ಬುಧವಾರ, ಮೇ 12, 2021
26 °C

ಆಸ್ಪತ್ರೆ ಸದುಪಯೋಗಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸಮುದಾಯ ಆರೋಗ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಆರ್. ಹಾಲೇಶ್ ಮಾತನಾಡಿ, ಗ್ರಾಮೀಣ ಆಸ್ಪತ್ರೆಗಳು ಈಗ ಎಲ್ಲಾ ಸೌಲಭ್ಯವನ್ನು ಹೊಂದಿದ್ದು, ಸಾರ್ವಜನಿಕರು ಇದರ ಪೂರ್ಣಪ್ರಮಾಣದ ಉಪಯೋಗವನ್ನು ಪಡೆಯಬೇಕೆಂದರು.

 

ಗ್ರಾಮ ಪಂಚಾಯ್ತಿ ಸದಸ್ಯ ಖಲಂದರ್ ಮಾತನಾಡಿ, ಸರ್ಕಾರ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇದರಿಂದ ದೇಶದಲ್ಲಿ ಮರಣ ಪ್ರಮಾಣ ಕಡಿಮೆ ಆಗಿದೆ. ಹೋಬಳಿ ಕೇಂದ್ರವಾದ ಬಸವಾಪಟ್ಟಣಕ್ಕೆ 108 ತುರ್ತು ವಾಹನವನ್ನು ಮಂಜೂರು ಮಾಡಬೇಕೆಂದು ನುಡಿದರು.ಪ್ರಾಸ್ತಾವಿಕ ಭಾಷಣ ಮಾಡಿದ ವೈದ್ಯಾಧಿಕಾರಿ ಡಾ.ಕೆ.ಜಿ. ತಿಪ್ಪೇಶನಾಯ್ಕ, ನಮ್ಮ ಆರೋಗ್ಯ ಕೇಂದ್ರದಲ್ಲಿ ಜನನಿ ಸುರಕ್ಷಾ ಯೋಜನೆ, ಬಾಣಂತಿಯರಿಗೆ ಮಡಿಲು ಕಿಟ್ ಕೊಡುಗೆ, ಗರ್ಭಿಣಿ ಮಹಿಳೆಯರಿಗೆ ಪ್ರಸೂತಿ ಆರೈಕೆ, ಸಾರ್ವಜನಿಕರಿಗೆ ಎಚ್‌ಐವಿ ಪರೀಕ್ಷೆ, ಕ್ಷಯರೋಗ ಪರೀಕ್ಷೆ, ಚಿಕಿತ್ಸೆ, ಕುಷ್ಠರೋಗ ಪರೀಕ್ಷೆ ಮತ್ತು ಚಿಕಿತ್ಸೆ, ಮಲೇರಿಯಾ ರೋಗ ಪತ್ತೆ ಚಿಕಿತ್ಸೆ, ಪ್ರತಿ ತಿಂಗಳು 12ರಿಂದ 15 ಮಹಿಳೆಯರಿಗೆ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಜಹೀರ್ ಪಟೇಲ್, ನವೀದ್‌ಖಾನ್, ಎಸ್.ಎಂ. ರುದ್ರೇಶ್ ಪಾಲ್ಗೊಂಡಿದ್ದರು. ಶ್ರೀನಿವಾಸ ಸ್ವಾಗತಿಸಿದರು. ನಾಗರಾಜ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.