ಸೋಮವಾರ, ಜೂನ್ 14, 2021
22 °C

ಇಂದು ಮ್ಯಾನ್ಮಾರ್‌ಗೆ ಪ್ರಧಾನಿ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌):  ಬಂಗಾಳಕೊಲ್ಲಿ ಬಹು ಉದ್ದೇಶಿತ ತಾಂತ್ರಿಕ ಹಾಗೂ ಆರ್ಥಿಕ ಸಹಕಾರ (ಬಿಐಎಮ್‌ಎಸ್‌ಟಿಇಸಿ) ಪ್ರಾದೇಶಿಕ ಒಪ್ಪಂದಗಳ ಕುರಿತಾದ ಸಭೆಯಲ್ಲಿ ಭಾಗವಹಿಸಿಲು ಪ್ರಧಾನಿ ಮನ­ಮೋ­ಹನ್‌­ಸಿಂಗ್‌ ಅವರು ಮ್ಯಾನ್ಮಾರ್‌ ರಾಜಧಾನಿ ನೈ ಪಿ ತಾವ್‌ಗೆ ಸೋಮವಾರ ತೆರಳಲಿದ್ದಾರೆ.ಆರು ರಾಷ್ಟ್ರಗಳ ನಡುವಿನ ದ್ವಿ­ಪಕ್ಷೀಯ ಮಾತುಕತೆಯ ನಾಯಕತ್ವ ವಹಿಸಲಿರುವ ಮನಮೋಹನ್‌ ಸಿಂಗ್‌ ಅವರಿಗೆ ಪ್ರಧಾನಿಯಾಗಿ ಬಹುತೇಕ ಇದು ಕೊನೆಯ ವಿದೇಶ ಪ್ರವಾಸ ಎಂದು ಹೇಳಲಾಗಿದೆ.ಮ್ಯಾನ್ಮಾರ್‌ ಅಧ್ಯಕ್ಷ ಯು.ಥೇನ್‌ ಸೇನ್‌ ಸೇರಿದಂತೆ ಬಾಂಗ್ಲಾದೇಶದ ಅಧ್ಯಕ್ಷೆ ಶೇಕ್‌ ಹಸೀನಾ, ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ, ನೇಪಾಳದ ನೂತನ ಪ್ರಧಾನಿ ಸುಶೀಲ್‌ ಕೊಯಿರಾಲ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.ಒಟ್ಟು ಎರಡು ದಿನಗಳ ಕಾಲ ನಡೆಯಲಿರುವ ಪ್ರಾದೇಶಿಕ ಸಹಕಾರ ಒಪ್ಪಂದಗಳ ಕುರಿತಾದ ಮೂರನೇ ಸಭೆ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.