ಮೈಸೂರು: ಜಿಲ್ಲೆಯಲ್ಲಿ ಜೂನ್ 5ರಿಂದ 7ರವರೆಗೆ ಮೋಡ ಕವಿದ ವಾತಾವರಣವಿದ್ದು, ಸಾಧಾರಣದಿಂದ ಭಾರಿ ಮಳೆ ಬರುವ ಸಾಧ್ಯತೆ ಇದೆ ಎಂದು ಮಂಡ್ಯ ಜಿಲ್ಲೆಯ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ತಿಳಿಸಿದೆ.

ಗರಿಷ್ಠ ಉಷ್ಣಾಂಶ 27-28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 19-20 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ 87ರಿಂದ 89ರವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ 74ರಿಂದ 75 ಇರಲಿದ್ದು, ಗಾಳಿಯು ಗಂಟೆಗೆ ಸರಾಸರಿ 6-7 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

ಕೃಷಿ ಮಾಹಿತಿ: ಮಳೆಯ ಸದುಪಯೋಗ ಪಡೆದು, ಮುಂಗಾರು ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ತೊಗರಿ, ಎಳ್ಳು ಹಾಗೂ ಶೇಂಗಾ (ಗೆಜ್ಜೆ) ಬಿತ್ತನೆಯನ್ನು ಮಾಡಬೇಕು. ಸಾಕಷ್ಟು ಮಳೆ ಬಂದಿರುವ ಪ್ರದೇಶಗಳಲ್ಲಿ ಜಮೀನನ್ನು ರೈತರು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ, ಬಿತ್ತನೆಗೆ ಸೂಕ್ತ ರೀತಿಯಲ್ಲಿ ತಯಾರಿಸಿಕೊಳ್ಳ ಬೇಕು.

ಬಿತ್ತನೆ ಮಾಡುವಾಗ ಏಕದಳ ಧಾನ್ಯದ ಬೀಜಗಳಿಗೆ ಅಝೋಸ್ಪಿರಿಲಮ್ ಮತ್ತು ಪಿಎಸ್ಬಿ ಹಾಗೂ ದ್ವಿದಳ ಧಾನ್ಯದ ಬೀಜಗಳಿಗೆ ರೈಝೋಬಿಯಮ್ ಮತ್ತು ಪಿಎಸ್ಬಿಯಿಂದ ಉಪಚಾರ ಮಾಡಿ ಬಿತ್ತಬೇಕು. ಬಿತ್ತುವ ಮುನ್ನ ಎಲ್ಲ ಬೆಳೆಗಳ ಬೀಜಗಳಿಗೆ ಕ್ಯಾಪ್ಟಾನ್ ಅಥವಾ ಥೈರಾಮ್ ಅಥವಾ ಕಾರ್ಬನ್ಡೈಜಿಮ್ ಪುಡಿಯನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ 2 ಗ್ರಾಂ ನಂತೆ ಅಥವಾ ಟ್ರೈಕೊಡರ್ಮಾ 4 ಗ್ರಾಂ ನಂತೆ ಉಪಚರಿಸಿ ಬಿತ್ತುವುದರಿಂದ ಬೆಳೆಗಳಿಗೆ ಮುಂದೆ ತಗುಲಬಹುದಾದ ರೋಗಗಳನ್ನು ತಡೆಗಟ್ಟಬಹುದು.

ಈ ಸಂಶೋಧನಾ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡಬಲ್ಲ ಭಾಗ್ಯ ತಳಿಯ ನುಗ್ಗೆ, ಅರ್ಕಾ ಪ್ರಭಾತ್ ತಳಿಯ ಪಪ್ಪಾಯ ಮತ್ತು ಅಗಸೆ ಸಸಿಗಳು ಮಾರಾಟಕ್ಕೆ ದೊರೆಯುತ್ತವೆ. ಆಸಕ್ತಿ ಯುಳ್ಳ ರೈತರು ದೂರವಾಣಿ: 0821- 2591267, ಮೊಬೈಲ್: 80952- 27713, 99166-20803 ಸಂಪರ್ಕಿಸಬಹುದು ಎಂದು ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.