ಆನೆ ದಂತ ಮಾರಾಟ: ಆರೋಪಿಗಳ ಬಂಧನ

ಮಂಗಳವಾರ, ಜೂಲೈ 16, 2019
24 °C

ಆನೆ ದಂತ ಮಾರಾಟ: ಆರೋಪಿಗಳ ಬಂಧನ

Published:
Updated:

ಆನೇಕಲ್: ಆನೆ ದಂತ ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ ಆರೋಪಿಗಳಿಂದ ಆರು ದಂತ ಹಾಗೂ ಒಂದು ನಾಡಬಂದೂಕನ್ನು ಹೆಬ್ಬಗೋಡಿ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.ತಮಿಳುನಾಡಿನ ಡೆಂಕಣಿಕೋಟೆ ಮೂಲದ ಚಂದ್ರಯ್ಯ (20), ಬಸವರಾಜು (38), ಬಸವಲಿಂಗಯ್ಯ (30), ಮುರುಗನ್ (32), ಬೆಂಗಳೂರಿನ ಜೀವನ್ ಭೀಮಾ ನಗರದ ಕ್ರಿಸ್ತದಾಸ್ (28), ಶೇಖರ್ (45), ಅಂತೋಣಿಸ್ವಾಮಿ (25) ಬಂಧಿತರು. ತಾಲ್ಲೂಕಿನ ಚಂದಾಪುರ ಸಂತೆಯಲ್ಲಿ ಆನೆ ದಂತ ವ್ಯಾಪಾರ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹೆಬ್ಬಗೋಡಿ ಪಿಎಸ್ಸೈ ಶಶಿಧರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry