ ಪಾಕಿಸ್ತಾನದ ಗಲಭೆಪೀಡಿತ ಖೈಬರ್-ಪಖ್ತುನಖ್ವಾ ಪ್ರಾಂತ್ಯದ ಜಂದೂಲ್ ಪ್ರದೇಶದಲ್ಲಿ ಅಂತಿಮಯಾತ್ರೆ  ಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ಯಾವುದೇ ಸಂಘಟನೆಗಳು ಕೃತ್ಯದ ಹೊಣೆ ಹೊತ್ತಿಲ್ಲ. ತಾಲಿಬಾನ್ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತ: 30ಸಾವು

ಲುವಾಂಡ(ಎಎಫ್‌ಪಿ):
ಯುದ್ಧ ವಿಮಾನವೊಂದು ನೆಲಕ್ಕಪ್ಪಳಿಸಿದ ಪರಿಣಾಮ ಮೂವರು ಸೇನಾಧಿಕಾರಿಗಳು ಸೇರಿದಂತೆ 30 ಜನ ಮೃತಪಟ್ಟಿರ‌್ದುವ  ಘಟನೆ ಗುರುವಾರ ಇಲ್ಲಿನ ಹುವಾಂಬೊ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುರಂತಕ್ಕೆ ನಿಖರ ಕಾರಣ ತಿಳಿದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.