ಸೋಮವಾರ, ಜೂನ್ 14, 2021
26 °C

ಆದಿಚುಂಚನಗಿರಿಜಾತ್ರೆ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ತಾಲ್ಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮಾರ್ಚ್‌ 9 ರಿಂದ 9 ದಿನಗಳ ಕಾಲ ನಡೆಯಲಿದೆ.ಜಾತ್ರೆಯಲ್ಲಿ ನಿತ್ಯ ಅನ್ನದಾಸೋಹ ನಡೆಯಲಿದೆ. ಭಕ್ತರಿಗೆ ಅಡಚಣೆ ಉಂಟಾಗದಂತೆ 5 ಕಡೆ ವಿಶೇಷ ಗ್ಯಾಲರಿ ನಿರ್ಮಿಸಿ ಅನ್ನದಾಸೋಹ ನಡೆಸಲಾಗುವುದು.ಪ್ರತಿ ವರ್ಷದಂತೆ ಈ ವರ್ಷವೂ ಕೃಷಿಮೇಳ ಏರ್ಪಡಿಸಲಾಗಿದೆ. ಕೃಷಿ­ಯಲ್ಲಿ ಇದುವರೆಗಿನ ಆವಿಷ್ಕಾರ­ಗಳು, ಆಧುನಿಕ ಕೃಷಿ ಪದ್ಧತಿ, ಆಧುನಿಕ ಯಂತ್ರಗಳ ಬಳಕೆ ಮುಂತಾದ ವಿಷಯಗಳ ಬಗ್ಗೆ ಪ್ರತಿದಿನ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು, ಕುಲಪತಿಗಳು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿ, ಸಂವಾದ ನಡೆಸಲಿದ್ದಾರೆ.ಕೃಷಿ ವಿಜ್ಞಾನ ಮೇಳದಲ್ಲಿ ರೈತರಿಗೆ ಉಪಯುಕ್ತವಾಗುವ ಅನೇಕ  ಮಳಿಗೆಗಳು ಇರುವುದು ಈ ಜಾತ್ರೆಯ ಹತ್ತು ಹಲವು ಆಕರ್ಷಣೆಗಳಲ್ಲಿ ಒಂದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.