ಹುಬ್ಬಳ್ಳಿ: ಹೆಗ್ಗೇರಿ ಆಯುರ್ವೇದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವ ಮಾ.13ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ಖ್ಯಾತ ವೈದ್ಯ ಡಾ. ಜಯಪ್ರಕಾಶ ನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಸಂಘದ ಕಾರ್ಯದರ್ಶಿ ಡಾ. ಎ.ಎಸ್.ಪ್ರಶಾಂತ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಈ ವಿಷಯ ಪ್ರಕಟಿಸಿದರು. ‘ಕಾಲೇಜಿನ ಪ್ರಾಚಾರ್ಯ ಮತ್ತು ಸಂಘದ ಅಧ್ಯಕ್ಷರಾದ ಡಾ.ಎಸ್.ಜೆ. ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದು, ಡಾ. ಗೋ.ಹ. ನರೇಗಲ್ ಮತ್ತು ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೇರಳದ ಡಾ.ಪಿ.ಎಸ್. ಆರತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ’ ಎಂದು ವಿವರಿಸಿದರು.

ಡಾ. ಸುಶೀಲಾದೇವಿ ರಾಮಣ್ಣವರ, ಡಾ. ಮಹಾಂತೇಶ ರಾಮಣ್ಣವರ, ಡಾ.ವೀರಭದ್ರಪ್ಪ ಮುಸರಿ, ಡಾ. ಬಿ.ಕೆ. ಅಶೋಕ, ಡಾ.ಆರ್.ಎಸ್. ಹಿರೇಮಠ, ಡಾ.ಎನ್.ಎಚ್. ಕುಲಕರ್ಣಿ ಹಾಗೂ ಡಾ. ಸಂಜಯ ಕಡ್ಲಿಮಟ್ಟಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.ಹೊರರಾಜ್ಯ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 300 ಜನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ವಾರ್ಷಿಕೋತ್ಸವದ ಅಂಗವಾಗಿ ಮಾ. 12ರಂದು ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಿಮ್ಸ್ ನಿರ್ದೇಶಕ ಡಾ.ಬಿ.ಎಸ್. ಮದಕಟ್ಟಿ ಮತ್ತು ಆಯುಶ್ ಇಲಾಖೆ ಜಂಟಿ ನಿರ್ದೇಶಕ ಡಾ.ಆಂಜನೇಯಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

‘ಆಯುರ್ವೇದ ಕಾಲೇಜು 56 ವರ್ಷಗಳ ಇತಿಹಾಸ ಹೊಂದಿದ್ದು, ಡಾ.ಜಿ.ಎಚ್. ದೇಸಾಯಿ, ಡಾ.ಕೆ.ಜಿ.ದೇಸಾಯಿ, ಡಾ.ಕೆ.ಎಂ. ಕುಲಕರ್ಣಿ, ಡಾ.ಜಿ.ಎಚ್. ನರೇಗಲ್, ಡಾ.ಆರ್.ಆರ್ ಭಟ್ ಅವರಂತಹ ತಜ್ಞರು ಕಾಲೇಜಿನ ಪ್ರಾಚಾರ್ಯರಾಗಿದ್ದರು ಎಂದ ಅವರು, ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದ್ದು, ಹಲವು ಜನಪರ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಸಂಘದ ಅಧ್ಯಕ್ಷ ಡಾ.ಎಸ್.ಜೆ. ದೇಶಪಾಂಡೆ, ಡಾ.ಪ್ರದೀಪ ದೇಸಾಯಿ, ಡಾ.ವಿ.ಎಸ್. ಪುರಾಣಿಕಮಠ, ಡಾ. ಭಾಸ್ಕರ ಪಾಟೀಲ ಮತ್ತು ಡಾ.ಸಿದ್ದನಗೌಡ ಪಾಟೀಲ ಹಾಜರಿದ್ದರು.

ಸಂಗೀತ ಕಛೇರಿ ನಾಳೆ

ಧಾರವಾಡ: ಇಲ್ಲಿನ ಅವನಿರಸಿಕರ ರಂಗ ವೇದಿಕೆ ತನ್ನ ದಶಮಾನೋತ್ಸವದ ಅಂಗವಾಗಿ ಮಾ. 13ರಂದು ಸಂಜೆ 5.30ಕ್ಕೆ ನಾರಾಯಣ ಪುರದ ಅವನಿ ಸಭಾಗೃಹದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ಆಯೋಜಿಸಿದೆ. ಭಾರತರತ್ನ ಪಂ. ಭೀಮಸೇನ ಜೋಶಿಯವರ ನೆಚ್ಚಿನ ಶಿಷ್ಯ ಬೆಂಗಳೂರಿನ ಪಂ. ಗೋವಿಂದ ಶ್ರೀನಿವಾಸ ರೊಟ್ಟಿ ಸಂಗೀತ ಕಚೇರಿ ನಡೆಸಿಕೊಡುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ವೇದಿಕೆ ಪ್ರಕಟಣೆ ಕೋರಿದೆ.

ಕ್ಯಾಂಪಸ್ ಸಂದರ್ಶನ ನಾಳೆ
ಧಾರವಾಡ: ಇಲ್ಲಿನ ಜೆಎಸ್ಎಸ್ ಕಾಲೇಜಿನಲ್ಲಿ ಮಾರ್ಚ್ 13ರಂದು ಆರ್ಪಿ ಲಾಟಿಸ್ಟಿಕ್ಸ್ ಸಂಸ್ಥೆಯ ಕ್ಯಾಂಪಸ್ ಸಂದರ್ಶನ ಆಯೋಜಿಸಿದೆ. ಮ್ಯಾನೇಜರ್, ಕಂಪ್ಯೂಟರ್ ಆಪರೇಟರ್, ಅಕೌಂಟಂಟ್, ಸೇಲ್ಸಮನ್, ಸೈಟ್ ಸುಪರ್ವೈಜರ್ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಆಸಕ್ತರು ವಿವರಗಳಿಗೆ ದೂರವಾಣಿ ಸಂಖ್ಯೆ 2460886ಕ್ಕೆ ಸಂಪರ್ಕಿಸಿಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.