ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧದ ಅಪರಾಧ ಪ್ರಕರಣಗಳ ವಿಚಾರಣೆ ದೋಷಾರೋಪ ನಿಗದಿಪಡಿಸಿದ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ತೀರ್ಪು ನೀಡಿದೆ. ಆದರೆ ಈಗಿನ ಪರಿಸ್ಥಿತಿ ಬಹಳ ಭಿನ್ನವಾಗಿದೆ.

ಪ್ರಸ್ತುತ ಲೋಕಸಭೆಯಲ್ಲಿ ಅಪರಾಧ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ 162 ಸಂಸದರಿದ್ದಾರೆ. ಅವರಲ್ಲಿ 76 ಸಂಸದರ ವಿರುದ್ಧ ಕೊಲೆ, ಕೊಲೆಯತ್ನ, ಅಪಹರಣ ಮತ್ತು ದರೋಡೆಯಂತಹ ಗಂಭೀರ ಆರೋಪಗಳಿವೆ. ಕೆಲವು ಪ್ರಕರಣಗಳು ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬಾಕಿ ಇವೆ.
ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ಮತ್ತು ಚುನಾವಣಾ ನಿಗಾ ಸಂಸ್ಥೆಗಳು ಜಂಟಿಯಾಗಿ 2009ರ ಚುನಾವಣೆಗೆ ಮೊದಲು ಈ ಸಂಸದರು ಸಲ್ಲಿಸಿರುವ ಪ್ರಮಾಣಪತ್ರಗಳ ಆಧಾರದಲ್ಲಿ ಅಪರಾಧ ಪ್ರಕರಣಗಳ ವಿಶ್ಲೇಷಣೆ ನಡೆಸಿವೆ.

ಸಂಸದರ ವಿರುದ್ಧ ಪ್ರಕರಣಗಳು ಬಾಕಿ ಇರುವ ಸರಾಸರಿ ಅವಧಿ ಏಳು ವರ್ಷಗಳು (2009ರಲ್ಲಿ ಸಲ್ಲಿಸಿರುವ ಪ್ರಮಾಣಪತ್ರಗಳ ಆಧಾರದಲ್ಲಿ ವಿಶ್ಲೇಷಣೆ ನಡೆಸಲಾಗಿದ್ದು, ಆ ನಂತರದ ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಮತ್ತು ಪ್ರಕರಣಗಳ ಈಗಿನ ಸ್ಥಿತಿಗತಿಯ ಬಗ್ಗೆ ಮಾಹಿತಿಯೂ ಇಲ್ಲ).
306 ಸೆಕ್ಷನ್ಗಳಡಿ ಆರೋಪ: 162 ಸಂಸದರ ವಿರುದ್ಧ ಭಾರತೀಯ ದಂಡ ಸಂಹಿತೆಯ ಒಟ್ಟು 306 ಸೆಕ್ಷನ್ಗಳ ಅಡಿಯಲ್ಲಿ ಆರೋಪ ದಾಖಲಾಗಿವೆ.
ಜೆಎಂಎಂ ಸಂಸದರು ಅತಿ ಹೆಚ್ಚು ಅಂದರೆ 69 ಸೆಕ್ಷನ್ಗಳ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದರೆ, ಬಿಜೆಪಿ ಸಂಸದರು 55 ಮತ್ತು ಎಸ್ಪಿ ಸಂಸದರು 34 ಸೆಕ್ಷನ್ಗಳ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.

ಕಾಂಗ್ರೆಸ್ ಸಂಸದರು 30 ಸೆಕ್ಷನ್ಗಳಡಿಯಲ್ಲಿ ಆರೋಪ ಹೊಂದಿದ್ದಾರೆ. ಜಾರ್ಖಂಡ್ನ ಪಲಮಾವು ಕ್ಷೇತ್ರದ ಜೆಎಂಎಂ ಸಂಸದ ಕಾಮೇಶ್ವರ್ ಬೈಥ ವಿರುದ್ಧ 69 ಸೆಕ್ಷನ್ಗಳ ಅಡಿಯಲ್ಲಿ ಆರೋಪ ದಾಖಲಾಗಿದೆ. ಎರಡನೇ ಬಾರಿ ಟಿಕೆಟ್ ಪಡೆದವರು: 2004ರ ಲೋಕಸಭೆ ಚುನಾವಣೆಯಲ್ಲಿ ಅಪರಾಧ ಪ್ರಕರಣಗಳನ್ನು ಹೊಂದಿದ್ದ 24 ಸಂಸದರು 2009ರಲ್ಲಿ ಪುನರಾಯ್ಕೆಯಾಗಿದ್ದಾರೆ. ಅಪರಾಧ ಪ್ರಕರಣಗಳ ವಿಚಾರಣೆ ಬಾಕಿ ಇದ್ದರೂ ರಾಜಕೀಯ ಪಕ್ಷಗಳು ಅವರಿಗೆ ನೀಡುವುದನ್ನು ಮುಂದುವರಿಸುತ್ತಲೇ ಬಂದಿವೆ.

10 ವರ್ಷಗಳಿಂದ ಬಾಕಿ: 50 ಸಂಸದರ ವಿರುದ್ಧ 136 ಅಪರಾಧ ಪ್ರಕರಣಗಳ ವಿಚಾರಣೆ 10 ವರ್ಷಗಳಿಂದಲೂ ಬಾಕಿ ಇವೆ. ಇವುಗಳಲ್ಲಿ 30 ಸಂಸದರ ವಿರುದ್ಧ ಒಟ್ಟು 58 ಗಂಭೀರ ಪ್ರಕರಣಗಳೇ ಇವೆ.ಜೆಂಎಂಎಂನ ಸಂಸದ ಕಾಮೇಶ್ವರ್ ಬೈಥ ಅವರೇ ನೀಡಿರುವ ಪ್ರಮಾಣ ಪತ್ರದ ಪ್ರಕಾರ, ಅವರ ವಿರುದ್ಧ 10 ಕೊಲೆ ಪ್ರಕರಣಗಳು ಸರಾಸರಿ 12 ವರ್ಷಗಳಿಂದ ಬಾಕಿ ಇವೆ.

ಕಾಂಗ್ರೆಸ್ನ ಗುಡ್ಡು ಪ್ರೇಮಚಂದ್ ಅವರ ವಿರುದ್ಧ ಕೊಲೆ ಪ್ರಕರಣವೊಂದು ಗರಿಷ್ಠ ಅಂದರೆ 29 ವರ್ಷಗಳಿಂದ ಬಾಕಿ ಇದೆ. ಒಂಬತ್ತು ಲೋಕಸಭೆ ಸಂಸದರ ವಿರುದ್ಧ 14 ಕೊಲೆ ಯತ್ನ ಪ್ರಕರಣಗಳು 10 ವರ್ಷಗಳಿಂದಲೂ ವಿಚಾರಣೆಗೆ ಬಾಕಿ ಇವೆ. ಪುಣೆಯ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ವಿರುದ್ಧ ವ್ಯಕ್ತಿಯನ್ನು ಮೂರಕ್ಕೂ ಹೆಚ್ಚು ದಿನಗಳ ಕಾಲ ಬಂಧನದಲ್ಲಿರಿಸಿದ ಪ್ರಕರಣ 28 ವರ್ಷಗಳಿಂದ ವಿಚಾರಣೆಗೆ ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.