ಬೆಂಗಳೂರು:‘ಪ್ರಪಂಚದಲ್ಲಿ ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳು ಕೊಲೆಗಡುಕ ಭಾಷೆಗಳು. ಈ ಮೂರು ಭಾಷೆಗಳು ಸ್ಥಳೀಯ ಭಾಷೆಗಳೊಂದಿಗೆ ಮಿಳಿತಗೊಂಡು ಭಾಷೆಯ ನೈಜತೆಯನ್ನು ಕೆಡಿಸುತ್ತಿವೆ’ ಎಂದು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ದೂರಿದರು.

ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರವು ಮಹಾವೀರ ಜೈನ್ ಕಾಲೇಜಿನ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕನ್ನಡ ಭಾಷೆಯಲ್ಲಿ ಎರವಲು ಪದಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಮೊಘಲರ ಆಡಳಿತಾವಧಿಯಲ್ಲಿ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳ ಹಲವು ಪದಗಳು ಕನ್ನಡದ ಆಡಳಿತ ಭಾಷೆಯಲ್ಲಿ ಸೇರ್ಪಡೆಗೊಂಡವು. ಅದಾಲತ್ನಂತಹ ಪದಗಳು ಇದಕ್ಕೆ ಪ್ರಮುಖ ಉದಾಹರಣೆ. ಬಸ್ಸು, ಕಾರು, ಪೆನ್ನು... ಇಂತಹ ಇತರೆ ಎರವಲುಗೊಂಡ ಇಂಗ್ಲಿಷ್ ಪದಗಳು ಕನ್ನಡದ್ದೇ ಆಗಿ ಹೋಗಿವೆ. ಅವುಗಳನ್ನು ಉಳಿಸಿಕೊಳ್ಳುವುದರೊಂದಿಗೆ ಸೂಕ್ತ ಪರ್ಯಾಯ ಕನ್ನಡ ಪದಗಳನ್ನು ಶೋಧಿಸಬೇಕಿದೆ’ ಎಂದರು.

‘ಕಂಪ್ಯೂಟರ್ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಪರಿಭಾಷಿಕ ಇಂಗ್ಲಿಷ್ ಪದಗಳನ್ನು ಹಾಗೇ ಬಳಸುವುದು ಸೂಕ್ತ. ಈ ಭಾಷೆಯಿಂದ ಆಡುಭಾಷೆಗೆ ತೊಂದರೆಯಾಗುವುದಿಲ್ಲ. ಈ ಪದಗಳನ್ನು ನಂತರದ ದಿನಗಳಲ್ಲಿ ಅನುವಾದ ಮಾಡಬಹುದು. ಭವಿಷ್ಯದಲ್ಲಿ ಸಮೃದ್ಧವಾಗಿ ಉಳಿಯಬಲ್ಲ ನೂರು ಭಾಷೆಗಳಲ್ಲಿ ಕನ್ನಡ ಭಾಷೆಗೆ 30ನೇ ಸ್ಥಾನ ದೊರತಿದೆ. ಯಾವುದೇ ಭಾಷೆಯ ಕುರಿತು ಉನ್ನತ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳು ನಡೆದಾಗ ಮಾತ್ರ ಆ ಭಾಷೆ ಉಳಿಯುತ್ತದೆ’ ಎಂದರು.

‘ಬೇರೆ ಭಾಷೆಗಳಿಂದ ಎರವಲುಗೊಂಡ ಪದಗಳನ್ನು ಉಳಿಸಿಕೊಳ್ಳುವುದರ ಜೊತೆಯಲ್ಲಿ ಅದಕ್ಕೆ ಸೂಕ್ತ ಕನ್ನಡ ಪದವನ್ನು ಭಾಷಾತಜ್ಞರು ಸಂಶೋಧಿಸಬೇಕಿದ್ದು ಇದಕ್ಕೆ ಪೂರಕವಾಗಿ ಜನಸಾಮಾನ್ಯರು ಸ್ಪಂದಿಸಬೇಕು. ಈಚೆಗೆ ಇಂಗ್ಲಿಷ್ ಪದಗಳಿಗೆ ಸೂಕ್ತವಲ್ಲದ ಅನುವಾದಿತ ಕನ್ನಡ ಪದಗಳನ್ನು ಬಳಸುತ್ತಿದ್ದೇವೆ. ‘ಗ್ಲೋಬಲೈಸೇಷನ್’ಗೆ ಸೂಕ್ತ ಪದ ಜಾಗತೀಕರಣ ಅಲ್ಲ ಜಗತೀಕರಣ’ ಎಂದು ಉದಾಹರಣೆ ಸಹಿತ ವಿವರಿಸಿದರು.

‘ಇಡೀ ವಿಶ್ವದಲ್ಲಿ ಹತ್ತು ಸಾವಿರ ಭಾಷೆಗಳು ಅಸ್ತಿತ್ವದಲ್ಲಿದೆ. ಎಥ್ನೋಲಾಗ್ ಎಂಬ ಅಮೆರಿಕದ ಭಾಷಾ ಅಧ್ಯಯನ ಸಂಸ್ಥೆ 6,990 ಭಾಷೆಗಳನ್ನು ವಿಸ್ತಾರವಾಗಿ ಅಧ್ಯಯನ ಮಾಡಿದೆ. ಈ ಸಂಸ್ಥೆಯು ಕ್ರೈಸ್ತ ಧರ್ಮವನ್ನು ವಿವಿಧ ಭಾಷೆಗಳಲ್ಲಿ ಪ್ರಚಾರ ಮಾಡುವ ಸಲುವಾಗಿಯೇ ಇಷ್ಟು ಭಾಷೆಗಳ ಕುರಿತು ಅಧ್ಯಯನ ಕೈಗೊಂಡಿದೆ’ ಎಂದು ಹೇಳಿದರು.
ಬೆಂಗಳೂರಿನಲ್ಲಿಯೇ ಶೇ 50ರಷ್ಟು ಮಂದಿ ಕಲಬೆರಕೆಯ ಕನ್ನಡವನ್ನು ಬಳಸುತ್ತಿದ್ದಾರೆ ಎಂದ ಅವರು ಖಾಸಗಿ ವಾಹಿನಿಗಳಲ್ಲಿ ಬಿತ್ತರಗೊಳ್ಳುವ ಅಡುಗೆ ಕಾರ್ಯಕ್ರಮಗಳಲ್ಲಿ ಮಹಿಳೆಯರು ಬಳಸುವ ಕಂಗ್ಲೀಷ್ ಭಾಷೆಯ ಕುರಿತು ಹಾಸ್ಯ ಚಟಾಕಿ ಹಾರಿಸಿದರು.

ಜಾನಪದ ವಿದ್ವಾಂಸ ಪ್ರೊ.ಬಸವರಾಜ ಮಲ್ಲಶೆಟ್ಟಿ ಮಾತನಾಡಿ, ‘ಬದುಕು ಮತ್ತು ಭಾಷೆಗೆ ನಿಕಟವಾದ ಸಂಬಂಧವಿದೆ. ಭಾಷೆ ಯಾರ ಅಪ್ಪಣೆಯಿಲ್ಲದೇ ಬದಲಾವಣೆಗಳನ್ನು ಬಯಸುತ್ತದೆ. ಎರವಲುಗೊಳ್ಳುವ ಪದಗಳೊಂದಿಗೆ ಆ ಭಾಷೆಯ ಸಂಸ್ಕೃತಿ ಮತ್ತು ಸಂಸ್ಕಾರಗಳು ಎರವಲುಗೊಳ್ಳುತ್ತದೆ’ ಎಂದರು.

ಕಾಲೇಜಿನ ಮುಖ್ಯ ಮಾರ್ಗದರ್ಶಕಿ ಪ್ರೊ.ಶಾಂತಮ್ಮಣ್ಣಿ ಮಾತನಾಡಿ, ‘ಬ್ರಿಟಿಷರು ಸ್ವಾತಂತ್ರ್ಯಪೂರ್ವದಲ್ಲಿ ಬಿತ್ತಿದ ವಿಷಬೀಜಗಳಲ್ಲಿ ಸಂಸ್ಕೃತ ಭಾಷೆ ನಮ್ಮದಲ್ಲ ಎಂಬುದು ಒಂದು. ಸಂಸ್ಕೃತ ಹಾಗೂ ಇತರೆ ಭಾಷೆಗಳ ಕುರಿತು ಆಳವಾದ ಅಧ್ಯಯನ ಕೈಗೊಂಡಾಗ ಮಾತ್ರ ಎರವಲು ಪದಗಳ ಕುರಿತು ಸ್ಪಷ್ಟ ಚಿತ್ರಣ ದೊಕುತ್ತದೆ. ಇದರತ್ತ ಯುವ ಪೀಳಿಗೆ ಗಮನ ಹರಿಸಬೇಕು’ ಎಂದು ತಿಳಿಸಿದರು. ಕೇಂದ್ರದ ಪಾಚಾರ್ಯ ಡಾ.ವಿ.ಶರತ್ಚಂದ್ರನ್ ನಾಯರ್, ಸಂಯೋಜಕಿ ಡಾ.ವಿಜಯಲಕ್ಷ್ಮೀ ಎ.ಪಾಟೀಲ್, ಕಾಲೇಜಿನ ಪ್ರಾಚಾರ್ಯ ಮೈಥೀಲಿ ರಾವ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.