ಭಾನುವಾರ, ಮೇ 9, 2021
20 °C

ಆಶ್ರಯ ಮನೆ ನಿವೇಶನ ಹಕ್ಕುಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್ಲ: `ಪಾರದರ್ಶಕ ಆಡಳಿತ ನಡೆ ಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅಧಿಕಾರಿಗಳು ಹಣಕಾಸು ಸೇರಿದಂತೆ ಮತ್ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದಂತೆ ತಮ್ಮ ಕರ್ತವ್ಯ ನಿರ್ವಹಿ ಸಬೇಕು~ ಎಂದು ಲೋಕೋಪಯೋಗಿ ಸಚಿವ  ಸಿ.ಎಂ.ಉದಾಸಿ ಎಚ್ಚರಿಕೆ ನೀಡಿದರು.  ಪಟ್ಟಣದ ತಾ.ಪಂ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಆಶ್ರಯ ಯೋಜನೆ ಅಡಿ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಅಧಿ ಕಾರಿಗಳು ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರಿಂದ ಹಣ ಪಡೆದಿರುವುದು ಕೇಳಿಬಂದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸುವದು ನಿಶ್ಚಿತ. ಮನೆಗಳ ವಿತರಣೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳೆ ಮನೆಗಳಿಗೆ ಮತ್ತೆ ಮತ್ತೆ ಹಣ ತಗೆದ ಘಟನೆಗಳು ಈ ಹಿಂದೆ ನಡೆದಿವೆ. ಇನ್ನು ಮುಂದೆ ಇಂಥ ಪ್ರಕರಣಗಳು ನಡೆಯದಂತೆ ನಿಗಾ ವಹಿಸಬೇಕು. ಪ್ರಸಕ್ತ ವರ್ಷ 2 ಸಾವಿರ ಮನೆಗಳು ಸರ ಕಾರದಿಂದ ಮಂಜೂರಾಗಿದ್ದು, ಈಗಾ ಗಲೇ 1 ಸಾವಿರ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೆ 1 ಸಾವಿರ ಮನೆಗಳಿಗೆ ಮಂಜೂ ರಾತಿ ದೊರೆಯಲಿದೆ ಎಂದು ಹೇಳಿದರು.ಪ್ರಸ್ತುತ ವರ್ಷ 562 ನಿವೇಶನ ಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲಿ ಸಮ್ಮಸಗಿ ಗ್ರಾ.ಪಂ ವ್ಯಾಪ್ತಿಯಲ್ಲಿ 54 ಜನ ಫಲಾನುಭವಿಗಳಿಗೆ ಸಚಿವ ಉದಾಸಿ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಲಲಿತಾ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಜಿಪಂ    ಸದಸ್ಯ ರಾದ ಪದ್ಮನಾಭ ಕುಂದಾಪೂರ, ಬಸವ ರಾಜ ಹಾದಿಮನಿ, ಕಸ್ತೂರೆವ್ವ ವಡ್ಡರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹನುಮಂತಪ್ಪ ಗೊಂದಿ, ಸುಭಾಸ ಓಲೇಕಾರ, ಮಾಜಿ ಅಧ್ಯಕ್ಷ ಚಂದ್ರಪ್ಪ ಹರಿಜನ, ಮಾಜಿ ಉಪಾಧ್ಯಕ್ಷೆ ರತ್ನವ್ವ ಕರೆವ್ವನವರ, ತಾಲ್ಲೂಕಾ ಬಿಜೆಪಿ ಯುವ      ಮೋರ್ಚಾ ಅಧ್ಯಕ್ಷ ಸಂದೀಪ ಪಾಟೀಲ, ನಾಗರಾಜ ಕರೆಣ್ಣ ನವರ,  ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಸಂಶಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹಾಂತೇಶ ಲಿಂಬೆ ಮುಂತಾದವರು ಉಪಸ್ಥಿತ ರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.