ತರೀಕೆರೆ: ಮಳೆಯಾಶ್ರಿತ ವಾಣಿಜ್ಯ ಬೆಳೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆಲೂಗೆಡ್ಡೆ ಬೆಳೆಯನ್ನು ರಾಜ್ಯದ ಕೋಲಾರ, ಹಾಸನ, ಬೆಳಗಾವಿ, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.

ಉತ್ತರ ಭಾರತದ ಪ್ರಮುಖ ಬೆಳೆಯಾಗಿರುವ `ಆಲೂಗೆಡ್ಡೆ~ ಅಲ್ಲಿಯ ಪ್ರಮಾಣದಷ್ಟು ಇಳುವರಿಯನ್ನು ಕರ್ನಾಟಕದಲ್ಲಿ ತೆಗೆಯಲು ಇದುವರೆಗೂ ಸಾದ್ಯವಾಗದಿರುವುದಕ್ಕೆ ತಾಂತ್ರಿಕ ಕೊರತೆ, ತಳಿಗಳ ಆಯ್ಕೆ ಮತ್ತು ಆಲೂಗೆಡ್ಡೆ ಬೆಳೆಯುವ ಮಣ್ಣಿನ ಆಯ್ಕೆಯಲ್ಲಿನ ತಿಳಿವಳಿಕೆ ಇಲ್ಲಿನ ರೈತರಲ್ಲಿ ಇಲ್ಲದೆ ಇರುವುದು ಪ್ರಮುಖ ಮತ್ತು ಮುಖ್ಯ ಕಾರಣವಾಗಿದೆ.

ರಾಜ್ಯದ ವಿವಿಧ ಪ್ರದೇಶದಲ್ಲಿ ಬೆಳೆದಿರುವ ಆಲೂಗೆಡ್ಡೆ ಬೆಳೆಗೆ ಅಂಗಮಾರಿ ರೋಗ ತಗುಲಿರುವ ಕುರಿತು ರೈತರು ಆತಂಕಕ್ಕೀಡಾಗಿದ್ದಾರೆ. ಆದರೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಆಲೂಗೆಡ್ಡೆ ಬೆಳೆದಿರುವ ರೈತ ಉತ್ತಮ ಮತ್ತು ರೋಗ ಮುಕ್ತ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಸುಧಾರಿತ ಬೇಸಾಯ ಕ್ರಮ, ರೋಗ ಮತ್ತು ಕೀಟ ಭಾದೆಗಳ ನಿಯಂತ್ರಣ ಹಾಗೂ ಮುಂಗಾರು ಹಂಗಾಮಿನಲ್ಲಿ ಬೀಜ ನಾಟಿಯನ್ನು ತಜ್ಞರ ನೆರವು ಪಡೆದು ಮಾಡಿದಲ್ಲಿ ನಮ್ಮಲ್ಲಿಯೂ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿದೆ ಎಂಬುದನ್ನು ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿ ರೈತರು ತೋರಿಸಿಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.

`ಚಿಪ್ಸ್~ ತಯಾರಿಸಲು ಬಳಸುವ ಆಲೂಗೆಡ್ಡೆ ತಳಿಗೆ `ಎಟಿಎಲ್~ ತಳಿ ಎಂದು ಬಿತ್ತನೆಬೀಜ ಮತ್ತು ಸಾಮಾನ್ಯವಾಗಿ ಅಡುಗೆಗೆ ಬಳಸುವ ಆಲೂಗೆಡ್ಡೆ ಬೆಳೆಗೆ `ಕೃಷಿಜ್ಯೋತಿ~ ತಳಿ ಎಂದು ಗುರುತಿಸಲಾಗಿದೆ. ಉತ್ತಮ ಮಳೆ ಮತ್ತು ಹವಾಗುಣ ವಿರುವ ಕಾರಣ ರೋಗ ಮುಕ್ತ ಬೆಳೆಯ ಜತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾದ್ಯವಾಗಿದೆ.

ಲಿಂಗದಹಳ್ಳಿ ಹೋಬಳಿಯಲ್ಲಿ ಆಲೂಗೆಡ್ಡೆ ಬೆಳೆಗೆ ಅಂಗಮಾರಿ (`ಆಲ್ಟನೇರಿಯಾ ಸೋಲಾನಿ ಮತ್ತು ಪೈಟೋಪ್ತೆರಾ ಇನ್ಫೆಸ್ಟಸ್~) ರೋಗಾಣುವಿನಿಂದ ಬರುವ `ಲೇಟ್ಬ್ಲೈಟ್~ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಒಮ್ಮೆ ಆಲೂಗೆಡ್ಡೆ ಬೆಳೆಯನ್ನು ಬೆಳೆದ ಜಮೀನಿನಲ್ಲಿ ನಂತರದಲ್ಲಿ ಮಾಡುವ ಕೃಷಿಗೆ ಇದೆ ಪ್ರಬೇಧಕ್ಕೆ ಸೇರಿದ ತರಕಾರಿ ಬೆಳೆಗಳಾದ ಟೊಮೆಟೊ, ಬದನೆ ಮತ್ತು ಮೆಣಸಿನಕಾಯಿ ಬೆಳೆಯನ್ನಾಗಿ ರೈತರು ಬೆಳೆಯಬಾರದು. ಇದಕ್ಕೆ ಬದಲಾಗಿ ಜೋಳ, ಮೆಕ್ಕೆಜೋಳ ಅಥವಾ ರಾಗಿ ಬೆಳೆದಲ್ಲಿ ಭೂಮಿಯ ಸತ್ವ ಉಳಿಯುತ್ತದೆ.

ಆಲೂಗೆಡ್ಡೆ ಬೆಳೆಯನ್ನು ಕೊಯ್ಲು ಮಾಡಿದ ನಂತರ ಗೆಡ್ಡೆಯನ್ನು ರಾಶಿ ಹಾಕುವ ರೈತರು ಆಲೂಗೆಡ್ಡೆ ಬೆಳೆಯ ಎಲೆಯಿಂದ ಮುಚ್ಚುವುದರಿಂದ ಫಸಲಿಗೆ ಗೆಡ್ಡೆಕೊರಕ ಹುಳುಗಳ ಭಾದೆಗೆ ತುತ್ತಾಗುವ ಸಂಭವವಿದೆ ಎಂದು ಕೃಷಿತಜ್ಞ ಗುಳ್ಳದಮನೆ ರಾಮಚಂದ್ರಪ್ಪ ರೈತರಿಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.