ಮಂಗಳವಾರ, ಜೂನ್ 22, 2021
29 °C

ಆದರ್ಶ ವಸತಿ ಕಟ್ಟಡ ಹಿಂತಿರುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕಳಂಕಿತ ಆದರ್ಶ ಸಂಸ್ಥೆಯ ಸದಸ್ಯರು ತಮ್ಮ ತಪ್ಪನ್ನು ಅರಿತುಕೊಂಡು, ವಿವಾದಾತ್ಮಕ ವಸತಿ ಸಮುಚ್ಛಯವನ್ನು ರಕ್ಷಣಾ ಸಚಿವಾಲಯಕ್ಕೆ ಒಪ್ಪಿಸುವಂತೆ ಗುರುವಾರ ಸಲಹೆ ನೀಡಿರುವ ಬಾಂಬೆ ಹೈಕೋರ್ಟ್, `ದೇಶದ ಭದ್ರತೆಗೆ ಪ್ರಥಮ ಪ್ರಾಮುಖ್ಯತೆ~ ನೀಡಲು ಸೂಚಿಸಿದೆ.`ಸಂಸ್ಥೆ ತಪ್ಪನ್ನು ಒಪ್ಪಿಕೊಂಡು, ವಿವಾದಿತ ಕಟ್ಟಡವನ್ನು ಸಂಬಂಧಿಸಿದವರಿಗೆ ವಾಪಸು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನೀವು ತಪ್ಪು ಮಾಡಿರಬಹುದು. ಆದರೆ ಹೃದಯವನ್ನು ಬದಲಿಸಿಕೊಳ್ಳಲು ಅವಕಾಶವಿದೆ. ನೀವು ಕೊಲೆಗಾರರಲ್ಲ ಅಥವಾ ಉಗ್ರಗಾಮಿಗಳಲ್ಲ ಅಥವಾ ಕಟ್ಟಾ ಅಪರಾಧಿಗಳಲ್ಲ. ಆದ್ದರಿಂದ ಕಟ್ಟಡವನ್ನು ರಕ್ಷಣಾ ಸಚಿವಾಲಯಕ್ಕೆ ಹಿಂತಿರುಗಿಸಿ~ ಎಂದು ನ್ಯಾಯಮೂರ್ತಿಗಳಾದ ಪಿ.ಬಿ. ಮಜುಂದಾರ್ ಮತ್ತು ಆರ್.ಡಿ. ಧನುಕಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಕಿವಿಮಾತು ಹೇಳಿತು.`ನಾವು ಉಗ್ರರ ದಾಳಿಯಿಂದ ಪಾಠ ಕಲಿಯಬೇಕಿದೆ. ಉಗ್ರರು ತಾಜ್ ಹೋಟೆಲ್ ತನಕ ಈಗಾಗಲೇ ಬಂದಿದ್ದಾರೆ. ನಾಳೆ ಅವರು ಸೂಕ್ಷ್ಮ ರಕ್ಷಣಾ ತಾಣಗಳ ಮೇಲೆ ದಾಳಿ ನಡೆಸಬಹುದು. ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು~`ಆದರ್ಶ ಸಂಸ್ಥೆಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಮತ್ತು ಯೋಜನಾ ಪ್ರಾಧಿಕಾರ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ ನ್ಯಾಯಪೀಠ, `ರಕ್ಷಣಾ ಸಚಿವಾಲಯದಿಂದ ಏಕೆ ನಿರಾಕ್ಷೇಪಣಾಪತ್ರ ಕೇಳಲಿಲ್ಲ? ಈ ಭೂಮಿ ರಕ್ಷಣಾ ನೆಲೆಗಳಿಗೆ ಬಹಳ ಸಮೀಪದಲ್ಲಿದ್ದು, ಆಡಳಿತವು ಅನುಮತಿ ಮಂಜೂರು ಮಾಡುವ ಮುನ್ನ ಭದ್ರತಾ ಅಂಶ ಪರಿಶೀಲಿಸಬೇಕಿತ್ತು~ ಎಂದು ನ್ಯಾಯಪೀಠ ಹೇಳಿದೆ.

ಅಧಿಕಾರಿಗಳ ಅಮಾನತು

ಮುಂಬೈ (ಪಿಟಿಐ):
ತಮ್ಮ ಹತ್ತಿರದ ಬಂಧುಗಳು ಮತ್ತು ಇತರ ಅನರ್ಹರಿಗೆ ಸದಸ್ಯತ್ವ ಮಂಜೂರು ಸೇರಿದಂತೆ ಆದರ್ಶ ವಸತಿ ಹಗರಣದಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಸರ್ಕಾರದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಗುರುವಾರ ಅಮಾನತು ಮಾಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.