ತಂಬಾಕು ಉತ್ಪನ್ನಗಳ ಸೇವನೆಗೂ ಕ್ಯಾನ್ಸರ್ಗೂ ಇರುವ ನಂಟಿನ ಬಗ್ಗೆ ಈಗ ಚರ್ಚೆ ಚಾಲನೆಯಲ್ಲಿದೆ. ಸರ್ಕಾರ ತಂಬಾಕು ಉತ್ಪನ್ನಗಳ ಮೇಲಿನ ಎಚ್ಚರಿಕೆ ಸಂದೇಶಗಳ ಗಾತ್ರವನ್ನು ಹಿಗ್ಗಿಸಿದರೆ, ಸಾಕಷ್ಟು ಜನ ತಂಬಾಕಿನೆಡೆಗೆ ವಿಮುಖರಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ಕೆ.ಬಿ.ಲಿಂಗೇಗೌಡ ಅವರು ತಂಬಾಕು ಸೇವನೆ ಹಾಗೂ ಕ್ಯಾನ್ಸರ್ ನಡುವಿನ ಸಂಬಂಧಗಳ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ:

* ತಂಬಾಕು ಸೇವನೆಗೂ ಕ್ಯಾನ್ಸರ್ಗೂ ಏನು ಸಂಬಂಧ? ತಂಬಾಕು ಸೇವನೆಯಿಂದ ಯಾವ ಬಗೆಯ ಕ್ಯಾನ್ಸರ್ಗಳು ಬರಬಹುದು?
ತಂಬಾಕು ಸೇವನೆಗೂ ಕ್ಯಾನ್ಸರ್ಗೂ ನಿಕಟ ಸಂಬಂಧವಿದೆ. ಸುಮಾರು ನಾಲ್ಕು ನೂರು ಕ್ಯಾನ್ಸರ್ಕಾರಕ ರಾಸಾಯನಿಕಗಳು ತಂಬಾಕಿನಲ್ಲಿ ಇರುವುದರಿಂದ ಅವು ಕ್ಯಾನ್ಸರ್ಗೆ ಕಾರಣವಾಗುತ್ತವೆ. ಹೊಗೆಸೊಪ್ಪು, ಬೀಡಿ, ಸಿಗರೇಟು, ನಶ್ಯ, ಕಡ್ಡಿಪುಡಿ, ಗುಟ್ಕಾ ಇವೆಲ್ಲವೂ ತಂಬಾಕು ಉತ್ಪನ್ನಗಳು. ಬಾಯಿ ಕ್ಯಾನ್ಸರ್, ಅನ್ನನಾಳ, ನಾಲಿಗೆ, ಧ್ವನಿ ಪೆಟ್ಟಿಗೆ ಕ್ಯಾನ್ಸರ್, ದವಡೆ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹೀಗೆ ಹಲವು ರೀತಿಯ ಕ್ಯಾನ್ಸರ್ಗಳಿಗೆ ತಂಬಾಕು ಮೂಲ.

* ತಂಬಾಕು ಉತ್ಪನ್ನಗಳ ಮೇಲಿನ ಎಚ್ಚರಿಕೆ ಸಂದೇಶದ ಗಾತ್ರ ಹಿಗ್ಗಿಸುವುದು ಪರಿಣಾಮಕಾರಿಯೇ?
ಗಾತ್ರ ಹಿಗ್ಗಿಸುವುದರಿಂದ ಸಂಪೂರ್ಣ ಬದಲಾವಣೆ ಸಾಧ್ಯ ಎನ್ನಲಾಗದು. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಒಳ್ಳೆಯದೇ. ಸಂದೇಶದ ಗಾತ್ರ ಆಯಾ ತಂಬಾಕು ಕಂಪೆನಿಗಳ ಉತ್ಪನ್ನಗಳ ಗಾತ್ರವನ್ನೂ ಅವಲಂಬಿಸಿರುತ್ತದೆ. ಇದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.

* ತಂಬಾಕಿಗೂ, ಕ್ಯಾನ್ಸರ್ಗೂ ಯಾವುದೇ ಸಂಬಂಧವಿಲ್ಲ ಎಂಬ ವಿವಾದಿತ ಹೇಳಿಕೆ ಬಗ್ಗೆ ಏನು ಹೇಳುವಿರಿ?
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅದು ತಿಳಿವಳಿಕೆ ಇಲ್ಲದೆ ಕೊಟ್ಟ ಹೇಳಿಕೆ ಎಂದಿದ್ದಾರೆ. ಅಷ್ಟೇ ಅಲ್ಲ, ಅಂತಹ ಹೇಳಿಕೆ ನೀಡಲು ಅವರಲ್ಲೇ ನಿಖರ ಪುರಾವೆಯಿಲ್ಲ. ಇದುವರೆಗೂ ತಂಬಾಕು ಸಂಬಂಧಿತ ಕ್ಯಾನ್ಸರ್ಗಳ ಬಗ್ಗೆ ವೈಜ್ಞಾನಿಕವಾಗಿ ಸಾಕಷ್ಟು ಅಧ್ಯಯನಗಳು ನಡೆದಿವೆ. ಗುಟ್ಕಾ ಒಂದರಿಂದಲೇ ಕ್ಯಾನ್ಸರ್ ಬರುವ ಸಾಧ್ಯತೆಗಳ ಕುರಿತು ಹಲವು ದಾಖಲೆಗಳಿವೆ.

ನಮ್ಮ ಸಂಸ್ಥೆಯಲ್ಲೇ ಬಾಯಿ ಕ್ಯಾನ್ಸರ್, ಕುತ್ತಿಗೆ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ಗಳ ಬಗ್ಗೆ ಐದಾರು ಸಂಶೋಧನೆಗಳನ್ನು ನಡೆಸಿದ್ದೇವೆ. ಅಂತರ ರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಬಾಯಿ ಕ್ಯಾನ್ಸರ್, ಅನ್ನನಾಳ, ನಾಲಿಗೆ, ಧ್ವನಿ ಪೆಟ್ಟಿಗೆ ಕ್ಯಾನ್ಸರ್, ದವಡೆ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಎಲ್ಲವೂ ತಂಬಾಕು ಸಂಬಂಧಿತ ಕ್ಯಾನ್ಸರ್ಗಳು ಎಂಬುದನ್ನು ದೃಢಪಡಿಸಿದೆ. ನಮ್ಮ ಅಧ್ಯಯನವೊಂದರಲ್ಲೂ ತಂಬಾಕು ಬಳಸದ ಹಾಗೂ ತಂಬಾಕು ಬಳಸಿದ ಕ್ಯಾನ್ಸರ್ ರೋಗಿಗಳನ್ನು ತುಲನೆ ಮಾಡಿದಾಗ, ತಂಬಾಕು ಸೇವನೆ ಮಾಡಿದವರಲ್ಲಿ ಆ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

* ದೇಶದಲ್ಲಿ ತಂಬಾಕು ಸಂಬಂಧಿ ಕ್ಯಾನ್ಸರ್ ಸ್ಥಿತಿಗತಿ?
ದೇಶದಲ್ಲಿ 35– 64 ವರ್ಷದ ಒಳಗಿನವರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚು. ತಂಬಾಕು ಸಂಬಂಧಿ ಕ್ಯಾನ್ಸರ್ನಲ್ಲಿ ನಮ್ಮ ದೇಶಕ್ಕೂ ವಿದೇಶಗಳಿಗೂ ವ್ಯತ್ಯಾಸವಿದೆ. ವಿದೇಶಗಳಲ್ಲಿ ಹೆಚ್ಚು ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು. ನಮ್ಮಲ್ಲಿ ಜಗಿಯುವ ಅಥವಾ ಬೀಡಿ ಸೇವನೆಯಿಂದ ಬರಬಹುದಾದ ಕ್ಯಾನ್ಸರ್ಗಳ ಪ್ರಮಾಣ ಹೆಚ್ಚು. ಇಲ್ಲಿನ ಧೂಮಪಾನಿಗಳಲ್ಲಿ ಶೇ 75ರಷ್ಟು ಜನರು ಬೀಡಿ ಸೇದುತ್ತಾರೆ.

ತಂಬಾಕು ಸಂಬಂಧಿತ ಕ್ಯಾನ್ಸರ್ಗಳಿಗೆ ಬೀಡಿ ಶೇ 80ರಷ್ಟು ಕಾರಣವಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಹೋಲಿಸುವುದಾದರೆ, ಮೊದಲೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಮಾಣ ಹೆಚ್ಚಿತ್ತು. ಈಗ ನಗರಗಳಲ್ಲಿ ಮಹಿಳೆಯರು ಸಿಗರೇಟ್ ಸೇದುವ ಅಭ್ಯಾಸ ಹೆಚ್ಚಾಗಿರುವುದರಿಂದ ಇಲ್ಲೂ ಅಷ್ಟೇ ಪ್ರಮಾಣದಲ್ಲಿ ದಾಖಲಾಗುತ್ತಿದೆ.

* ನಮ್ಮ ದೇಶದ ತಂಬಾಕು ಉತ್ಪನ್ನಕ್ಕೂ ವಿದೇಶಗಳ ತಂಬಾಕು ಉತ್ಪನ್ನಕ್ಕೂ ಇರುವ ವ್ಯತ್ಯಾಸವೇನು?
ವಿದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸಂಸ್ಕರಣೆ ಮಾಡಿರುತ್ತಾರೆ. ಇಲ್ಲಿ ಹೆಚ್ಚು ಸಂಸ್ಕರಿಸದ ಬೀಡಿ ಸೇವನೆಯೇ ಹೆಚ್ಚು. ಆದ್ದರಿಂದ ಇಲ್ಲಿ ಕ್ಯಾನ್ಸರ್ ಪ್ರಮಾಣವೂ ಅಧಿಕ.

* ತಂಬಾಕು ಸಂಬಂಧಿತ ಕ್ಯಾನ್ಸರ್ ವಿಷಯದಲ್ಲಿ ನಿಮ್ಮ ಸಂಸ್ಥೆಯ ಸ್ಥಿತಿಗತಿ ಹೇಗಿದೆ?
ಕಿದ್ವಾಯಿ ಸಂಸ್ಥೆಗೆ ಪ್ರತಿ ವರ್ಷ ಅಂದಾಜು 20 ಸಾವಿರ ಕ್ಯಾನ್ಸರ್ ಪ್ರಕರಣಗಳನ್ನು ನೋಂದಣಿ ಮಾಡಿಕೊಳ್ಳುತ್ತೇವೆ. ಇದರಲ್ಲಿ ಸುಮಾರು ಹತ್ತು ಸಾವಿರ ಪ್ರಕರಣಗಳು ದೃಢಪಡುತ್ತವೆ. ಇವುಗಳಲ್ಲಿ ಸುಮಾರು ಮೂರು ಸಾವಿರ ಪ್ರಕರಣಗಳು ತಂಬಾಕು ಸಂಬಂಧಿತವಾಗಿರುತ್ತವೆ.

* ಒಬ್ಬ ಕ್ಯಾನ್ಸರ್ ರೋಗಿ ಸತ್ತರೆ ಆತನಿಂದ ದೇಶಕ್ಕಾಗುವ ಆರ್ಥಿಕ ನಷ್ಟ ಎಂಥದ್ದು?
ಮೃತ ವ್ಯಕ್ತಿ ಯಾವ ವೃತ್ತಿಯಲ್ಲಿದ್ದ ಎನ್ನುವುದನ್ನು ಅದು ಅವಲಂಬಿಸಿರುತ್ತದೆ. ತಂಬಾಕು ಸೇವನೆಯಿಂದ ಕಾಯಿಲೆಗೊಳಗಾಗಿ ಸಾವಿಗೀಡಾಗುವುದೊಂದೇ ಮುಖ್ಯವಲ್ಲ. ಕಾಯಿಲೆಯಿಂದ ಆತನ ಸಾಮರ್ಥ್ಯ ಕುಂದುತ್ತದೆ. ಈ ಅವಧಿಯಲ್ಲಿ ಆತನಿಂದ ಆರ್ಥಿಕ ನಷ್ಟವೂ ಉಂಟಾಗುತ್ತದೆ.

* ತಂಬಾಕು ಸಂಬಂಧಿತ ಕ್ಯಾನ್ಸರ್ ನಿರ್ಮೂಲನೆಗೆ ಪರಿಣಾಮಕಾರಿ ಮಾರ್ಗ ಯಾವುದು?
ದೇಶಕ್ಕೆ ಅತಿ ಹೆಚ್ಚು ಆದಾಯ ಬರುವುದು ಸಿಗರೇಟ್ ಮತ್ತು ಬೀಡಿಯಿಂದ. ಆದ್ದರಿಂದ ಇದನ್ನು ನಿಷೇಧಿಸುವಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಜನರಿಗೆ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕೊಟ್ಟರೂ ಪ್ರಯೋಜನ ಇರುವುದಿಲ್ಲ. ಶೇ 80ರಷ್ಟು ಮಂದಿ ಕ್ಯಾನ್ಸರ್ ಅಂತಿಮ ಹಂತ ತಲುಪುವಾಗ ಚಿಕಿತ್ಸೆಗೆ ಬರುತ್ತಾರೆ. ಹಳ್ಳಿಗಳಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಲು ಸೂಕ್ತ ಸೌಲಭ್ಯಗಳು ಇರುವುದಿಲ್ಲ. ಇದರಿಂದ ಕ್ಯಾನ್ಸರ್ನಿಂದ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚು.

ತಮಿಳುನಾಡಿನಲ್ಲಿ ಇತ್ತೀಚೆಗೆ ಒಂದು ಸಂಶೋಧನೆ ನಡೆಸಲಾಗಿದೆ. ಅಲ್ಲಿ ಕ್ಯಾನ್ಸರ್ ಎಂಬ ಪದವನ್ನೇ ಕೇಳದ ಶೇ 40ರಷ್ಟು

ಜನರಿದ್ದಾರೆ. ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ ಎಂಬುದನ್ನು ಶೇ 10–15ರಷ್ಟು ಜನ ಮಾತ್ರ ಒಪ್ಪಿಕೊಳ್ಳುತ್ತಾರೆ. ಕ್ಯಾನ್ಸರ್ ಬರುವ ಲಕ್ಷಣಗಳ ಕುರಿತು ಕೇವಲ ಶೇ 15ರಷ್ಟು ಜನರಿಗೆ ಮಾತ್ರ ತಿಳಿವಳಿಕೆ ಇದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಇತರ ದೇಶಗಳಿಗಿಂತ ನಮ್ಮಲ್ಲಿ ಕಡಿಮೆ ಪ್ರಮಾಣದಲ್ಲಿದೆ.

ಈ ಬಗ್ಗೆಯೂ ಗಮನ ಹರಿಸಬೇಕಾದುದು ಬಹಳ ಮುಖ್ಯ. ಇತ್ತೀಚಿನ ಸಂಶೋಧನೆಯೊಂದರಲ್ಲಿ, ಗರ್ಭಕೋಶದ ಕ್ಯಾನ್ಸರ್ಗೆ ತಂಬಾಕು ಪರೋಕ್ಷ ಕಾರಣ ಎಂಬುದು ಸಾಬೀತಾಗಿದೆ. ಆದರೆ ಅದನ್ನು ತಂಬಾಕು ಸಂಬಂಧಿತ ಕ್ಯಾನ್ಸರ್ ಅಡಿಯಲ್ಲಿ ಸೇರಿಸಿಲ್ಲ. ಅದನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಈ ಪ್ರಮಾಣ ಶೇ 70 ಮುಟ್ಟುತ್ತದೆ.

ವಿಶ್ವದ 6 ಅತಿ ದೊಡ್ಡ ತಂಬಾಕು ಕಂಪೆನಿಗಳ ಲಾಭ
750 ಕೋಟಿ ಪ್ರತಿದಿನ
87 ಸಾವಿರ ರೂಪಾಯಿ ಪ್ರತಿ ಸೆಕೆಂಡಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.