ಇಂದು ಹಾಲಸ್ವಾಮಿ ರಥೋತ್ಸವ

7

ಇಂದು ಹಾಲಸ್ವಾಮಿ ರಥೋತ್ಸವ

Published:
Updated:

ಹೊನ್ನಾಳಿ: ಸುಮಾರು 800 ವರ್ಷಗಳಷ್ಟು ಇತಿಹಾಸ ಹೊಂದಿರುವ ತಾಲ್ಲೂಕಿನ ರಾಂಪುರ ಬೃಹನ್ಮಠದ ಹಾಲಸ್ವಾಮಿಗಳ ಮಠದಲ್ಲಿ ನೂತನ ಮಹಾರಥ ನಿರ್ಮಿಸಲಾಗಿದೆ.ಮತ್ತಿ, ಸಾಗವಾನಿ, ಹೊನ್ನೆ ಹಾಗೂ ಬಾಗೆಮರ ಬಳಸಿ ರಥ ನಿರ್ಮಿಸಲಾಗಿದೆ. ರಥ ನಿರ್ಮಾಣಕ್ಕೆ ` 30 ಲಕ್ಷ ವೆಚ್ಚವಾಗಿದೆ ಎಂದು ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಹೇಳಿದರು.

ಹಳೆಯ ರಥ ಶಿಥಿಲವಾದ್ದರಿಂದ ಹೊಸದಾಗಿ ರಥ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.ಮಾಘ ಶುದ್ಧ ಬಹುಳ ತದಿಗೆ ದಿನ ಅಂದರೆ ಫೆ. 20ಕ್ಕೆ ಬೆಳಿಗ್ಗೆ 5ರಿಂದ 11ರವರೆಗೆ  ಹಾಲಸ್ವಾಮಿ ರಥೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು. ರಥೋತ್ಸವದಂದು ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದ್ದು, 40 ಜೋಡಿ ಮದುವೆ ನಡೆಯಲಿವೆ. ಹೊಟ್ಯಾಪುರದ ಗಿರಿಸಿದ್ಧೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ, ಎಚ್.ಎಂ.ಎಸ್. ಶಾಸ್ತ್ರಿ ಪೌರೋಹಿತ್ಯದಲ್ಲಿ ರುದ್ರಾಭಿಷೇಕ,  ಜಂಗಮ ವಟುಗಳಿಗೆ ಶಿವದೀಕ್ಷೆ ನಡೆಯಲಿವೆ. ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪತ್ರಿಕೆಗೆ ತಿಳಿಸಿದರು.ಹಾಲಸ್ವಾಮಿಗಳ ರಥೋತ್ಸವಕ್ಕೆ 25-30 ಸಾವಿರ ಜನ ಸೇರುತ್ತಾರೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry