ಆಸನಗಳಿಗೆ ಮೇಲ್ಛಾವಣಿ ನಿರ್ಮಿಸಿ
ರಾಜಾಜಿನಗರದ ರಾಮಮಂದಿರಕ್ಕೆ ಹೊಂದಿಕೊಂಡಂತೆ ವಿಶಾಲವಾದ ಮೈದಾನದಲ್ಲಿ ಆಕರ್ಷಕ ಬಹೂಪಯೋಗಿ ಬಯಲು ರಂಗಮಂದಿರವಿದೆ. ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಹಾಗೂ ಬಯಲು ಜಾಗದಲ್ಲಿ ನಡೆಯುವ ವಿವಿಧ ಕ್ರೀಡಾ ಚಟುವಟಿಕೆ ಹಾಗೂ ಸ್ಪರ್ಧೆಗಳನ್ನು ವೀಕ್ಷಿಸಲು ಬಯಲಿನ ಸುತ್ತಲೂ ಆಂಗ್ಲ ಭಾಷೆಯ `ಸಿ' ಆಕಾರದಲ್ಲಿ ಮೆಟ್ಟಿಲು ರೂಪದ ನಾಲ್ಕು ಹಂತದ ಆಸನಗಳನ್ನು ನಿರ್ಮಿಸಲಾಗಿದೆ.
ಆಸನಗಳಿಗೆ ಮೇಲ್ಛಾವಣಿ ಇಲ್ಲದೇ ಇರುವುದರಿಂದ ಬಿಸಿಲು, ಮಳೆಯಿಂದಾಗಿ ವೀಕ್ಷಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಯಲು ರಂಗಮಂದಿರದ ವ್ಯಾಪ್ತಿಯಲ್ಲಿರುವ ಮೆಟ್ಟಿಲು ರೂಪದ ಆಸನಗಳಿಗೆ ಮೇಲ್ಛಾವಣಿ ನಿರ್ಮಿಸಬೇಕಾಗಿ ವಿನಂತಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.