ಮೀರ್ಪುರ (ಪಿಟಿಐ): ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಹೋದ ಪಂದ್ಯದಲ್ಲಿ ಗೆಲುವಿನ ನಗು ಬೀರಿದ್ದು ಪಾಕಿಸ್ತಾನ. ಉಮರ್ ಅಕ್ಮಲ್ ಹಾಗೂ ಸ್ಪಿನ್ನರ್ಗಳ ಅಮೋಘ ಪ್ರದರ್ಶನ ಇದಕ್ಕೆ ಕಾರಣ. ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತ ಈ ತಂಡದವರು 16 ರನ್ಗಳ ಗೆಲುವು ಸಾಧಿಸಿದರು.

ಷೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಲು ಮುಂದಾದ ಆಸ್ಟ್ರೇಲಿಯಾ ತಂಡದವರು 20 ಓವರ್ಗಳಲ್ಲಿ 175 ರನ್ಗಳಿಗೆ ಆಲೌಟಾದರು.

ಆರಂಭದಲ್ಲಿ ಹಿನ್ನಡೆ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಪಾಕ್ ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಕಮ್ರನ್ ಅಕ್ಮಲ್ (31; 31 ಎ, 4 ಬೌಂ.) ಹಾಗೂ ಉಮರ್ ಆಟ ಈ ತಂಡದ ಖುಷಿಗೆ ಕಾರಣವಾಯಿತು. ಬಿರುಸಿನ ಆಟಕ್ಕಿಳಿದ ಈ ಸಹೋದರರು ಮೂರನೇ ವಿಕೆಟ್ಗೆ 96 ರನ್ ಗಳಿಸಿದರು. ಅದಕ್ಕೆ ತೆಗೆದುಕೊಂಡಿದ್ದು ಕೇವಲ 51 ಎಸೆತ.

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವಕಾಶ ಪಡೆದ ಉಮರ್ ಸೊಗಸಾದ ಇನಿಂಗ್ಸ್ ಕಟ್ಟಿದರು. 54 ಎಸೆತ ಎದುರಿಸಿದ ಅವರು 94 ರನ್ ಗಳಿಸಿದರು. ಆ ಹಾದಿಯಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಎತ್ತಿದರು. ಉಮರ್ ಔಟಾಗಿದ್ದು ಕೊನೆಯ ಓವರ್ನಲ್ಲಿ. ಕೊನೆಯಲ್ಲಿ ಶಾಹಿದ್ ಅಫ್ರಿದಿ (ಅಜೇಯ 20; 11 ಎಸೆತ) ಗುಡುಗಿದರು. ಈ ಪರಿಣಾಮ ಪಾಕ್ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ಕಾಂಗರೂ ಪಡೆಯ ಎಲ್ಲಾ ಬೌಲರ್ಗಳು ದುಬಾರಿಯಾದರು.

ಆಘಾತ ನೀಡಿದ ಬಾಬರ್: ಸವಾಲಿನ ಗುರಿ ಎದುರು ಆಸ್ಟ್ರೇಲಿಯಾ ಮೊದಲ ಓವರ್ನಲ್ಲಿಯೇ ದೊಡ್ಡ ಆಘಾತಕ್ಕೆ ಒಳಗಾಯಿತು. ಏಕೆಂದರೆ ಈ ತಂಡದ ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ಅವರನ್ನು ಜುಲ್ಫಿಕರ್ ಬಾಬರ್ ಪೆವಿಲಿಯನ್ಗೆ ಅಟ್ಟಿದರು.

ಈ ಹಂತದಲ್ಲಿ ಜೊತೆಗೂಡಿದ್ದು ಆ್ಯರನ್ ಫಿಂಚ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್. ಇವರಿಬ್ಬರು ಆಡಿದ ರೀತಿ ಆಸ್ಟ್ರೇಲಿಯಾಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಫಿಂಚ್ ಹಾಗೂ ಮ್ಯಾಕ್ಸ್ವೆಲ್ ಮೂರನೇ ವಿಕೆಟ್ಗೆ ಕೇವಲ 70 ಎಸೆತಗಳಲ್ಲಿ 118 ರನ್ ಸೇರಿಸಿದರು. 33 ಎಸೆತ ಎದುರಿಸಿದ ಮ್ಯಾಕ್ಸ್ವೆಲ್ 7 ಬೌಂಡರಿ ಹಾಗೂ 6 ಸಿಕ್ಸರ್ ಸಮೇತ 74 ರನ್ ಗಳಿಸಿದರು. ಅವರ ವಿಕೆಟ್ ಪಡೆದಿದ್ದು ಅಫ್ರಿದಿ. ಇದು ಪಂದ್ಯಕ್ಕೆ ತಿರುವು ನೀಡಿತು.

ನಂತರ ಕ್ರೀಸ್ಗೆ ಬಂದ ಆಸೀಸ್ನ ಎಲ್ಲಾ ಬ್ಯಾಟ್ಸ್ಮನ್ಗಳು ವಿಫಲರಾದರು. ಹಾಗಾಗಿ ಫಿಂಚ್ ಹೋರಾಟ ಸಾಕಾಗಲಿಲ್ಲ. ಅವರು 54 ಎಸೆತಗಳಿಂದ 65 ರನ್ ಗಳಿಸಿದರು. ಜೊತೆಗೆ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. 49 ರನ್ಗಳ ಅಂತರದಲ್ಲಿ ಕೊನೆಯ ಎಂಟು ವಿಕೆಟ್ಗಳು ಪತನವಾದವು. ಸಯೀದ್ ಅಜ್ಮಲ್, ಅಫ್ರಿದಿ ಹಾಗೂ ಬಿಲವಾಲ್ ಭಟ್ಟಿ ಪರಿಣಾಮಕಾರಿ ದಾಳಿ ನಡೆಸಿದರು.

ಸ್ಕೋರ್ ವಿವರ

ಪಾಕಿಸ್ತಾನ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191
ಅಹ್ಮದ್ ಶೆಹಜಾದ್ ಸಿ ಆ್ಯಂಡ್ ಬಿ ಡಗ್ ಬೊಲಿಂಜರ್ 05
ಕಮ್ರನ್ ಅಕ್ಮಲ್ ಸಿ ಡೇವಿಡ್ ವಾರ್ನರ್ ಬಿ ಕೋಲ್ಟರ್ ನೈಲ್ 31
ಮೊಹಮ್ಮದ್ ಹಫೀಜ್ ಬಿ ಶೇನ್ ವಾಟ್ಸನ್ 13
ಉಮರ್ ಅಕ್ಮಲ್ ಸಿ ಗ್ಲೆನ್ ಮ್ಯಾಕ್ಸ್ವೆಲ್ ಬಿ ಮಿಷೆಲ್ ಸ್ಟಾರ್ಕ್ 94
ಶೊಹೇಬ್ ಮಕ್ಸೂದ್ ಬಿ ಕೋಲ್ಟರ್ ನೈಲ್ 05
ಶಾಹಿದ್ ಅಫ್ರಿದಿ ಔಟಾಗದೆ 20
ಶೊಹೇಬ್ ಮಲಿಕ್ ಔಟಾಗದೆ 06

ಇತರೆ (ಬೈ–4, ಲೆಗ್ಬೈ–3, ವೈಡ್–9, ನೋಬಾಲ್–1) 17
ವಿಕೆಟ್ ಪತನ: 1–7 (ಶೆಹಜಾದ್; 1.4); 2–25 (ಹಫೀಜ್; 4.2); 3–121 (ಕಮ್ರನ್; 12.5); 4–147 (ಮಕ್ಸೂದ್; 15.5); 5–180 (ಉಮರ್; 19.1)
ಬೌಲಿಂಗ್: ಮಿಷೆಲ್ ಸ್ಟಾರ್ಕ್ 4–0–35–1 (ವೈಡ್–1), ಡಗ್ ಬೊಲಿಂಜರ್ 4–0–28–1, ಶೇನ್ ವಾಟ್ಸನ್ 4–0–38–1 (ನೋಬಾಲ್–1), ನೇಥನ್ ಕೋಲ್ಟರ್ ನೈಲ್ 4–0–36–2 (ವೈಡ್–1), ಬ್ರಾಡ್ ಹಾಗ್ 3–0–29–0 (ವೈಡ್–1), ಆ್ಯರನ್ ಫಿಂಚ್ 1–0–18–0

ಆಸ್ಟ್ರೇಲಿಯಾ 20 ಓವರ್ಗಳಲ್ಲಿ 175
ಡೇವಿಡ್ ವಾರ್ನರ್ ಬಿ ಜುಲ್ಫಿಕರ್ ಬಾಬರ್ 04
ಆ್ಯರನ್ ಫಿಂಚ್ ಬಿ ಸಯೀದ್ ಅಜ್ಮಲ್ 65
ಶೇನ್ ವಾಟ್ಸನ್ ಸಿ ಕಮ್ರನ್ ಅಕ್ಮಲ್ ಬಿ ಜುಲ್ಫಿಕರ್ ಬಾಬರ್ 04
ಗ್ಲೆನ್ ಮ್ಯಾಕ್ಸ್ವೆಲ್ ಸಿ ಅಹ್ಮದ್ ಶೆಹಜಾದ್ ಬಿ ಶಾಹಿದ್ ಅಫ್ರಿದಿ
74
ಜಾರ್ಜ್ ಬೇಲಿ ಬಿ ಶಾಹಿದ್ ಅಫ್ರಿದಿ 04
ಬ್ರಾಡ್ ಹಾಡ್ಜ್ ಸಿ ಸಯೀದ್ ಅಜ್ಮಲ್ ಬಿ ಉಮರ್ ಗುಲ್ 02
ಬ್ರಾಡ್ ಹಡಿನ್ ಸಿ ಶೊಹೇಬ್ ಮಲಿಕ್ ಬಿ ಬಿಲವಾಲ್ ಭಟ್ಟಿ 08
ಕೋಲ್ಟರ್ ನೈಲ್ ಬಿ ಉಮರ್ ಗುಲ್ 00
ಮಿಷೆಲ್ ಸ್ಟಾರ್ಕ್ ರನ್ಔಟ್ (ಕಮ್ರನ್/ಅಫ್ರಿದಿ) 03
ಬ್ರಾಡ್ ಹಾಗ್ ಬಿ ಬಿಲವಾಲ್ ಭಟ್ಟಿ 03
ಡಗ್ ಬೊಲಿಂಜರ್ ಔಟಾಗದೆ 00

ಇತರೆ (ಲೆಗ್ಬೈ–3, ನೋಬಾಲ್–5) 08
ವಿಕೆಟ್ ಪತನ: 1–4 (ವಾರ್ನರ್; 0.2); 2–8 (ವಾಟ್ಸನ್; 0.6); 3–126 (ಮ್ಯಾಕ್ಸ್ವೆಲ್; 11.4); 4–146 (ಬೇಲಿ; 15.1); 5–155 (ಹಾಡ್ಜ್; 16.3); 6–162 (ಫಿಂಚ್; 17.4); 7–163 (ಕೋಲ್ಟರ್; 18.2); 8–172 (ಸ್ಟಾರ್ಕ್; 19.2); 9–173 (ಹಡಿನ್; 19.4); 10–175 (ಹಾಗ್; 19.6)

ಬೌಲಿಂಗ್: ಜುಲ್ಫಿಕರ್ ಬಾಬರ್ 4–0–26–2, ಮೊಹಮ್ಮದ್ ಹಫೀಜ್ 2–0–18–0, ಉಮರ್ ಗುಲ್ 4–0–29–2, ಸಯೀದ್ ಅಜ್ಮಲ್ 4–0–33–1, ಶಾಹಿದ್ ಅಫ್ರಿದಿ 4–0–30–2, ಬಿಲವಾಲ್ ಭಟ್ಟಿ 2–0–36–2 (ನೋಬಾಲ್–1)
ಫಲಿತಾಂಶ: ಪಾಕಿಸ್ತಾನಕ್ಕೆ 16 ರನ್ಗಳ ಗೆಲುವು ಹಾಗೂ 2 ಪಾಯಿಂಟ್. ಪಂದ್ಯ ಶ್ರೇಷ್ಠ: ಉಮರ್ ಅಕ್ಮಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.