ಸೋಮವಾರ, ಮೇ 17, 2021
25 °C

ಆತ್ಮಹತ್ಯಾ ಬಾಂಬ್ ದಾಳಿಗೆ 14 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಶಾವರ(ಪಿಟಿಐ): ಪ್ರಾರ್ಥನೆ ವೇಳೆ ನಡೆದ ಆತ್ಮಹತ್ಯಾ ದಾಳಿಯಲ್ಲಿ 14 ಮಂದಿ ಸ್ಥಳದಲ್ಲೇ ಸಾವಿಗೀಡಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಪೆಶಾವರದಲ್ಲಿ ಶುಕ್ರವಾರ ನಡೆದಿದೆ.ಪೆಶಾವರದ ಗುಲ್ಷನ್ ಕಾಲೊನಿಯ ಹುಸೇನಿಯಾ ಮದರಸಾದಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ 200 ಮಂದಿ ಸೇರಿದ್ದರು. ಈ ಸಂದರ್ಭದಲ್ಲಿ ಇಬ್ಬರು ಸಹಚರರೊಂದಿಗೆ ಆಗಮಿಸಿದ ಆತ್ಮಹತ್ಯಾ ದಾಳಿಕೋರ ತನ್ನನ್ನು ಸ್ಫೋಟಿಸಿಕೊಂಡ. ಸ್ಫೋಟದ ನಂತರ ಇಬ್ಬರು ಸಹಚರರು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರಾರ್ಥನಾ ಸ್ಥಳಕ್ಕೆ ಆಗಮಿಸುವ ಸಮಯದಲ್ಲಿ ಆತ್ಮಹತ್ಯಾ  ದಾಳಿಕೋರ ಮತ್ತು ಆತನ ಇಬ್ಬರು ಸಹಚರರು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದ ಪೊಲೀಸ್‌ನನ್ನು ಗುಂಡಿಕ್ಕಿ ಕೊಂದರು. ಸೂಕ್ತ ಬಂದೋಬಸ್ತ್ ವ್ಯವಸ್ಥೆಯ ನಡುವೆಯೂ ದಾಳಿಕೋರರು ಒಳಗೆ  ನುಸುಳಿ ಈ ದುಷ್ಕೃತ್ಯ ಎಸಗಿದರು.ದಾಳಿಕೋರರು ಮದರಸಾದೊಳಗೆ ನುಸುಳಿದಾಗ ಜನರು ಪ್ರಾರ್ಥನೆಯಲ್ಲಿ ಮಗ್ನರಾಗಿದ್ದರು. ಈ ಸಂದರ್ಭ ನೋಡಿ ದಾಳಿಕೋರ ತನ್ನನ್ನು ಸ್ಫೋಟಿಸಿಕೊಂಡ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ದಾಳಿಯ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.