ಪರ್ತ್ (ಎಎಫ್ಪಿ): ಐದನೇ ಕ್ರಮಾಂಕದ ಬ್ಯಾಟ್ಸ್ಮನ್ ಸ್ಟೀವನ್ ಸ್ಮಿತ್ ಅವರ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಶುಕ್ರವಾರ ಇಲ್ಲಿ ಆರಂಭವಾದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಉತ್ತಮ ಮೊತ್ತ ಗಳಿಸಿದ್ದಾರೆ.

ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಾಂಗರೂ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 87 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಆಸ್ಟ್ರೇಲಿಯಾ ಆರಂಭದಲ್ಲಿ ತಡಬಡಾಯಿಸಿತು. 143 ರನ್ಗಳಿಗೆ 5 ವಿಕೆಟ್ಗಳು ಪತನವಾಗಿದ್ದವು. ಆದರೆ ಸ್ಮಿತ್ ಅವರ ಶತಕ ತಂಡಕ್ಕೆ ಆಸರೆಯಾಯಿತು. 191 ಎಸೆತ ಎದುರಿಸಿರುವ ಅವರು 13 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 103 ರನ್ ಗಳಿಸಿದ್ದಾರೆ.

ಸ್ಮಿತ್ ಹಾಗೂ ಬ್ರಾಡ್ ಹಡಿನ್ (55) ಆರನೇ ವಿಕೆಟ್ಗೆ 124 ರನ್ ಸೇರಿಸಿದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ 77 ಎಸೆತಗಳಲ್ಲಿ 60 ರನ್ ಗಳಿಸಿದ್ದರು. ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಹಾಗೂ ಗ್ರೇಮ್ ಸ್ವಾನ್ ತಲಾ ಎರಡು ವಿಕೆಟ್ ಪಡೆದರು.

ಸ್ಕೋರ್ ವಿವರ: ಆಸ್ಟ್ರೇಲಿಯಾ: 87 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 326 (ಡೇವಿಡ್ ವಾರ್ನರ್ 60, ಮೈಕಲ್ ಕ್ಲಾರ್ಕ್ 24, ಸ್ಟೀವನ್ ಸ್ಮಿತ್ ಬ್ಯಾಟಿಂಗ್ 103, ಬ್ರಾಡ್ ಹಡಿನ್ 55, ಮಿಷೆಲ್ ಜಾನ್ಸನ್ ಬ್ಯಾಟಿಂಗ್ 39; ಸ್ಟುವರ್ಟ್ ಬ್ರಾಡ್ 78ಕ್ಕೆ2, ಗ್ರೇಮ್ ಸ್ವಾನ್ 71ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.