ಬಳ್ಳಾರಿ: ಎಲ್ಲ ಜಿಲ್ಲೆಗಳ ರೈತರ ಭೂಮಿಗೆ ನೀರಾವರಿ ಸೌಲಭ್ಯ ನೀಡುವಷ್ಟು ಜಲ ಸಂಪನ್ಮೂಲ ರಾಜ್ಯದಲ್ಲಿದೆ. ಆದರೆ, ಸೂಕ್ತ ನೀರಾವರಿ ಯೋಜನೆಗಳನ್ನು ರೂಪಿಸಿ ರೈತನ ಭೂಮಿಗೆ ನೀರುಣಿಸುವ ಇಚ್ಛಾಶಕ್ತಿ ರಾಜಕೀಯ ಮುಖಂಡರಲ್ಲಿ ಹಾಗೂ ಆಳುವ ಸರ್ಕಾರಗಳಲ್ಲಿ ಇಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರೈತರ ಸಮಾವೇಶದಲ್ಲಿ ಅವರು ಮಾತನಾಡಿದರು.ಕಾವೇರಿ ಮತ್ತು ಕೃಷ್ಣಾ ಜಲ ನ್ಯಾಯ ಮಂಡಳಿಗಳು ನೀರು ಹಂಚಿಕೆ ಕುರಿತು ತೀರ್ಪು ನೀಡಿ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನೀರಾವರಿಯನ್ನೇ ಅವಲಂಬಿಸಿರುವ ಮತ್ತು ಅಳವಡಿಸಿಕೊಂಡಿರುವ ಪ್ರದೇಶಗಳು ಅಧಿಕ ಪ್ರಮಾಣದಲ್ಲಿವೆ.

ಆ ಹಿನ್ನೆಲೆಯಲ್ಲಿ ಕರ್ನಾಟಕ ಉಭಯ ರಾಜ್ಯಗಳಿಗೆ ಅಧಿಕ ಪ್ರಮಾಣದ ನೀರು ನೀಡಬೇಕು ಎಂದು ತಿಳಿಸಿವೆ. ಆದರೆ, ರಾಜ್ಯದ ರೈತರ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಲ್ಲಿ ಅನಗತ್ಯವಾಗಿ ಆ ಎರಡೂ ರಾಜ್ಯಗಳಿಗೆ ನೀರು ನೀಡುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಡಿ.ಬಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಬಜೆಟ್ ಮಂಡನೆ ಸಂದರ್ಭ ಅಧಿಕಾರಕ್ಕಾಗಿ ಕಚ್ಚಾಟ ನಡೆಸಿದ್ದು, ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಇವರೆಲ್ಲರೂ ಚುನಾವಣೆಗೆ ಮುನ್ನ ತಾವೇ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯನ್ನು ಓದಲಿ ಎಂದು ಅವರು ಸವಾಲು ಎಸೆದರು.

ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್ನಲ್ಲಿ ನೀರಾವರಿಗೆಂದೇ ರೂ 20 ಸಾವಿರ ಕೋಟಿ ತೆಗೆದಿರಿಸಿ, ರಾಜ್ಯದ ಮತ್ತಷ್ಟು ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಲ್ಲದೆ, ಎಲ್ಲ ಯೋಜನೆಗಳನ್ನೂ ಪೂರ್ಣಗೊಳಿಸಬೇಕು ಎಂದು ಅವರು ಕೋರಿದರು.

ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದ ಬಿಜೆಪಿ ಮುಖಂಡರು ಪ್ರಸಕ್ತ ಬಜೆಟ್ನಲ್ಲಿ ಎಲ್ಲ ಸಾಲವನ್ನೂ ಮನ್ನಾ ಮಾಡದಿದ್ದರೆ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುವದರಲ್ಲಿ ಸಂಶಯವಿಲ್ಲ. ಇದಕ್ಕೆಲ್ಲ ನೇರವಾಗಿ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ ಚಂದ್ರಶೇಖರ್, ರೈತರೇ ಖುದ್ದಾಗಿ ತಮ್ಮ ಸಾಲ ಮನ್ನಾ ಆಗಿದೆ ಎಂದು ಘೋಷಿಸುವ ಮೂಲಕ ಸಾಲ ಮರುಪಾವತಿ ಮಾಡುವುದನ್ನು ಕೈಬಿಡಬೇಕು ಎಂದು ತಿಳಿಸಿದರು.

ರೈತರ ಆಶೋತ್ತರಗಳಿಗೆ ಸ್ಪಂದಿಸದೆ, ಒಳಜಗಳದಲ್ಲಿ ನಿರತರಾಗಿರುವ ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದಂತೆಯೇ ರೈತವಿರೋಧಿ ಚಟುವಟಿಕೆಯಲ್ಲೇ ತೊಡಗಿದ್ದಾರೆ. ಇಂತಹ ಬೆಳವಣಿಗೆಗಳು ಮುಂದುವರಿದರೆ ಭವಿಷ್ಯದಲ್ಲಿ ಅವರನ್ನು ಯಾರೂ ಬೆಂಬಲಿಸುವುದಿಲ್ಲ ಎಂದರು.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ರಾಜ್ಯವನ್ನಾಳಿದ ಯಾವುದೇ ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿಲ್ಲ. ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಅವರ ನಯ ವಂಚಕತನದಿಂದಾಗಿ ರೈತರು ಸಾಲಗಾರರಾಗಿ ಸಾಯುವಂತಾಗಿದೆ ಎಂದು ಅವರು ದೂರಿದರು.

ವಿಧಾನಸೌಧದಲ್ಲಿ ರೈತರ ಪರ ದನಿ ಎತ್ತುವ ಒಬ್ಬ ಶಾಸಕರೂ ಇಲ್ಲ. ರೈತಸಂಘದವರೇ ನಾಲ್ಕೈದು ಜನ ಶಾಸಕರಾಗಿ ಆಯ್ಕೆಯಾದರೆ, ಸೂಕ್ತ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಬಹುದಾಗಿದೆ. ಆದರೆ, ಚುನಾವಣೆಗಳ ಸಂದರ್ಭ ಹಸಿರು ವಸ್ತ್ರವನ್ನು ಮರೆತು, ರಾಜಕಾರಣಿಗಳ ಕೈಗೊಂಬೆಯಾಗುವ ರೈತರು ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ದುಃಖದ ವಿಷಯ ಎಂದು ರೈತ ಸಂಘದ ಮುಖಂಡ ಜಹೀರುದ್ದಿನ್ ತಿಳಿಸಿದರು.

ಹಸಿದ ಹೊಟ್ಟೆಗೆ ಅನ್ನ ನೀಡುವ ರೈತರು ಬೆಳೆದ ಬೆಳೆಗೆ ಸಕಾಲಕ್ಕೆ ನೀರು ಒದಗಿಸಬೇಕು. ಆದರೆ, ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆ ಮಂಡಳಿಯಲ್ಲಿ ಆಂಧ್ರ ಪ್ರದೇಶದ ಅಧಿಕಾರಿಗಳೇ ಇದ್ದು, ಅವರು ಹೇಳಿದಂತೆಯೇ ಮುನಿರಾಬಾದ್ನಲ್ಲಿರುವ ಕರ್ನಾಟಕದ ಅಧಿಕಾರಿಗಳು ತಲೆದೂಗುತ್ತಾರೆ. ಸಾಮಾನ್ಯ ಜ್ಞಾನವೂ ಇಲ್ಲದ ರಾಜ್ಯದ ಅಧಿಕಾರಿಗಳಿಂದಾಗಿ ಬಲದಂಡೆ ಕಾಲುವೆಯಲ್ಲಿರುವ ರೈತರ ಜಮೀನಿಗೆ ಸಮರ್ಪಕ ನೀರು ದೊರೆಯದಂತಾಗಿದೆ ಎಂದು ರೈತಮುಖಂಡ ದರೂರ ಪುರುಷೋತ್ತಮಗೌಡ ಆರೋಪಿಸಿದರು.

ವಿಧಾನಸೌಧದಲ್ಲಿ ಆಡಳಿತ ನಡೆಸುವವರು ಬಜೆಟ್ ವೇಳೆ ಜಗಳದಲ್ಲಿ ನಿರತರಾಗಿದ್ದಾರೆ. ಅವರು ಮಂಡಿಸುವ ಬಜೆಟ್ ಅವರವರ ಮನೆಯ ಆಸ್ತಿಯಲ್ಲ. ರೈತರಿಂದ, ಜನಸಾಮಾನ್ಯರಿಂದ ಸಂಗ್ರಹಿಸಿದ ತೆರಿಗೆ ಹಣದಿಂದಲೇ ಬಜೆಟ್ ಮಂಡಿಸುವ ಅವರು, ರೈತರ ಏಳ್ಗೆಗೆ ಶ್ರಮಿಸದಿದ್ದರೆ ತಕ್ಕ ಪಾಠ ಕಲಿಸುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದರು.

ನೀರಿನ ಸದ್ಬಳಕೆ ಕುರಿತು ಕರ್ನಾಟಕದ ನೀರಾವರಿ ಅಧಿಕಾರಿಗಳು ನೆರೆಯ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಬೇಕಿದೆ. ಪ್ರತಿ ಹಳ್ಳ, ನದಿ, ಕೊಳ್ಳಕ್ಕೂ ತಡೆಗೋಡೆ, ಬ್ಯಾರೇಜು ನಿರ್ಮಿಸಿರುವ ಆಂಧ್ರದ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸುವ ಮೂಲಕ ಇಲ್ಲಿನ ರೈತರನ್ನು ರಕ್ಷಿಸುವ ಕೆಲಸ ಆಗಬೇಕಿದೆ ಎಂದು ಅವರು ಮನವಿ ಮಾಡಿದರು.

ದರೂರು ಶಾಂತನಗೌಡ, ಚಾಗನೂರಿನ ಮಲ್ಲಿಕಾರ್ಜುನರೆಡ್ಡಿ, ಜಡಿಯಪ್ಪ ದೇಸಾಯಿ, ಚಿಕ್ಕಟಗೇರಿ ನಾಗರಾಜ್, ಚಿಕ್ಕಬ್ಬಿಗೇರಿ ನಾಗರಾಜ್, ಎಂ. ಜಡಿಯಪ್ಪ, ಸದಾಶಿವರೆಡ್ಡಿ ವಣೇನೂರ, ವಸಂತ, ಬಸವರಾಜ್, ರಾಮನಗೌಡ, ವೆಂಕಟೇಶ್, ಕೋಟೇಶರೆಡ್ಡಿ, ಶಂಕರರೆಡ್ಡಿ, ಲೋಕರೆಡ್ಡಿ, ಮಾಬುಸಾಬ್, ಕಾರ್ತಿಕ್, ಕುಂದಾಪುರ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ನಂತರ ರೈತರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ, ಏಪ್ರಿಲ್ 10ರವರೆಗೆ ತುಂಗಭದ್ರಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.