ಒಬ್ಬ ಕ್ರಿಕೆಟ್ ಆಟಗಾರನ ಬದುಕು ಎಷ್ಟೆಲ್ಲಾ ವೇಗವಾಗಿ ಬದಲಾಗಬಹುದು ಹೇಳಿ?
ನವದೆಹಲಿಯ ಆ ಕೊರೆಯುವ ಚಳಿಯಲ್ಲಿ ನಡೆದ ಘಟನೆ ಇನ್ನೂ ಚೆನ್ನಾಗಿ ನೆನಪಿದೆ. 2006ರ ಡಿಸೆಂಬರ್ನಲ್ಲಿ ನಡೆದ ಕರ್ನಾಟಕ ಹಾಗೂ ದೆಹಲಿ ನಡುವಿನ ರಣಜಿ ಕ್ರಿಕೆಟ್ ಪಂದ್ಯ ವರದಿ ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಮೂರನೇ ದಿನದಾಟದ ಆರಂಭಕ್ಕೂ ಮುನ್ನ ದೆಹಲಿ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಸಾವನ್ನಪ್ಪಿದ್ದರು. ಆದರೆ ಅಪ್ಪನ ಮುಖ ನೋಡಿ ತಕ್ಷಣವೇ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಬಂದಿದ್ದ ವಿರಾಟ್ 90 ರನ್ ಗಳಿಸಿದ್ದರು.

`ನೀನು ಆಡುವುದು ಬೇಡ. ಕುಟುಂಬದವರೊಂದಿಗೆ ಇರು~ ಎಂದು ತಂಡದ ಆಡಳಿತ ಅನುಮತಿ ಕೂಡ ನೀಡಿತ್ತು. ಆದರೆ ಆಟದ ಮೇಲಿನ ಪ್ರೀತಿ ಕೊಹ್ಲಿ ಅವರ ಮನಸ್ಸನ್ನು ಬದಲಾಯಿಸಲಿಲ್ಲ. ಆಗ ಅವರಿಗೆ ಕೇವಲ 17 ವರ್ಷ ಅಷ್ಟೆ. ಕೊಹ್ಲಿಯ ಆ ಆಟದಿಂದಾಗಿ ದೆಹಲಿ ತಂಡ ಫಾಲೋಆನ್ನಿಂದ ಪಾರಾಗಿತ್ತು.

ಕೊಹ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬುದು ತಂದೆ ಪ್ರೇಮ್ ಅವರ ಕನಸಾಗಿತ್ತು. ಆದರೆ ಕೊಹ್ಲಿ ಇವತ್ತು ಆ ಕನಸು ದಾಟಿ ಬೆಳೆದಿದ್ದಾರೆ. ಅವತ್ತಿನ ಆ ಆಟವೇ ವಿರಾಟ್ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು. ಏಕೆಂದರೆ ಬಹುಬೇಗನೇ ಅವರು ರಾಷ್ಟ್ರದ ಕ್ರಿಕೆಟ್ನಲ್ಲಿ ಹೆಸರು ಮಾಡಿದರು.

ಅದೇನೇ ಇರಲಿ, 23ನೇ ವಯಸ್ಸಿನಲ್ಲೇ ಕೊಹ್ಲಿಗೆ ಇನ್ನಿಲ್ಲದ ಯಶಸ್ಸು ಸಿಕ್ಕಿದೆ. 2008ರಲ್ಲಿ ಮಲೇಷ್ಯಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಕೊಹ್ಲಿ. ಬಳಿಕ ಏಕದಿನ ವಿಶ್ವಕಪ್ ಗೆಲುವು, ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ, ಈಗ ಉಪನಾಯಕ ಪಟ್ಟ. ಅವರೀಗ ಜಾಹೀರಾತುದಾರರ ಡಾರ್ಲಿಂಗ್ ಎನಿಸಿದ್ದಾರೆ.

ಇದಕ್ಕಿಂತ ದೊಡ್ಡ ಹಾಗೂ ಖುಷಿಯ ವಿಚಾರ ಯಾವುದಿದೆ ಹೇಳಿ? ದುರದೃಷ್ಟವೆಂದರೆ ಇದನ್ನೆಲ್ಲಾ ನೋಡಿ ಖುಷಿಪಡಲು ಕೊಹ್ಲಿ ಅವರ ಅಪ್ಪ ಪ್ರೇಮ್ ಬದುಕಿಲ್ಲ.

`ಇವತ್ತು ನನ್ನ ಮನೆಗೆ ಬರುವೆಯಾ ಕೊಹ್ಲಿ?~

-ಹೋಬರ್ಟ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ ಅಮೋಘ 133 ರನ್ ಬಾರಿಸಿದಾಗ ಗ್ಯಾಲರಿಯಲ್ಲಿದ್ದ ಒಬ್ಬ ಹುಡುಗಿ ಈ ರೀತಿಯ ಒಂದು ಪೋಸ್ಟರ್ ಪ್ರದರ್ಶಿಸುತ್ತಿದ್ದಳು.

ಅನುಮಾನವೇ ಇಲ್ಲ. ಇದೊಂದು ಅದ್ಭುತ ಏಕದಿನ ಇನಿಂಗ್ಸ್. ಆ ಆಟವನ್ನು ಶ್ಲಾಘಿಸದ ವ್ಯಕ್ತಿಗಳಿಲ್ಲ. 1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ತೆಂಡೂಲ್ಕರ್ ಆಡಿದ ರೀತಿಯನ್ನು ಈ ಆಟ ನೆನಪಿಸಿತು. ಇದೇ ಆಟ ಕೊಹ್ಲಿಗೆ ಉಪನಾಯಕ ಪಟ್ಟ ತಂದುಕೊಡಲು ಕಾರಣವಾಯಿತು. ಸದ್ಯದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು ಎನಿಸಿರುವ ಲಸಿತ್ ಮಾಲಿಂಗ ಅವರನ್ನು ಎದುರಿಸಿದ ಶೈಲಿ ಅವರ ಆಟಕ್ಕೆ ಸಾಕ್ಷಿ.

ಕೊಹ್ಲಿ ಎರಡು ವರ್ಷಗಳಿಂದ ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಸಮಕಾಲೀನ ಆಟಗಾರರಾದ ಸುರೇಶ್ ರೈನಾ, ರೋಹಿತ್ ಶರ್ಮ, ರಾಬಿನ್ ಉತ್ತಪ್ಪ, ಮನೋಜ್ ತಿವಾರಿ, ಪಾರ್ಥಿವ್ ಪಟೇಲ್, ಮುರಳಿ ವಿಜಯ್ ಅವರಿಗಿಂತ ಹೆಚ್ಚು ಭರವಸೆ ಮೂಡಿಸಿದ್ದಾರೆ.

ವಿರಾಟ್ ಕ್ರಿಕೆಟ್ ಆಡಲು ಕಾಲಿಟ್ಟಾಗಲೇ ಅಲ್ಲೊಂದು ಅದ್ಭುತ ಪ್ರತಿಭೆ ಮೊಳಕೆಯೊಡೆದಿತ್ತು. ಆ ಮೊಳಕೆ ಇಂದು ಭಾರತ ಕ್ರಿಕೆಟ್ನ ಭವಿಷ್ಯವಾಗಿ ರೂಪುಗೊಂಡಿದೆ. ಈತ ಗಳಿಸಿದ 9 ಶತಕಗಳ ಪೈಕಿ 8ರಲ್ಲಿ ಭಾರತ ಗೆದ್ದಿದೆ. 2011ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ.
ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿಗಿನ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಶತಕ ಗಳಿಸಿದ ಏಕೈಕ ಆಟಗಾರ ಕೊಹ್ಲಿ. ಈಗ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲೂ ಭಾರತದ ಪರ ಶತಕ ಗಳಿಸಿದ ಏಕೈಕ ಬ್ಯಾಟ್ಸ್ಮನ್. ಈ ಸರಣಿಯಿಂದ ಭಾರತ ಹೊರಬಿದ್ದಿರಬಹುದು. ಆದರೆ 86 ಎಸೆತಗಳಲ್ಲಿ 133 ರನ್ ಗಳಿಸಿದ ರೀತಿಯನ್ನು ಮರೆಯಲು ಸಾಧ್ಯವಿಲ್ಲ.
ಕೊಹ್ಲಿ ಅವರ ವರ್ತನೆ ಬಗ್ಗೆ ಕೆಲ ದೂರುಗಳಿವೆ. ಆದರೆ ಅದು ಅಂಗಳದ ಹೊರಗೆ ಮಾತ್ರ. ಕಣಕ್ಕಿಳಿದರೆ ಅವರ ಚಿತ್ತವೆಲ್ಲಾ ಆಟದತ್ತ. ಬದ್ಧತೆ, ಟೆಂಪರ್ಮೆಂಟ್ ಕೂಡ ಅದ್ಭುತ.

ಅದೆಲ್ಲಾ ಸರಿ, ಆದರೆ ಆಯ್ಕೆದಾರರು ಇಟ್ಟ ಈ ಹೆಜ್ಜೆ ಸರಿಯೇ?
ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಿಂದ ಸೆಹ್ವಾಗ್ ಕೈಬಿಟ್ಟ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಸೆಹ್ವಾಗ್ ವಿಫಲರಾಗಿರುವುದು ಇಡೀ

ವಿಶ್ವ ಕ್ರಿಕೆಟ್ಗೆ ಗೊತ್ತಿದೆ. ಫಾರ್ಮ್ನಲ್ಲಿಲ್ಲದ ಕಾರಣ ಅವರನ್ನು ಕೈಬಿಟ್ಟಿದ್ದೇವೆ ಎಂದು ನೇರವಾಗಿ ಹೇಳಬಹುದಿತ್ತು. ಅದನ್ನು ಬಿಟ್ಟು ಈ ನಾಟಕವೇಕೇ?

ಹಾಗೇ, ಇಷ್ಟು ಬೇಗ ವಿರಾಟ್ಗೆ ಉಪನಾಯಕತ್ವ ಪಟ್ಟ ನೀಡಿದ್ದು ಈಗ ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ರೀತಿ ಮಾಡಬಾರದಿತ್ತು ಎಂದು ಮಾಜಿ ಆಟಗಾರರಾದ ಸುನಿಲ್ ಗಾವಸ್ಕರ್ ಹಾಗೂ ವಾಸೀಮ್ ಅಕ್ರಮ್ ಕೂಡ ನುಡಿದಿದ್ದಾರೆ.

ನಿಜ, ಕೊಹ್ಲಿ ಪ್ರತಿಭೆ ಬಗ್ಗೆ ಅನುಮಾನ ಬೇಡ. ಆದರೆ ಹಿರಿಯ ಆಟಗಾರರು ಇದ್ದರೂ ಕೊಹ್ಲಿ ಅವರತ್ತ ಆಯ್ಕೆದಾರರು ಗಮನ ಹರಿಸಿದ್ದು ತಂಡದಲ್ಲಿ ಮತ್ತಷ್ಟು ಒಡಕಿಗೆ ಕಾರಣವಾಗುವ ಸಾಧ್ಯತೆ ಇದೆ. ಏಕೆಂದರೆ ತಂಡದಲ್ಲಿ ಸೆಹ್ವಾಗ್, ಗಂಭೀರ್, ರೈನಾ ಹಾಗೂ ರೋಹಿತ್ ಅವರಂಥ ಹಿರಿಯ ಆಟಗಾರರು ಇದ್ದಾರೆ. ಆಯ್ಕೆದಾರರ ಈ ಹೆಜ್ಜೆ ಈ ಆಟಗಾರರ ಅಸಮಾಧಾನಕ್ಕೆ ಕಾರಣವಾಗದೇ ಇರದು. ಬಹಿರಂಗವಾಗಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸದೇ ಇರಬಹುದು. ಆದರೆ ಈ ಒಳಜಗಳ ತಂಡದ ಹಿತಕ್ಕೆ ಧಕ್ಕೆಯಾದರೆ?

ದೋನಿ ಬಳಿಕ ಗಂಭೀರ್ ಅಥವಾ ರೈನಾ ತಂಡ ಮುನ್ನಡೆಸುತ್ತಾರೆ ಎಂಬ ಲೆಕ್ಕಾಚಾರಗಳು ಹರಿದಾಡುತ್ತಿದ್ದವು. ಆದರೆ ಯಾವಾಗ ಸೆಹ್ವಾಗ್ ಹಾಗೂ ಗೌತಿ ನಾಯಕ ದೋನಿಯನ್ನು ಎದುರು ಹಾಕಿಕೊಂಡರೋ ಅಲ್ಲಿಗೆ ಅವರ ಕಥೆ ಮುಗಿಯಿತು. ಆಸ್ಟ್ರೇಲಿಯಾದಲ್ಲಿ ನಡೆದ ಒಳಜಗಳದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದ್ದು ದೋನಿ.

ತಮಗೆ ನಾಯಕತ್ವದ ಜವಾಬ್ದಾರಿ ಕೊಟ್ಟಾಗಲೆಲ್ಲಾ ಗಂಭೀರ್ ಯಶಸ್ವಿಯಾದ ಉದಾಹರಣೆ ಇದೆ. ಆದರೂ ಅವರನ್ನು ಕಡೆಗಣಿಸಲಾಗಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಆಕಸ್ಮಾತ್ ದೋನಿಗೆ ಗಾಯವಾದರೆ ತಂಡ ಮುನ್ನಡೆಸುವ ಅವಕಾಶ ಕೊಹ್ಲಿಗೆ ಒಲಿಯಲಿದೆ.

ರೈನಾ ಹಾಗೂ ರೋಹಿತ್ಗಿಂತಲೂ ಈ ಕೊಹ್ಲಿ ಕಿರಿಯ ಆಟಗಾರ. ರೈನಾ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಚೊಚ್ಚಲ ಟೆಸ್ಟ್ ನಲ್ಲಿಯೇ ಶತಕ ಗಳಿಸಿದ್ದರು. ಅವರು 2005ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿದ್ದರು.

ಇತ್ತೀಚಿನ ದಿನಗಳಲ್ಲಿ ಅವರಿಂದ ಉತ್ತಮ ಆಟ ಮೂಡಿಬರುತ್ತಿಲ್ಲ. ಆದರೂ ಆಯ್ಕೆದಾರರು ಈಗ ತೆಗೆದುಕೊಂಡಿರುವ ನಿಲುವು ಹಿರಿಯ ಆಟಗಾರ ರೈನಾ ಅವರ ಅಸಮಾಧಾನಕ್ಕೆ ಕಾರಣವಾಗದೇ ಇರದು.

ಆದರೆ ಕೇವಲ ಮೂರು ವರ್ಷಗಳ ಹಿಂದೆ ಮೊದಲ ಏಕದಿನ ಪಂದ್ಯ ಆಡಿದ್ದ ವಿರಾಟ್ `ಕ್ರಿಕೆಟ್ ಕ್ರೇಜ್~ ದೇಶದ ತಂಡದ ಉಪ ನಾಯಕ. ನಾಯಕ ಪಟ್ಟವೂ ದೂರ ಇಲ್ಲ. ಇದಕ್ಕಿಂತ ಮತ್ತೊಂದು ಖುಷಿಯ ವಿಚಾರ ಯಾವುದಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.