ಭಾನುವಾರ, ಜೂನ್ 13, 2021
21 °C

ಆಸೀಸ್ ವಿರುದ್ಧ ಕೊನೆಗೂ ಗೆದ್ದ ವಿಂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್ಸ್‌ಟೌನ್, ಸೇಂಟ್ ವಿನ್ಸೆಂಟ್ (ಎಎಫ್‌ಪಿ): ಕೀರನ್ ಪೊಲಾರ್ಡ್ (47) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧದ   ಎರಡನೇ ಏಕದಿನ ಕ್ರಿಕೆಟ್      ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಪಡೆಯಿತು.



ಈ ಮೂಲಕ ಕೆರಿಬಿಯನ್ ನಾಡಿನ ತಂಡ ಆರು ವರ್ಷಗಳ ಬಿಡುವಿನ ಬಳಿಕ ಆಸೀಸ್ ಎದುರು ಜಯ ಸಾಧಿಸಲು ಯಶಸ್ವಿಯಾಗಿದೆ.



ಅರ್ನಸ್ ವೇಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 40 ಓವರ್‌ಗಳಲ್ಲಿ 9 ವಿಕೆಟ್‌ಗೆ 154 ರನ್ ಕಲೆಹಾಕಿತು. ಮಳೆ ಅಡ್ಡಿಪಡಿಸಿದ ಕಾರಣ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು.



ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆಲುವಿಗೆ 158 ರನ್ ಗಳಿಸಬೇಕಿದ್ದ ವಿಂಡೀಸ್ 38.2 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್ ಗಳಿಸಿ ಜಯ ಪಡೆಯಿತು. ಪೊಲಾರ್ಡ್ ಅಲ್ಲದೆ ಜಾನ್ಸನ್ ಚಾರ್ಲ್ಸ್ (26)ಮತ್ತು ಡ್ವೇನ್ ಬ್ರಾವೊ (30) ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಇದೀಗ ಐದು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲದಲ್ಲಿದೆ.



ಇದಕ್ಕೂ ಮುನ್ನ ಸುನಿಲ್ ನರೇನ್ (27ಕ್ಕೆ 4) ಅವರ ಪ್ರಭಾವಿ ಬೌಲಿಂಗ್ ಕಾರಣ ಆಸ್ಟ್ರೇಲಿಯಾಕ್ಕೆ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಡೇವಿಡ್ ಹಸ್ಸಿ (37)     `ಗರಿಷ್ಠ ಸ್ಕೋರರ್~ ಎನಿಸಿಕೊಂಡರು.



ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 40 ಓವರ್‌ಗಳಲ್ಲಿ 9 ವಿಕೆಟ್‌ಗೆ 154 (ಶೇನ್ ವ್ಯಾಟ್ಸನ್ 25, ಡೇವಿಡ್ ಹಸ್ಸಿ 37, ಮೈಕ್ ಹಸ್ಸಿ 24, ಸುನಿಲ್ ನರೇನ್ 27ಕ್ಕೆ 4, ಕೆಮರ್ ರೋಚ್ 23ಕ್ಕೆ 2). ವೆಸ್ಟ್ ಇಂಡೀಸ್: 38.2 ಓವರ್‌ಗಳಲ್ಲಿ 5 ವಿಕೆಟ್‌ಗೆ 163 (ಜಾನ್ಸನ್ ಚಾರ್ಲ್ಸ್ 26, ಕೀರನ್ ಪೊಲಾರ್ಡ್ ಔಟಾಗದೆ 47, ಕಾರ್ಲ್‌ಟನ್ ಬಾ ಔಟಾಗದೆ 18). ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದಂತೆ ವಿಂಡೀಸ್‌ಗೆ 5 ವಿಕೆಟ್ ಜಯ; ಪಂದ್ಯಶ್ರೇಷ್ಠ: ಸುನಿಲ್ ನರೇನ್ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.