ಸೋಮವಾರ, ಮೇ 10, 2021
20 °C

ಇಂದಿನಿಂದ ಆರೋಗ್ಯ ಸೇವೆ ಸಹಾಯವಾಣಿ 104 ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ತುರ್ತು ಆರೋಗ್ಯ ಸೇವೆ ಮಾಹಿತಿ ನೀಡುವ `ಆರೋಗ್ಯ ಸಹಾಯವಾಣಿ 104' ಇದೇ 19ರಿಂದ ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಆರೋಗ್ಯ ಖಾತೆ ಸಚಿವ ಯು.ಟಿ. ಖಾದರ್ ತಿಳಿಸಿದರು.ನಗರಕ್ಕೆ ಮಂಗಳವಾರ ಪ್ರಥಮ ಬಾರಿಗೆ ಭೇಟಿ ನೀಡಿದ್ದ ಅವರು ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಈ ವಿಷಯ ತಿಳಿಸಿದರು. ಅನಾ ರೋಗ್ಯಕ್ಕೆ ತುತ್ತಾದವರಿಗೆ ಆರೋಗ್ಯ ಸೇವೆ ಒದಗಿಸಲು ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.ಸಹಾಯವಾಣಿ 104 ಉಚಿತ ಕರೆ ಸೌಲಭ್ಯ ಒಳಗೊಂಡಿದ್ದು, ಈ ಸಂಖ್ಯೆಗೆ ಕರೆ ಮಾಡುವ ವರಿಗೆ ರೋಗಿಗಳನ್ನು ಕರೆದೊಯ್ಯಬಹುದಾದ ಹತ್ತಿರದ ಆಸ್ಪತ್ರೆಗಳು, ಆರೋಗ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.ಜತೆಗೆ ಗಂಭೀರ ಸ್ಥಿತಿಯಲ್ಲಿ ರುವ ರೋಗಿಗಳು ತೆಗೆದುಕೊಳ್ಳಬೇಕಾದ ತುರ್ತು ಔಷಧಗಳ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ಗುಡ್ಡಗಾಡು ಪ್ರದೇಶ ಗಳಲ್ಲಿ ವಾಸ ಮಾಡುವವರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ. ಆರೋಗ್ಯ ಸೇವೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.ಗ್ರಾಮೀಣ ಸೇವೆ ಕಡ್ಡಾಯ

ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ದವರು ವೃತ್ತಿ ಆರಂಭಿಸುವ ಮೊದಲು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಸಲ್ಲಿಸಲು ಕಠಿಣ ಕಾನೂನು ರೂಪಿಸಲಾಗಿತ್ತು. ಈ ಕಾನೂನಿನಡಿ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಂಡರೆ ಎಂಬಿಬಿಎಸ್ ವೈದ್ಯರಿಗೆರೂ 1 ಲಕ್ಷ, ಪಿಜಿ ಡಿಪ್ಲೊಮಾ ವೈದ್ಯರಿಗೆರೂ 5 ಲಕ್ಷ ಹಾಗೂ ಸ್ನಾತಕೋತ್ತರ ಪದವೀಧರ ವೈದ್ಯರಿಗೆರೂ 10 ಲಕ್ಷ   ದಂಡ ನಿಗದಿ ಪಡಿಸಲಾಗುತ್ತಿತ್ತು. ಆದರೆ, ಕಳೆದ ಬಾರಿ ವೈದ್ಯಕೀಯ ಶಿಕ್ಷಣ ಪೂರೈಸಿದ ಒಂದು ಸಾವಿರ ಮಂದಿ ಪೈಕಿ 100 ಮಂದಿ ಮಾತ್ರ ಗ್ರಾಮೀಣ ಸೇವೆಗೆ ಸೇರಿದ್ದಾರೆ. ಉಳಿದ 900 ಮಂದಿ ಆರೋಗ್ಯ ಇಲಾಖೆಗೆ ಒಟ್ಟುರೂ 9 ಕೋಟಿ ದಂಡ ಕಟ್ಟಿ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.ಈಗ ದಂಡ ಮೊತ್ತದ ಪ್ರಮಾಣವನ್ನುರೂ 1 ಲಕ್ಷದಿಂದರೂ 10 ಲಕ್ಷಕ್ಕೆ,ರೂ 5 ಲಕ್ಷದಿಂದರೂ 15 ಲಕ್ಷಕ್ಕೆ ಹಾಗೂರೂ 10 ಲಕ್ಷದಿಂದರೂ 25 ಲಕ್ಷಕ್ಕೆ ಏರಿಸಲಾಗಿದೆ. ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕಾನೂನನ್ನು ಪರಿಷ್ಕರಿಸಿ ಹೊಸ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ. ಹೊಸ ಕಾನೂನು ಜಾರಿಗೆ ಬಂದರೆ ವೈದ್ಯರಿಗೆ ಇನ್ನು ಮುಂದೆ ದಂಡ ಪಾವತಿಸಿ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಲಿದೆ ಎಂದು ಖಾದರ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.