ಬೆಂಗಳೂರು: ಬೇಸ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಹೈವ್ ಸ್ಪೋರ್ಟ್ಸ್ ಯುನೈಟೆಡ್ ಜಂಟಿಯಾಗಿ ಏಪ್ರಿಲ್ 15ರಿಂದ 29ರ ವರೆಗೆ ಉದ್ಯಾನನಗರಿಯಲ್ಲಿ ರಾಷ್ಟ್ರೀಯ ಪೋಲೊ ಟೂರ್ನಿ ಆಯೋಜಿಸಿದೆ.

`ನಗರದ ಅಗ್ರಾಮ್ ಆರ್ಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ~ ಎಂದು ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಕಮಲ್ ಮೊಹೆಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಟೂರ್ನಿಯಲ್ಲಿ ಒಟ್ಟು ಮೂರು ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿದ್ದು, ವಿಜೇತ ತಂಡಗಳಿಗೆ ಬೇಸ್ ಪೋಲೊ ಕಪ್, ಟ್ರಿನಿಟಿ ಕಪ್ ಹಾಗೂ ಚಾಂಪಿಯನ್ಸ್ ಕಪ್ ನೀಡಲಾಗುತ್ತದೆ. ಎಎಸ್ಸಿ, ಮುಂಬೈ, ಹೈದರಾಬಾದ್, ಜೋಧ್ಪುರ, ಎನ್ಡಿಎ, ಆರ್ವಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ತಂಡಗಳಾಗಿವೆ. ಹೈದರಾಬಾದ್ ತಂಡ ಇದೇ ಮೊದಲ ಸಲ ಪಾಲ್ಗೊಳ್ಳುತ್ತಿದೆ.

`ಹೈವ್ ಸ್ಪೋರ್ಟ್ಸ್ ಜೊತೆ ಸೇರಿ ನಡೆಸುತ್ತಿರುವ ಮೊದಲ ಕ್ರೀಡಾ ಟೂರ್ನಿ ಇದಾಗಿದ್ದು, ಸಾರ್ವಜನಿಕರಿಗೆ ಪಂದ್ಯ ವೀಕ್ಷಿಸಲು ಮುಕ್ತ ಅವಕಾಶವಿದೆ. ಏಪ್ರಿಲ್ 29ರಂದು ಫೈನಲ್ ಪಂದ್ಯ ನಡೆಯಲಿದೆ~ ಎಂದು ಅವರು ವಿವರಿಸಿದರು.
ಅಂತರರಾಷ್ಟ್ರೀಯ ಪೋಲೊ ಆಟಗಾರರಾದ ಎಂ.ಎಸ್. ಸಂಧು, ರವಿ ರಾಥೋಡ್ ಅವರೂ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಮೇಜರ್ ಜನರಲ್ ಜೈದೀಪ್ ಮಿತ್ರ, ಅಗ್ರಾಮ್ ರೈಡಿಂಗ್ ಮತ್ತು ಪೋಲೊ ಅಕಾಡೆಮಿಯ ಅಧ್ಯಕ್ಷ ಬ್ರಿಗೇಡಿಯರ್ ಅಮರ್ದೀಪ್ ಸಿಂಗ್, ಕಾರ್ಯದರ್ಶಿ ಮೇಜರ್ ಫೈಸ್ ಸಿದ್ಧಿಕಿ, ಹೈವ್ಸ್ಪೋರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಅರೋರಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.