ಬೆಂಗಳೂರು: ದೇಶದ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ಮೂಲಸೌಕರ್ಯ ವಲಯದ ಅಭಿವೃದ್ಧಿಯಲ್ಲಿ ಯಂತ್ರೋಪಕರಣ ತಯಾರಿಕಾ (ಮಷಿನ್ ಟೂಲ್) ರಂಗವು ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಉದ್ಯಮಿ ಜಮ್ಶೆಡ್ ಎನ್. ಗೋದ್ರೇಜ್ಅವರು ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ಭಾರತೀಯ ಯಂತ್ರೋಪಕರಣ ತಯಾರಕರ ಸಂಘವು (ಐಎಂಟಿಎಂಎ) ಏರ್ಪಡಿಸಿರುವ, `ಅಂತರರಾಷ್ಟ್ರೀಯ ಫಾರ್ಮಿಂಗ್ ಮತ್ತು ತಂತ್ರಜ್ಞಾನ ಪ್ರದರ್ಶನ~ ಉದ್ಘಾಟಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 6 ದಿನಗಳ ಕಾಲ ನಡೆಯುವ ಈ ಪ್ರದರ್ಶನವನ್ನು ಯೋಜನಾ ಆಯೋಗದ ಸದಸ್ಯ ಡಾ. ಕೆ. ಕಸ್ತೂರಿ ರಂಗನ್ ಉದ್ಘಾಟಿಸಿದರು. 12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ತಯಾರಿಕಾ ರಂಗವು ಶೇ 12ರಿಂದ ಶೇ 14ರಷ್ಟು ವೃದ್ಧಿ ಕಾಣಲು ಮಷಿನ್ ಟೂಲ್ ಉದ್ದಿಮೆಯು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಅಭಿಪ್ರಾಯಪಟ್ಟರು.

ದೇಶಿ ಮಷಿನ್ ಟೂಲ್ ಕೈಗಾರಿಕೆಯು ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿದೆ. ಮಷಿನ್ ಟೂಲ್ ಮಾರುಕಟ್ಟೆ ವಾರ್ಷಿಕ ಶೇ 20ರಷ್ಟು ವೃದ್ಧಿಯಾಗುತ್ತಿದೆ. ಲೋಹಗಳಿಗೆ ವಿವಿಧ ಆಕಾರ ನೀಡುವುದು (ಮೆಟಲ್ ಫಾರ್ಮಿಂಗ್) ಈಗ ಹೆಚ್ಚು ಮಹತ್ವ ಪಡೆಯುತ್ತಿದ್ದು, ಕೆಲವೇ ವರ್ಷಗಳಲ್ಲಿ ಈ ವಲಯವು ನಾಲ್ಕು ಪಟ್ಟು ವೃದ್ಧಿಯಾಗಿದೆ. ಜಾಗತಿಕ ಮಷಿನ್ ಟೂಲ್ ತಯಾರಿಕೆಯಲ್ಲಿ ಲೋಹಗಳಿಗೆ ವಿವಿಧ ಆಕಾರ ನೀಡುವುದು ಶೇ 45ರಿಂದ 50ರಷ್ಟು ಪಾಲು ಹೊಂದಿದೆ ಎಂದರು. ತಂತ್ರಜ್ಞಾನ, ಸಂಶೋಧನೆಗಳೂ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಭಾರಿ ಯಂತ್ರೋಪಕರಣಗಳ ತಯಾರಿಕಾ ರಂಗದಲ್ಲಿ ಬಂಡವಾಳ ಹೂಡಿಕೆಯೂ ಹೆಚ್ಚುತ್ತಿದೆ ಎಂದು ಗೋದ್ರೇಜ್ ನುಡಿದರು. `ಐಎಂಟಿಎಂಎ~ ಅಧ್ಯಕ್ಷ ವಿಕ್ರಂ ಸಿರೂರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.