ಮಂಗಳವಾರ, ಜೂನ್ 15, 2021
27 °C

ಇಂದು ವಿಶ್ವ ಜಲ ದಿನ: ನೀರಿಗಾಗಿ ನಿಲ್ಲದ ಪ್ರತಿಭಟನೆ ಸಾಲು

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಇಂದು ವಿಶ್ವ ಜಲ ದಿನ: ನೀರಿಗಾಗಿ ನಿಲ್ಲದ ಪ್ರತಿಭಟನೆ ಸಾಲು

ಕೋಲಾರ: 2012ರ ವಿಶ್ವ ಜಲ ದಿನ ಬಂದಿದೆ. ಈ ಸಂದರ್ಭದಲ್ಲಿ ಇಡೀ ಜಿಲ್ಲೆ ಬೇಸಿಗೆ ಶುರುವಾಗುವ ಮುನ್ನವೇ ನೀರಿನ ಕೊರತೆಯಿಂದ ಬಳಲುತ್ತಿದೆ. 520 ಗ್ರಾಮಗಳಲ್ಲಿ ನೀರಿನ ಕೊರತೆಯ ಸಮಸ್ಯೆ ತೀವ್ರವಾಗಿದೆ. ಹಲವೆಡೆ ಜನರಿಗೆ ನೀರು ಪೂರೈಸಲು ಖಾಸಗಿ ತೋಟಗಳನ್ನೆ ಜಿಲ್ಲಾಡಳಿತ ಅವಲಂಬಿಸಿದೆ.

 

ನಗರ- ಪಟ್ಟಣ  ಪ್ರದೇಶಗಳಲ್ಲೂ ನೀರಿಗೆ ಹಳ್ಳಿಗಳನ್ನೆ ಅವಲಂಬಿಸ ಲಾಗಿದೆ. ಹೊಸ ಕೊಳವೆಬಾವಿಗಳು ವಿಫಲವಾ ಗುತ್ತಿವೆ. ಸಫಲವಾದರೂ ನೀರು ಹೆಚ್ಚು ದಿನ ದೊರಕುವ ಭರವಸೆ ಇಲ್ಲವಾಗಿದೆ.ಇದೇ ವೇಳೆ ನೀರು ಪೂರೈಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತಿ ಆವರಣದಲ್ಲಿ ಗ್ರಾಮಸ್ಥರು ಸತತ ಧರಣಿ, ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ನಡುವೆ, ನಗರಸಭೆಯನ್ನು ನೆಚ್ಚಿಕೊಂಡು ಜನರಿಗೆ ನೀರು ಪೂರೈಸಿದರೆ ಕೋಟ್ಯಂತರ ಹಣ ಸಂದಾಯ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸ ಲಾಗುತ್ತಿದೆ ಎಂದು ಟ್ಯಾಂಕರ್ ಮಾಲೀಕರು ಹಲವು ತಿಂಗಳಿಂದ ನಗರಸಭೆ ಆವರಣದಲ್ಲಿ ಧರಣಿ ನಡೆಸುತ್ತಲೇ ಇದ್ದಾರೆ.ನಗರದ ವಿವಿಧ ಬಡಾವಣೆ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಹೆಚ್ಚಾಗುತ್ತಲೇ ಇವೆ.

ಕುಡಿಯುವ ನೀರಿಗೆ ಬಿಡುಗಡೆ ಮಾಡುವ ಕೋಟ್ಯಂತರ ಹಣವನ್ನು ಸದ್ಬಳಕೆ ಮಾಡಬೇಕು. ಸ್ಪಂದಿಸದ, ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಲಾಗವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಶ್ರೀನಿವಾಸಾಚಾರಿ ಎಚ್ಚರಿಕೆಯನ್ನೂ ಪ್ರಗತಿ ಪರಿಶೀಲನೆ ಸಭೆಯಲ್ಲಿ ನೀಡಿದ್ದಾರೆ.ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರು ಇತ್ತೀಚಿನ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.520 ಗ್ರಾಮ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸ್ತುತ 520 ಹಳ್ಳಿಗಳನ್ನು ನೀರಿನ ವಿಚಾರದಲ್ಲಿ ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ತಿಂಗ ಳಿಂದ ತಿಂಗಳಿಗೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚುತ್ತಿದೆ.

 

ಕೆಲವು ತಿಂಗಳ ಹಿಂದೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ 300 ದಾಟಿತ್ತು. ಆದರೆ ಈಗ 500 ದಾಟಿದೆ. ವಿಪರ್ಯಾಸವೆಂದರೆ ಜಲಸಂಪ ನ್ಮೂಲಗಳ ನಿರ್ವಹಣೆ ಮತ್ತು ಸಂರಕ್ಷಣೆಯಿಂದ ಗಮನ ಸೆಳೆದಿರುವ ಮುಳಬಾಗಿಲು ತಾಲ್ಲೂಕಿನಲ್ಲಿ 120 ಸಮಸ್ಯಾತ್ಮಕ ಗ್ರಾಮಗಳಿವೆ.ಸಮಸ್ಯಾತ್ಮಕ ಗ್ರಾಮಗಳು ಹೆಚ್ಚಿರುವ ಜಿಲ್ಲೆಯ ತಾಲ್ಲೂಕುಗಳ ಪೈಕಿ ಈ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಬಂಗಾರಪೇಟೆ, 3ನೇ ಸ್ಥಾನದಲ್ಲಿ ಮಾಲೂರು ತಾಲ್ಲೂಕು ಇದೆ. ಕೋಲಾರ ತಾಲ್ಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ.ಜಿಲ್ಲೆಯಲ್ಲಿ ಸ್ಥಳೀಯ ಆಡಳಿತದಿಂದ ಕೊರೆದಿ ರುವ ಕೊಳವೆ ಬಾವಿಗಳು ವಿಫಲವಾಗಿರುವ ಮತ್ತು ನೀರಿನ ಕೊರತೆ ಇರುವ ಕಡೆ ಖಾಸಗಿ ತೋಟಗಳಿಂದಲೂ ನೀರು ಪಡೆಯಲಾಗುತ್ತಿದೆ. ಒಟ್ಟು 72 ಗ್ರಾಮಗಳಲ್ಲಿ ಖಾಸಗಿಯವರಿಂದ ನೀರು ಪಡೆದು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದ್ದಾರೆ.ಒಂದು ಹೊಸ ಕೊಳವೆ ಬಾವಿಗೆ 5-6 ಲಕ್ಷ ರೂಪಾಯಿ ಖರ್ಚು ಮಾಡಿದರೂ ನೀರು ಸಿಗುವ ಬಗ್ಗೆ ಖಾತರಿ ಇಲ್ಲ. ಹೀಗಾಗಿ ಮುಂದಿನ 3 ತಿಂಗಳಿಗೆ 60- 70 ಸಾವಿರ ರೂಪಾಯಿ ನೀಡಿ ಖಾಸಗಿಯವರಿಂದ ನೀರು ಪಡೆಯಲು ನಿರ್ಧರಿಸಲಾಗಿದೆ. ಮಾಲೂರಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಜಿಲ್ಲಾಡಳಿತದೊಡನೆ ಉತ್ಸಾಹದಿಂದ ಕೈ ಜೋಡಿಸಿದ್ದಾರೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಕಳೆದ ಡಿಸೆಂಬರ್ ಬಳಿಕ ಕುಡಿಯುವ ನೀರಿಗಾಗಿ ಯೇ ಸುಮಾರು ರೂ 7- 8 ಕೋಟಿ ಖರ್ಚಾಗಿದೆ. 100 ಹೊಸ ಕೊಳವೆಬಾವಿ ಕೊರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆಲವೆಡೆ ಇನ್ನೂ ಆಳಕ್ಕೆ ಕೊರೆಯಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಜನರ ಮುಂದೆ ಇರುವ ಸದ್ಯದ ಪರಿಹಾರ ಎಂದರೆ ಲಭ್ಯವಿರುವ ನೀರನ್ನು ಪೋಲಾಗದಂತೆ ಬಳಸುವುದೇ ಆಗಿದೆ ಎಂಬುದು ಅವರ ಸಲಹೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.