ಇಂಡೊನೇಷ್ಯಾ: ಬಾಲಿಯಲ್ಲಿ ಭೂಕಂಪ

ಬಾಲಿ (ಇಂಡೊನೇಷ್ಯಾ): ಇಂಡೊನೇಷ್ಯಾದ ಬಾಲಿಯಲ್ಲಿ ಗುರುವಾರ 6.0ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಆಗಿದೆ. ಕನಿಷ್ಠ 50 ಮಂದಿ ಗಾಯಗೊಂಡಿದ್ದು ಅನೇಕ ಮಂದಿಯ ಮೂಳೆ ಮುರಿದಿದೆ ಮತ್ತು ತಲೆಗೆ ಪೆಟ್ಟಾಗಿದೆ.
ಕೆಲವು ದೇವಸ್ಥಾನಗಳು ಮತ್ತು ಶಾಲೆಯ ಗೋಡೆಗಳು ಮತ್ತು ಮೇಲ್ಛಾವಣಿ ಪುಡಿಪುಡಿಯಾಗಿವೆ ಮತ್ತು ಮನೆಗಳ ಮೇಲ್ಛಾವಣಿ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ರೇಡಿಯೊ ಮತ್ತು ಟಿವಿ ಕೇಂದ್ರಗಳಿಗೆ ತಿಳಿಸಿದ್ದಾರೆ.
ಸುನಾಮಿ ಅಲೆಗಳ ಏಳುವಷ್ಟು ಭೂಕಂಪನ ಪ್ರಬಲವಾಗಿಲ್ಲದಿದ್ದರೂ ನೆರೆಯ ಜಾವಾ ಮತ್ತು ಲಾಮ್ಬಾಕ್ ದ್ವೀಪಗಳಲ್ಲೂ ಭೂಮಿ ಅದುರಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.