ಒಂದು ಕಥೆ- ಚೀನಾದ ಒಬ್ಬ ಸಂತ ಧ್ಯಾನ ಮಾಡುತ್ತಾ ನಿದ್ದೆ ಹೋದ. ಎಚ್ಚರವಾದಾಗ ಅವನ ಮೇಲೆ ಅವನಿಗೇ ಸಿಟ್ಟು ಬಂದು ತನ್ನ ಒಂದು ಕಣ್ಣನ್ನು ಕಿತ್ತು ಬಿಸಾಡಿದ. ಆ ಜಾಗದಲ್ಲಿ ಟೀ ಗಿಡ ಹುಟ್ಟಿಕೊಂಡವು. ಅವು ಸದಾ ಊರ್ಧ್ವಮುಖಿಯಾಗಿ ಜಾಗೃತಾವಸ್ಥೆಯ ಸಂಕೇತದಂತೆ ಕಾಣುತ್ತಿದ್ದವು. ಅದಕ್ಕೇ ಟೀ ಕುಡಿದರೆ ನಿದ್ದೆ ಬರಲ್ಲ, ಎಚ್ಚರವಾಗಿರಬಹುದು ಎಂಬ ನಂಬಿಕೆ ಬಂತು.

ಯುದ್ಧದ ಸಂದರ್ಭದಲ್ಲಿ ಚೀನಾದ ಒಬ್ಬ ರಾಜ ಸೈನಿಕರ ಜತೆ ಮರದ ಕೆಳಗೆ ಕೂತು ಸುಧಾರಿಸಿಕೊಳ್ಳುತ್ತಿದ್ದ. ದಾಹ ತಣಿಸಿಕೊಳ್ಳಲು ಬಿಸಿನೀರು ಕುಡಿಯುತ್ತಿದ್ದ. ಆಗ ಎಲ್ಲಿಂದಲೋ ಹಾರಿಬಂದ ಒಣ ಎಲೆಗಳು ಆ ಪಾತ್ರೆಗೆ ಬಿದ್ದವು.

ಕುದಿವ ನೀರಿಗೆ ಎಲೆ ಬಿದ್ದ ಕೂಡಲೇ ಸುವಾಸನೆ ಬೀರತೊಡಗಿತು. ಬಿಸಿಬಿಸಿಯಾದ ಈ ಪೇಯ ಸೇವಿಸಿದ ರಾಜನಿಗೆ ಉತ್ಸಾಹ ಬಂದಹಾಗಾಯಿತು. ಆಗ ಆ ರಾಜ ಈ ಎಲೆಗಳು ಎಲ್ಲಿಂದ ಬಂದವು ಹುಡುಕಿ ಎಂದು ಸೈನಿಕರಿಗೆ ಸೂಚಿಸಿದ. ಆ ಎಲೆ ಇರುವ ಪೊದೆಯನ್ನು ತಮ್ಮ ದೇಶದಲ್ಲೂ ಬೆಳೆಸಲು ಆಜ್ಞಾಪಿಸಿದ. ಅಂದಿನಿಂದ ಚೀನಾ ದೇಶದಲ್ಲಿ ಟೀ ಕುಡಿಯುವ ಪದ್ಧತಿ ಬೆಳೆದುಕೊಂಡು ಬಂತು.

ಚಹಾ ಕುರಿತ ಈ ಕತೆಗಳನ್ನು ಹೇಳಿದ್ದು ಚಹಾ ಕುಡಿಯದ ಹುಡುಗ. ಆದರೆ ಈಗ ಅವರೇ `ಚಹಾ ಮನೆ~ಯ ಮಾಲೀಕ; ಟೀ ಹೌಸ್ನ ಸತ್ಯೇಂದ್ರ ವರ್ಣೀಕರ್.

ಒಂದು ಆರೋಗ್ಯದಾಯಕವಾದ ಟೀ ನಿಮ್ಮ ಸಂಬಂಧವನ್ನು ಮತ್ತಷ್ಟೂ ಗಾಢವಾಗಿಸುತ್ತದೆ. ಟೀ ಕುಡಿಸೋದು ಸಹ ಅತಿಥಿ ಸಂಪ್ರದಾಯದ ಒಂದು ಭಾಗ. ನನಗೆ ಮೊದಲಿನಿಂದಲೂ ಟೀ ಕುಡಿಯುವ ಅಭ್ಯಾಸವಿರಲಿಲ್ಲ. ಆದರೆ ಕಾಲೇಜಿನ ಕ್ಯಾಂಟೀನ್ನಲ್ಲಿ ಸ್ನೇಹಿತರ ಜತೆ ಟೀ ಕುಡಿಯುವುದನ್ನು ರೂಢಿ ಮಾಡಿಕೊಂಡೆ. ನಂತರ ಮನೆಗೆ ಬಂದು ಹೊಸ ಹೊಸ ರೀತಿಯಲ್ಲಿ ಟೀ ಮಾಡುವುದನ್ನು ಕಲಿತೆ. ಅಷ್ಟರ ಮಟ್ಟಿಗೆ ಟೀ ನನಗೆ ಇಷ್ಟವಾಯಿತು.

ಕೊನೆಗೆ ಸ್ನೇಹಿತರ ಜತೆ ಇದೇ ಬಿಸಿನೆಸ್ ಶುರು ಮಾಡಿ ದುಡ್ಡು ಮಾಡುತ್ತೇನೆ ಎಂದಾಗ ಎಲ್ಲರೂ ನಕ್ಕರು. ಟೆಲಿಕಾಂ ಸಾಫ್ಟ್ವೇರ್ ಎಂಜಿನಿಯರಿಂಗ್ ಉದ್ಯೋಗ ಬಿಟ್ಟು ಟೀ ಹೌಸ್ ಶುರು ಮಾಡಿದೆ. ಏನೇ ಮಾಡಿದರೂ ವಿಭಿನ್ನವಾಗಿ ಮಾಡಬೇಕು ಎಂಬುದು ನಾನು ಬೆಳೆಸಿಕೊಡು ಬಂದ ಗುಣ. ಟೀ ಒಂದು ಆರೋಗ್ಯದಾಯಕ ಪಾನೀಯ. ಅಲ್ಲದೆ ಶೇಕಡಾ 80ರಷ್ಟು ಮಂದಿ ಇದನ್ನು ಕುಡಿಯುತ್ತಾರೆ ಎಂದು ಹೇಳುತ್ತಾರೆ `ಮೈ ಟೀ ಹೌಸ್~ ಮಾಲೀಕ ಸತ್ಯೇಂದ್ರ.

ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ ಇರುವ ಅವರ ಟೀ ಹೌಸ್ನಲ್ಲಿ ಕೇವಲ ಟೀ ಅಷ್ಟೇ ಅಲ್ಲ; ಟೀ ಕೇಕ್, ಟೀ ಬಿಸ್ಕತ್, ಟೀ ಕುಕ್ಕೀಸ್ ಕೂಡ ಸಿಗುತ್ತವೆ. ಒಂದಷ್ಟು ಹಾಲು ಸಕ್ಕರೆ ಹಾಕಿಕೊಂಡು ಕುಡಿದರೆ ನಾಲಿಗೆಗೆ ರುಚಿ ಸಿಗಬಹುದು. ಆದರೆ ಹಾಲು ಸಕ್ಕರೆಯ ಮಿಶ್ರಣ ಬೆರೆಸದೆ ಹಾಗೇ ಕುಡಿದರೆ ಅದರ ಆಹ್ಲಾದವೇ ಬೇರೆ. ಟೀ ಚರ್ಮದ ಕಾಂತಿಗೂ ಒಳ್ಳೆಯದು ಎಂಬುದು ಸತ್ಯೇಂದ್ರ ಅವರ ಅನುಭವದ ಮಾತು.

ಅಸ್ಸಾಂ ಮತ್ತು ಡಾರ್ಜಿಲಿಂಗ್ನಲ್ಲಿ ಸಿಗುವ ಟೀ ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಆಗಷ್ಟೇ ಬಿಟ್ಟ ಚಿಗುರೆಲೆಯಿಂದ ಒಣಗಿದ ಎಲೆಯವರೆಗೂ ಔಷಧೀಯ ಗುಣವಿದೆಯಂತೆ. ವೈಟ್ ಟೀ, ಗ್ರೀನ್ ಟೀ, ಎಲ್ಲೋ ಟೀ, ರೆಡ್ ಟೀ, ಬ್ಲ್ಯಾಕ್ ಟೀ ಹೀಗೆ ನಾನಾ ರೀತಿಯ ಟೀಗಳಿವೆ. ಬ್ಲ್ಯಾಕ್ ಟೀ ಕ್ಯಾನ್ಸರ್ ಬರುವುದನ್ನು ತಡೆಗಟ್ಟಿದರೆ, ಗ್ರೀನ್ ಟೀ ದೇಹದಲ್ಲಿರುವ ಕೊಬ್ಬನ್ನು ಕಡಿಮೆಮಾಡುತ್ತದೆ. ರೆಡ್ ಟೀ ಚರ್ಮಕ್ಕೆ ರಂಗು ತುಂಬಿ ಮೃದುಗೊಳಿಸುತ್ತದೆ ಎಂದು ಹೇಳುತ್ತಾರೆ.

ಮೈ ಟೀ ಹೌಸ್ನಲ್ಲಿ ಒಂದು ಕಪ್ ಟೀ ಬೆಲೆ 50ರಿಂದ 500ರೂಪಾಯಿವರೆಗೂ ಇದೆ. ಇದು ನಿಜವಾದ ಟೀ ಎಲೆಯಿಂದ ತಯಾರಿಸಿದಂಥದ್ದು. ಋತುವಿಗೆ ತಕ್ಕಂತೆ ಇಲ್ಲಿ ಟೀ ಸಿಗುತ್ತದೆ. ಮಲ್ಲಿಗೆ, ಗುಲಾಬಿ ಸುವಾಸನೆಯ ಟೀಯಿಂದ ಹಿಡಿದು ಅನೇಕ ಮಸಾಲಾ ಪದಾರ್ಥಗಳಿಂದ ಕೂಡಿದ ಟೀ ಪೌಡರ್ವರೆಗೆ ವಿವಿಧ ಬಗೆಗಳು ಇಲ್ಲಿವೆ.

ಕೇವಲ ಕುಡಿದು ಹೋಗುವುದಲ್ಲದೇ ಮಾರಾಟಕ್ಕೂ ಇವೆಲ್ಲ ಲಭ್ಯ. 25 ಗ್ರಾಂ `ವೈಟ್ ಟೀ~ ಬೆಲೆ 500 ರೂಪಾಯಿ. ಚಹಾ ತೋಟದಿಂದ ಬಿಳಿ ಚಿಗುರೆಲೆಯನ್ನು ತರಿಸಿ ಅದರಿಂದ ತಯಾರಿಸಲಾಗುತ್ತದೆ. ಇದು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಸತ್ಯೇಂದ್ರ.

ಟೀ ಎಂದ ಕೂಡಲೇ ನೀರಿಗಿಂತ ಜಾಸ್ತಿ ಹಾಲಿರಬೇಕು ಎಂದೇ ಭಾವಿಸುತ್ತೇವೆ. ಹಾಲನ್ನು ಬಳಸದೇ ಕುದಿಸಿದ ನೀರಿಗೆ ಒಂದು ಚಿಟಿಕೆ ಟೀ ಪೌಡರ್ ಹಾಕಿ, ತುಂಬಾ ಹೊತ್ತು ಕುದಿಸಿದರೆ ಸ್ವಾದ ಹೆಚ್ಚುತ್ತದೆ ಎಂಬ ಕಲ್ಪನೆಯೂ ಅನೇಕರಿಗೆ ಇದೆ. ಆದರೆ ಹೆಚ್ಚು ಕುದಿಸಿದರೆ ಟೀ ಆಗಲ್ಲ; ಕಷಾಯವಾಗುತ್ತದೆ ಎಂಬುದು ಅವರ ಕಿವಿಮಾತು.

ಇಷ್ಟಕ್ಕೂ ಹಾಲಿನ ಮಿಶ್ರಣದೊಂದಿಗೆ ಟೀ ಕುಡಿಯುವ ಅಭ್ಯಾಸವನ್ನು ನಮಗೆ ಹಂಚಿದ್ದೇ ಬ್ರಿಟಿಷರು. ಭಾರತದಲ್ಲಿ ಅವರು ಆಳ್ವಿಕೆ ನಡೆಸುತ್ತಿದ್ದಾಗ ಚೀನಾಕ್ಕೆ ಹೋಗಿ ಟೀ ಬಗ್ಗೆ ತಿಳಿದುಕೊಂಡು ಬಂದರು. ಆಮೇಲೆ ಭಾರತದಲ್ಲಿ ಇದರ ವ್ಯಾಪಾರಕ್ಕೆ ಮುಂದಾದರಂತೆ.

ಅದಕ್ಕೂ ಮೊದಲು ಹಾಲನ್ನು ಮಾತ್ರ ಸೇವಿಸುತ್ತಿದ್ದ ಭಾರತೀಯರಿಗೆ ಟೀ ಕುಡಿಯುವ ಅಭ್ಯಾಸ ಇರಲಿಲ್ಲ. ಮನೆಮನೆಗೆ ಹೋಗಿ ಹಾಲಿನ ಮಿಶ್ರಣವಿಲ್ಲದೇ ಟೀ ಕುಡಿಯುವುದನ್ನು ಬ್ರಿಟಿಷರು ತಿಳಿಸಿಕೊಡಲು ಮುಂದಾದರು. ಆದರೆ ಯಾರೂ ಇದನ್ನು ಸೇವಿಸಲು ಸಿದ್ಧರಾಗದೇ ಇದ್ದಾಗ ವ್ಯಾಪಾರದಲ್ಲಿ ಕುಟಿಲರಾಗಿದ್ದ ಬ್ರಿಟಿಷರು ಕೊನೆಗೆ ಹಾಲಿನ ಮಿಶ್ರಣದೊಂದಿಗೇ ಚಹಾ ಸೇವಿಸುವ ಚಟಕ್ಕೆ ಜೈ ಅಂದುಬಿಟ್ಟರು.

ನಂತರ ಇದೇ ನಮ್ಮ ಬೆಳಿಗ್ಗೆ, ಸಂಜೆಯ ಪೇಯವಾಗಿ ಬಿಟ್ಟಿತು ಎಂಬುದು ಸತ್ಯೇಂದ್ರ ಅವರು ಕೊಡುವ ವಿವರಣೆ.

ಕಾಫಿ ಮಾರುವ ಮಳಿಗೆಗಳು ದೊಡ್ಡ ಮಟ್ಟದಲ್ಲಿ ಗ್ರಾಹಕರಿಗೆ ಗಾಳ ಹಾಕಿದ ದಿನಗಳಲ್ಲೇ ಮಂಗಳೂರು ಮೂಲದ ಸತ್ಯೇಂದ್ರ ಅವರಿಗೆ ಕೇವಲ ಟೀ ಮಾರುವ `ಹೌಸ್~ ಪ್ರಾರಂಭಿಸುವ ಯೋಚನೆ ಹೊಳೆಯಿತು. ಅದೀಗ ಫಲವನ್ನೂ ನೀಡಿದೆ. ದಿನಕ್ಕೆ ಕನಿಷ್ಠ ನೂರು ಗ್ರಾಹಕರು ಇಲ್ಲಿಗೆ ಬಂದು ಚಹಾದ ಸುಖ ಉಂಡು ಹೋಗುತ್ತಾರೆ.

ಅವರಲ್ಲಿ ಸಿನಿಮಾ ನಟ-ನಟಿಯರು, ರಾಜಕಾರಣಿಗಳು ಕೂಡ ಇದ್ದಾರೆನ್ನುವ ಸತ್ಯೇಂದ್ರ ಖಾಸಗೀತನ ಕಾಪಾಡುವ ಕಾರಣಕ್ಕೆ ಅವರ ಹೆಸರನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ದಿನಕ್ಕೆ ಸರಾಸರಿ ಮುನ್ನೂರು ಮುನ್ನೂರೈವತ್ತು ಗ್ರಾಹಕರು ಸತ್ಯೇಂದ್ರ ಅವರ ಚಹಾ ಸವಿಯನ್ನು ಅನುಭವಿಸುತ್ತಾರೆ.

ವಾರಾಂತ್ಯದಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಕಾಫಿ ಶಾಪ್ಗಳಂತೆ ಇಲ್ಲೂ ಮುಕ್ತ ಹರಟೆಗೆ ಅವಕಾಶವಿದ್ದು, ಎಷ್ಟು ಹೊತ್ತು ಬೇಕಾದರೂ ಗ್ರಾಹಕರು ಚಹಾದೊಟ್ಟಿಗೆ ವಿಚಾರ ವಿನಿಮಯ ನಡೆಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.