ಬೆಂಗಳೂರು: ಪಂದ್ಯ ಕಳೆದಂತೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಸುಲಭ ಸವಾಲು ಎದುರಾಗಿದೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಬುಧವಾರ ಕಳೆದ ಬಾರಿಯ ಚಾಂಪಿಯನ್ನರು ಕೆನಡಾ ಜೊತೆ ಸೆಣಸಾಟ ನಡೆಸುವರು.

ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಪಡೆದರೆ ಆಸ್ಟ್ರೇಲಿಯಾ ತನ್ನ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಲಿದೆ. ‘ಫೇವರಿಟ್’ ಎಂಬ ಹಣೆಪಟ್ಟಿ ಇಲ್ಲದೆಯೇ ರಿಕಿ ಪಾಂಟಿಂಗ್ ಬಳಗ ಈ ಬಾರಿಯ ವಿಶ್ವಕಪ್ಗೆ ಆಗಮಿಸಿತ್ತು. ಆದರೆ ಇದೀಗ ತಂಡ ಕಪ್ ಗೆಲ್ಲುವ ಫೇವರಿಟ್ಗಳಲ್ಲಿ ಒಂದೆನಿಸಿದೆ. ಲೀಗ್ನಲ್ಲಿ ಇದುವರೆಗೆ ಸೊಗಸಾದ ಪ್ರದರ್ಶನ ನೀಡಿದೆ.

‘ಎ’ ಗುಂಪಿನಲ್ಲಿ ಇದೀಗ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಐದು ಪಂದ್ಯಗಳಿಂದ ತಲಾ ಎಂಟು ಪಾಯಿಂಟ್ ಕಲೆಹಾಕಿದ್ದು, ಮೊದಲ ಎರಡು ಸ್ಥಾನಗಳಲ್ಲಿವೆ. ಐದು ಪಂದ್ಯಗಳಿಂದ ಏಳು ಪಾಯಿಂಟ್ ಸಂಗ್ರಹಿಸಿರುವ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. ಆಸೀಸ್ ಬಳಿ ನಾಲ್ಕು ಪಂದ್ಯಗಳಿಂದ ಏಳು ಪಾಯಿಂಟ್ ಇದೆ.

ಕೀನ್ಯಾ ವಿರುದ್ಧ ಭಾನುವಾರ ಇದೇ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 60 ರನ್ಗಳ ಗೆಲುವು ಪಡೆದಿತ್ತು. ಇದೀಗ ಮತ್ತೊಂದು ‘ದುರ್ಬಲ’ ತಂಡದ ವಿರುದ್ಧವೂ ಕಾಂಗರೂ ನಾಡಿನವರು ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. |

ಪಾಂಟಿಂಗ್ ಬಳಗ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಅದಕ್ಕೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಬುಧವಾರ ಭರ್ಜರಿ ಗೆಲುವನ್ನು ಎದರುನೋಡುತ್ತಿದೆ.

ಸ್ಪಿನ್ ಬೌಲರ್ಗಳು ಇನ್ನೂ ಪ್ರಭಾವಿ ಎನಿಸದ್ದು ಆಸೀಸ್ಗೆ ಚಿಂತೆ ಉಂಟುಮಾಡಿದೆ. ಜಾಸನ್ ಕ್ರೇಜಾ ಮತ್ತು ಸ್ಟೀವನ್ ಸ್ಮಿತ್ ಇದುವರೆಗೆ ಪಡೆದಿರುವುದು ತಲಾ ಒಂದು ವಿಕೆಟ್ ಮಾತ್ರ. ಮೈಕಲ್ ಕ್ಲಾರ್ಕ್ ಒಳಗೊಂಡಂತೆ ‘ಪಾರ್ಟ್ ಟೈಮ್’ ಸ್ಪಿನ್ನರ್ಗಳೂ ನಿರಾಸೆ ಉಂಟುಮಾಡಿದ್ದಾರೆ.

ಕೆನಡಾ ವಿರುದ್ಧದ ಪಂದ್ಯ ಕ್ರೇಜಾ ಮತ್ತು ಸ್ಮಿತ್ಗೆ ಸಾಮರ್ಥ್ಯ ತೋರಿಸಲು ಉತ್ತಮ ವೇದಿಕೆಯಾಗಿ ಪರಿಣಮಿಸಿದೆ. ವೇಗಿಗಳಾದ ಬ್ರೆಟ್ ಲೀ, ಶಾನ್ ಟೇಟ್ ಹಾಗೂ ಮಿಷೆಲ್ ಜಾನ್ಸನ್ ಅವರು ಇದುವರೆಗೆ ಒಟ್ಟು 21 ವಿಕೆಟ್ಗಳನ್ನು ತಮ್ಮೊಳಗೆ ಹಂಚಿಕೊಂಡಿದ್ದಾರೆ. ಆದರೆ ಇವರಿಗೆ ಸ್ಪಿನ್ನರ್ಗಳಿಂದ ತಕ್ಕ ಸಾಥ್ ಲಭಿಸಿಲ್ಲ. ನಾಕೌಟ್ ಹಂತಕ್ಕೆ ಮುನ್ನವೇ ಸ್ಪಿನ್ನರ್ಗಳು ಫಾರ್ಮ್ ಕಂಡುಕೊಳ್ಳಬೇಕೆಂಬುದು ನಾಯಕ ಪಾಂಟಿಂಗ್ ಅವರ ಬಯಕೆ.

ಕೆನಡಾದ ಅನನುಭವಿ ಬೌಲಿಂಗ್ ಮುಂದೆ ದೊಡ್ಡ ಮೊತ್ತ ಪೇರಿಸಲು ಆಸ್ಟ್ರೇಲಿಯಾಕ್ಕೆ ಕಷ್ಟವಾಗದು. ಮೈಕಲ್ ಕ್ಲಾರ್ಕ್ ಒಳಗೊಂಡಂತೆ ಎಲ್ಲ ಬ್ಯಾಟ್ಸ್ಮನ್ಗಳು ಉತ್ತಮ ಲಯ ಕಂಡುಕೊಂಡಿದ್ದಾರೆ. ಮೈಕ್ ಹಸ್ಸಿ ತಾನಾಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದ್ದಾರೆ. ಪಿಚ್ ಕೂಡಾ ಬ್ಯಾಟ್ಸ್ಮನ್ಗಳಿಗೆ ನೆರವು ನೀಡುತ್ತಿರುವ ಕಾರಣ ಆಸೀಸ್ ದೊಡ್ಡ ಅಂತರದ ಗೆಲುವನ್ನು ಎದುರುನೋಡುತ್ತಿದೆ.

ಆಸ್ಟ್ರೇಲಿಯಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 33 ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿಲ್ಲ. ಈ ಗೆಲುವಿನ ಓಟಕ್ಕೆ ‘ಬ್ರೇಕ್’ ಹಾಕುವುದು ಸುಲಭವಲ್ಲ ಎಂಬ ಅರಿವು ಕೆನಡಾ ತಂಡಕ್ಕಿದೆ. ಏಕೆಂದರೆ ಅಂತಹ ತಾಕತ್ತು ಹೊಂದಿರುವ ಆಟಗಾರರು ತಂಡದಲ್ಲಿಲ್ಲ.

ಆಶಿಶ್ ಬಾಗೈ ನೇತೃತ್ವದ ಕೆನಡಾ ಟೂರ್ನಿಯಲ್ಲಿ ಇದುವರೆಗೆ ಏಕೈಕ ಗೆಲುವು ಪಡೆದಿದೆ. ಕೀನ್ಯಾ ವಿರುದ್ಧ ಐದು ವಿಕೆಟ್ಗಳ ಜಯ ಸಾಧಿಸಿತ್ತು. ಅದನ್ನು ಬಿಟ್ಟರೆ ತಂಡಕ್ಕೆ ಹೆಚ್ಚಿನ ಏನನ್ನೂ ಮಾಡಲು ಸಾಧ್ಯವಾಗಿಲ್ಲ.

ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಕೈಯಲ್ಲಿ 97 ರನ್ಗಳ ಸೋಲು ಅನುಭವಿಸುವ ಮುನ್ನ ಅಲ್ಪ ಹೋರಾಟ ನಡೆಸಿತ್ತು. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ತಂಡದಿಂದ ಅಂತಹ ಪೈಪೋಟಿಯನ್ನು ಮಾತ್ರ ನಿರೀಕ್ಷಿಸಬಹುದು. ಅಚ್ಚರಿಯ ಫಲಿತಾಂಶ ಹೊರಹೊಮ್ಮುವ ಸಾಧ್ಯತೆ ತೀರಾ ಕಡಿಮೆ.

ನಾಯಕ ಬಾಗೈ ಅಲ್ಲದೆ ಜಿಮ್ಮಿ ಹಂಸ್ರಾ ಬ್ಯಾಟಿಂಗ್ನಲ್ಲಿ ತಂಡದ ಬಲ ಎನಿಸಿದ್ದಾರೆ. ಆದರೆ ಬ್ರೆಟ್ ಲೀ ನೇತೃತ್ವದ ಆಸೀಸ್ ವೇಗದ ಬೌಲಿಂಗ್ ಮುಂದೆ ಇವರು ಎಷ್ಟರಮಟ್ಟಿಗೆ ಪ್ರತಿರೋಧ ಒಡ್ಡುವರು ಎಂಬುದನ್ನು ನೋಡಬೇಕು.

ಕೀನ್ಯಾ ತಂಡ ಎರಡು ದಿನಗಳ ಹಿಂದೆ ಇಲ್ಲಿ ಸೋಲು ಅನುಭವಿಸುವ ಮೂಲಕ ಕಾಂಗರೂ ನಾಡಿನ ತಂಡಕ್ಕೆ ತಕ್ಕ ಪೈಪೋಟಿ ನೀಡಿತ್ತು. ಇದು ಕೂಡಾ ಕೆನಡಾ ಆಟಗಾರರಿಗೆ ಅಲ್ಪ ಉತ್ತೇಜನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.