ಭಾನುವಾರ, ಜನವರಿ 26, 2020
23 °C

ಆಸ್ಟ್ರೇಲಿಯಾ ತಂಡದ ಉತ್ತಮ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್ (ಎಎಫ್‌ಪಿ): ಕ್ರಿಸ್ ರೋಜರ್ಸ್ (72), ಶೇನ್ ವಾಟ್ಸನ್ (51) ಮತ್ತು ಜಾರ್ಜ್ ಬೈಲಿ (53) ಅವರ ಅರ್ಧ ಶತಕಗಳ  ನೆರವಿನಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ದಿನವಾದ ಗುರುವಾರದ ಆಟದ ಅಂತ್ಯಕ್ಕೆ ಆಸೀಸ್ 91 ಓವರ್‌ ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 273 ರನ್‌ ಕಲೆ ಹಾಕಿದೆ.ಟಾಸ್‌ ಗೆದ್ದ ಆಸೀಸ್ ನಾಯಕ ಕ್ಲಾರ್ಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಪಂದ್ಯದ ಆರಂಭದಲ್ಲೇ ವೇಗಿ ಸ್ಟುವರ್ಟ್ ಬ್ರಾಡ್ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ (29) ವಿಕೆಟ್ ಕಬಳಿಸುವ ಮೂಲಕ ಆಸೀಸ್‌ಗೆ ಆರಂಭಿಕ ಆಘಾತ ನೀಡಿದರು.ನಂತರ ಜೊತೆಯಾದ ರೋಜರ್ಸ್ ಮತ್ತು ವ್ಯಾಟ್ಸನ್ 121 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 91 ಓವರ್‌ಗಳಲ್ಲಿ ಐದು ವಿಕೆಟ್‌ಗೆ 273 (ಕ್ರಿಸ್ ರೋಜರ್ಸ್ 72,  ಶೇನ್ ವಾಟ್ಸನ್ 51, ಜಾರ್ಜ್ ಬೈಲಿ 53 , ಸ್ಟುವರ್ಟ್ ಬ್ರಾಡ್ 63 ಕ್ಕೆ 2).

ಪ್ರತಿಕ್ರಿಯಿಸಿ (+)